ಬ್ರೇಕಿಂಗ್ ನ್ಯೂಸ್
23-01-22 06:08 pm HK Desk news ಕರ್ನಾಟಕ
ತುಮಕೂರು, ಜ.23 : ಕಾರು ನೋಡಲು ಶೋರೂಂಗೆ ಬಂದಿದ್ದ ಯುವಕನಿಗೆ ಶೋರೂಂ ಸಿಬ್ಬಂದಿ ಅವಮಾನಿಸಿದ್ದನ್ನೇ ನೆಪವಾಗಿಟ್ಟು ಒಂದೇ ಗಂಟೆಯಲ್ಲಿ ಹತ್ತು ಲಕ್ಷ ಹಣ ತಂದಿಟ್ಟು ಕಾರು ನೀಡುವಂತೆ ಪಟ್ಟುಹಿಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯದ ಕೆಂಪೇಗೌಡ ಎಂಬ ಯುವಕ ತುಮಕೂರಿನ ಮಹೇಂದ್ರ ಕಾರು ಶೋರೂಮ್ ಗೆ ಕಾರು ನೋಡಲು ಬಂದಿದ್ದ. ಆದರೆ ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಕೆಲಸ ಮಾಡುವ ಸೇಲ್ಸ್ ಏಜೆಂಟ್ ಒಬ್ಬ ಕೆಂಪೇಗೌಡಗೆ ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ.. ಕಾರು ತೆಗೆದುಕೊಳ್ಳಲು ಬಂದಿದ್ದೀಯ ಎಂದು ಅವಮಾನಿಸಿದ್ದರು ಎನ್ನಲಾಗಿದೆ.
ಆದರೆ ಕಾರ್ ಶೋರೂಮ್ ನ ಸೇಲ್ಸ್ ಏಜೆಂಟ್ ಅವಮಾನಿಸಿದ್ದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಒಂದು ಗಂಟೆಯಲ್ಲಿ ದುಡ್ಡು ತರುವೆ, ಕಾರನ್ನು ನೀಡುತ್ತೀರಾ ಎಂದು ಚಾಲೆಂಜ್ ಹಾಕಿದ್ದಾರೆ. ಇದಕ್ಕೆ ಒಪ್ಪಿದ ಶೋರೂಮ್ ಸೇಲ್ಸ್ ಏಜೆಂಟ್ ಮೊದಲು ದುಡ್ಡು ತನ್ನಿ.. ಇಂದೇ ಕಾರು ನೀಡುತ್ತೇನೆ ಎಂದಿದ್ದ. ಬಳಿಕ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದುಕೊಟ್ಟು ಕಾರು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಶೋರೂಂ ಸೇಲ್ಸ್ ಏಜೆಂಟ್ ಹತ್ತು ಲಕ್ಷ ಹಣ ತಂದಿಟ್ಟಿದ್ದನ್ನು ಗಾಬರಿಯಾಗಿದ್ದಲ್ಲದೇ ತನ್ನ ಮಾತು ಬದಲಿಸಿ, ಎರಡು ಮೂರು ದಿನದಲ್ಲಿ ಕಾರು ನೀಡುತ್ತೇವೆ ಎಂದು ಉಲ್ಟಾ ಹೊಡೆದಿದ್ದಾರೆ.
ಇದರಿಂದ ಕೆರಳಿದ ಕೆಂಪೇಗೌಡ, ಅವಮಾನಿಸುವ ಮುಂಚೆ ಇದರ ಅರಿವು ನಿಮಗೆ ಇರಬೇಕಾಗಿತ್ತು. 10 ಲಕ್ಷ ತಂದಿದ್ದೇನೆ. ನನಗೆ ಈಗಲೇ ಕಾರು ಕೊಡಿ ಎಂದು ಪಟ್ಟುಹಿಡಿದಿದ್ದಾನೆ. ಕೆಲಕಾಲ ಶೋರೂಂ ಸಿಬ್ಬಂದಿಗಳಿಗೆ ಹಾಗೂ ಕೆಂಪೇಗೌಡ ಮಧ್ಯೆ ವಾಗ್ವಾದ ಉಂಟಾಗಿದೆ. ಕೊನೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಇಬ್ಬರನ್ನೂ ಕರೆಸಿದ ಪೊಲೀಸರು ಶೋರೂಂ ಸಿಬ್ಬಂದಿಯಿಂದ ಕೆಂಪೇಗೌಡಗೆ ಮುಚ್ಚಳಿಕೆ ಬರೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
In a shocking incident, a Mahindra car showroom salesman in Karnataka was caught taunting a farmer while visiting the showroom. As seen in a video, the salesman was seen verbally taunting the farmer for his attire when he visited the showroom to buy a car. Following the incident, the farmer also filed a complaint with the police.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am