ಬ್ರೇಕಿಂಗ್ ನ್ಯೂಸ್
22-12-21 01:08 pm HK Desk news ಕರ್ನಾಟಕ
ಚಿಕ್ಕಬಳ್ಳಾಪುರ, ಡಿ.22 : ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲು, ಬೋಗಪರ್ತಿ, ಪೆರೇಸಂದ್ರ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಎರಡು ಬಾರಿ ಭೂಕಂಪ ದಾಖಲಾಗಿರುವುದನ್ನು ಭೂಕಂಪ ಮಾಪಕ ಕೇಂದ್ರ ದೃಢಪಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 13 ಕಿಮೀ ಉತ್ತರಕ್ಕೆ ಭೂಕಂಪದ ಕೇಂದ್ರ ಬಿಂದು ಇರುವುದಾಗಿ ಮತ್ತು ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿರುವ ಬಗ್ಗೆ ಹೇಳಿದೆ. ಬೆಳಗ್ಗೆ ಕಂಪನದ ಅನುಭವ ಆಗುತ್ತಲೇ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಬೆಳಗ್ಗೆ 7ರಿಂದ 7.30ರ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿಗಳಲ್ಲಿ ಏನೋ ಸ್ಫೋಟ ಆಗಿರುವ ಶಬ್ದವೂ ಕೇಳಿಬಂದಿತ್ತು. ಭಾರೀ ಶಬ್ದ ಕೇಳಿದ್ದು, ಜನರಿಗೆ ಕಂಪನದ ಅನುಭವವೂ ಆಗಿದೆ. ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಅದನ್ನಗಾರಹಳ್ಳಿ, ರೆಡ್ಡಿಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಶಬ್ದ ಕೇಳಿಬಂದಿದೆ.
ಈ ರೀತಿ ಶಬ್ದ ಕೇಳಿರುವುದನ್ನು ಸ್ಥಳೀಯ ಕೆಲವರು ನೀರಿಲ್ಲದೆ ಒಣಗಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಏರ್ ಬ್ಲಾಸ್ಟ್ ಆಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಹಲವಾರು ಸಮಯಗಳಿಂದ ನೀರು ಇಲ್ಲದೆ ಒಣಗಿ ಹೋಗಿದ್ದ ಬೋರ್ ವೆಲ್ ಗಳಲ್ಲಿ ಗಾಳಿ ನಿಂತಿತ್ತು. ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಯಾಗಿದ್ದು, ಅಂತರ್ಜಲ ಹೆಚ್ಚಾಗಿದ್ದರಿಂದ ಜಲ ಮರುಪೂರಣ ಆಗಿ ಏರ್ ಬ್ಲಾಸ್ಟ್ ಆಗಿರುವ ಸಾಧ್ಯತೆಯಿದೆ ಎನ್ನುತ್ತಿದ್ದಾರೆ. ಈ ರೀತಿಯ ಶಬ್ದ ಹಿಂದೆಯೂ ಕೇಳಿಬಂದಿತ್ತು.
ಆದರೆ ಈ ಬಾರಿ ಇದೇ ಸಂದರ್ಭದಲ್ಲಿ ಭೂಕಂಪ ಆಗಿರುವುದನ್ನೂ ಭೂಗರ್ಭ ಶಾಸ್ತ್ರಜ್ಞರು ದೃಢಪಡಿಸಿದ್ದಾರೆ. ಕಲಬುರಗಿ, ಬೀದರ್ ಭಾಗದ ಕೆಲವೆಡೆಯೂ ಇದೇ ರೀತಿ ಕಂಪನದ ಅನುಭವ ಆಗಿತ್ತು. ಪದೇ ಪದೇ ಭಾರೀ ಸ್ಫೋಟದ ಸದ್ದು ಕೇಳಿದ್ದ ಬಗ್ಗೆ ತಜ್ಞರು ತೆರಳಿ ಅಧ್ಯಯನ ನಡೆಸಿದ್ದರು. ಭೂಕಂಪನ ಅಲ್ಲ ಎನ್ನುವ ವರದಿ ನೀಡಿದ್ದರು. ಆದರೆ, ಈಗ ಚಿಕ್ಕಬಳ್ಳಾಪುರದಲ್ಲಿಯೂ ಭಾರೀ ಮಳೆಯ ಬಳಿಕ ಅದೇ ರೀತಿಯ ಅನುಭವ ಆಗಿರುವುದು ಆತಂಕ ಮೂಡಿಸಿದೆ.
Chikkaballapura district, which is 61 km away from Bengaluru, was hit by two 3.3 magnitude earthquakes on Wednesday morning. The second one happened 5 minutes after the first.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm