ಬ್ರೇಕಿಂಗ್ ನ್ಯೂಸ್
20-12-21 01:52 pm HK Desk news ಕರ್ನಾಟಕ
ಹಾಸನ, ಡಿ.20: ಕುಡಿದ ಮತ್ತಿನಲ್ಲಿದ್ದ ಲಾರಿ ಚಾಲಕನೊಬ್ಬ ಬೈಕಿಗೆ ಡಿಕ್ಕಿಯಾಗಿ ತಾಯಿ, ಮಕ್ಕಳ ದುರಂತ ಸಾವಿಗೆ ಕಾರಣವಾದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದ್ದು ಲಾರಿ ಚಾಲಕ ನಿಯಂತ್ರಣ ತಪ್ಪಿ ನುಗ್ಗಿ ಬಂದಿದ್ದು, ಹಲವು ವಾಹನಗಳಿಗೆ ಡಿಕ್ಕಿಯಾಗಿಸಿದ್ದಾನೆ. ಈ ವೇಳೆ, ಇಬ್ಬರು ಅವಳಿ ಮಕ್ಕಳ ಜೊತೆ ದಂಪತಿ ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದ್ದು, ಮಕ್ಕಳಿಬ್ಬರು ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಮಕ್ಕಳನ್ನು ಮೂರು ವರ್ಷ ಪ್ರಾಯದ ಪ್ರಣತಿ ಮತ್ತು ಪ್ರಣವ್ ಎಂದು ಗುರುತಿಸಲಾಗಿದ್ದು, ದೇಹ ಸ್ಥಿತಿ ಛಿದ್ರವಾಗಿತ್ತು. ತಾಯಿ ಜ್ಯೋತಿ ಕೂಡ ಲಾರಿಯಡಿಗೆ ಬಿದ್ದು ಭೀಕರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಮಕ್ಕಳ ತಂದೆ ಶಿವಾನಂದ್ ಸ್ಥಿತಿಯೂ ಚಿಂತಾಜನಕವಾಗಿದ್ದು ಒಂದೇ ಕುಟುಂಬದ ಪಾಲಿಗೆ ಲಾರಿ ಚಾಲಕ ಜವರಾಯನಾಗಿ ಬಂದೆರಗಿದ್ದಾನೆ.
ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕಿನಲ್ಲಿದ್ದ ನಾಲ್ವರು ಕೂಡ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ಮೇಲಿಂದಲೇ ಲಾರಿ ಚಲಿಸಿದೆ. ಅಲ್ಲದೆ, ಸ್ವಲ್ಪ ದೂರದ ವರೆಗೂ ಲಾರಿ ಚಲಿಸಿದ್ದು ಇವರನ್ನು ಎಳಕೊಂಡೇ ಚಾಲಕ ಹೋಗಿದ್ದಾನೆ. ಬೈಕ್ ಸೇರಿದಂತೆ ಇತರ ನಾಲ್ಕು ವಾಹನಗಳಿಗೆ ಲಾರಿ ಡಿಕ್ಕಿಯಾಗಿತ್ತು. ಕುಡಿದು ಟೈಟ್ ಆಗಿದ್ದ ಲಾರಿ ಚಾಲಕ ಸ್ಥಿಮಿತ ಕಳಕೊಂಡಿದ್ದ. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಮತ್ತು ಸಾರ್ವಜನಿಕರು ಆತನನ್ನು ಹಿಡಿದು ಬಂಧಿಸಿದ್ದಾರೆ.
In a case of drunk driving, a truck driver hit several vehicles before colliding with a bike, killing three of the four riders, in Karnataka’s Hassan district. The three deceased include twins and their mother, police said. The incident took place late on Sunday, December 19. The deceased have been identified as three-year-olds Pranathi and Pranav, and their mother Jyothi. The condition of Shivanand, the deceased children's father, is said to be critical.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm