ಬ್ರೇಕಿಂಗ್ ನ್ಯೂಸ್
14-12-21 03:25 pm HK Desk news ಕರ್ನಾಟಕ
ಬೆಂಗಳೂರು, ಡಿ.14 : ಜೆಡಿಎಸ್ ಪರವಾಗಿ ಭಾರೀ ನಿರೀಕ್ಷೆ ಮೂಡಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಗೆಲುವು ಕಂಡಿದ್ದಾರೆ. ಮಂಡ್ಯದಲ್ಲಿ ಏಳು ಮಂದಿ ಜೆಡಿಎಸ್ ಶಾಸಕರಿದ್ದರೂ, ಪಕ್ಷದ ಅಭ್ಯರ್ಥಿಗೆ ಸೋಲಾಗಿರುವುದು ಜೆಡಿಎಸ್ ನಾಯಕರಿಗೆ ತೀವ್ರ ಮುಖಭಂಗ ಆಗಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಅಪ್ಪಾಜಿ ಗೌಡ ಸ್ಪರ್ಧಿಸಿದ್ದರು.
ಮಂಡ್ಯದಲ್ಲಿ ಗೆಲುವು ಖಚಿತ ಎಂದು ಜೆಡಿಎಸ್ ನಾಯಕರು ಬೀಗುತ್ತಿದ್ದರು. ಆದರೆ, ಅತಿಯಾದ ವಿಶ್ವಾಸವೇ ಪಕ್ಷಕ್ಕೆ ಮುಳುವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪ್ಪಾಜಿ ಗೌಡ, ಜೆಡಿಎಸ್ ಪಕ್ಷ ಸೋಲಿಸಲು ಎಲ್ಲರೂ ಸೇರಿ ಷಡ್ಯಂತ್ರ ಮಾಡಿದ್ರು. ಬಿಜೆಪಿ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕಣದಿಂದಲೇ ನಿವೃತ್ತಿಯಾಗಿದ್ದು, ದೊಡ್ಡ ಪೆಟ್ಟು ನೀಡಿತ್ತು. ಬಿಜೆಪಿ, ಕಾಂಗ್ರೆಸ್, ರೈತ ಸಂಘ ಎಲ್ಲ ಸೇರಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ್ರು. ಇದರ ಜೊತೆಗೆ ನಮ್ಮ ಅತಿಯಾದ ವಿಶ್ವಾಸವೂ ನಮ್ಮ ಸೋಲಿಗೆ ಕಾರಣವಾಯ್ತು ಎಂದು ಹೇಳಿದ್ರು. ಬಿಜೆಪಿ 600 ಮತಗಳನ್ನು ಹೊಂದಿದ್ದು, ಅಷ್ಟು ಮತಗಳನ್ನು ಪಡೆದಿದ್ದರೂ ಸಾಕಿತ್ತು. ಆದರೆ ಬಿಜೆಪಿ ಮತಗಳು ಕಾಂಗ್ರೆಸಿಗೆ ಹೋಗಿದ್ದು ಜೆಡಿಎಸ್ ಸೋಲಿಗೆ ಕಾರಣವಾಯ್ತು ಎಂದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಜು ಕೆ.ಆರ್. ಪೇಟೆ ಕೇವಲ 50 ಮತಗಳನ್ನಷ್ಟೇ ಪಡೆದಿದ್ದಾರೆ.
102 ಮತಗಳಿಂದ ಮಡಿಕೇರಿ ಸುಜಾ ಗೆಲುವು
ಕೊಡಗು ಏಕಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ. ಇಲ್ಲಿ ನೇರ ಸ್ಪರ್ಧೆ ಇದ್ದರೂ, ಬಿಜೆಪಿ ಪರವಾಗಿಯೇ ಹೆಚ್ಚು ಮತಗಳಿದ್ದವು. ಹಾಗಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಮತ್ತು ಸುಜಾ ಕುಶಾಲಪ್ಪ ನಡುವೆ ತುರುಸಿನ ಸ್ಪರ್ಧೆ ನಡೆದಿದ್ದು 102 ಮತಗಳಿಂದ ಸುಜಾ ಕುಶಾಲಪ್ಪ ಗೆಲುವು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ತೆರೆದ ಜೀಪಿನಲ್ಲಿ ಸಾಗಿ ವಿಜಯೋತ್ಸವ ನಡೆಸಿದ್ದಾರೆ.
ಆರು ಮತಗಳಿಂದ ಚಿಕ್ಕಮಗಳೂರು ಗೆದ್ದ ಬಿಜೆಪಿ
ತೀವ್ರ ಸ್ಪರ್ಧೆ ಉಂಟಾಗಿದ್ದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ ಆರು ಮತಗಳಿಂದ ಗೆಲುವು ಸಾಧಿಸಿದ್ದಾರೆ. ನಿಕಟ ಸ್ಪರ್ಧೆ ಏರ್ಪಟ್ಟಿದ್ದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮರು ಎಣಿಕೆಗಾಗಿ ಆಗ್ರಹ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಾಲಿಗೆ ಅಸಿಂಧು ಮತಗಳೇ ಮುಳುವಾಯ್ತಾ ಅನ್ನುವ ಮಾತು ಕೇಳಿಬಂದಿದೆ. ಒಟ್ಟು ಮತ 2410 ಆಗಿದ್ದು, ಅದರಲ್ಲಿ 39 ಮತಗಳು ಅಸಿಂಧುವಾಗಿದ್ದವು. ಏಳು ಸದಸ್ಯರು ಮತ ಹಾಕಿರಲಿಲ್ಲ. ಹೀಗಾಗಿ ಅಸಿಂಧು ಮತಗಳೇ ಕಾಂಗ್ರೆಸಿನ ಶಾಂತಾ ಗೌಡ ಸೋಲಿಗೆ ಕಾರಣವಾಯ್ತಾ ಅನ್ನುವ ವಿಶ್ಲೇಷಣೆ ನಡೆದಿದೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಆಪ್ತನಿಗೆ ಗೆಲುವು
ಶಿವಮೊಗ್ಗ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಬಿಜೆಪಿ ಅಭ್ಯರ್ಥಿ ಡಿ.ಎಸ್. ಅರುಣ್ ಗೆಲುವು ಕಂಡಿದ್ದಾರೆ. ಶಿವಮೊಗ್ಗದಲ್ಲಿ ಒಟ್ಟು 4158 ಮತಗಳು ಚಲಾವಣೆಯಾಗಿದ್ದು, 2208 ಮತಗಳು ಬಿಜೆಪಿ ಪರವಾಗಿ ಬಿದ್ದಿವೆ. ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಈ ಹಿಂದೆ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ನಾರಾಯಣ ಸ್ವಾಮಿ ವಿರುದ್ಧ ಕಾಂಗ್ರೆಸಿನ ಎಸ್.ರವಿ ಗೆಲುವು ಕಂಡಿದ್ದಾರೆ. 700 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಂಡಿದ್ದು ವಿಶೇಷ. ತುಮಕೂರಿನಲ್ಲಿ ಕಾಂಗ್ರೆಸಿನ ಎನ್.ರಾಜೇಂದ್ರ 2269 ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ. ನಿಕಟ ಸ್ಪರ್ಧೆ ಒಡ್ಡಿದ್ದ ಬಿಜೆಪಿಯ ಲೋಕೇಶ್ ಸೋಲು ಕಂಡಿದ್ದಾರೆ. ಧಾರವಾಡ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸಿನ ಸಲೀಂ ಅಹ್ಮದ್ ಸುಲಭದ ಗೆಲುವು ಕಂಡಿದ್ದಾರೆ. ಎರಡನೇ ಅಭ್ಯರ್ಥಿಯಾಗಿ ಬಿಜೆಪಿಯ ಪ್ರದೀಪ್ ಶೆಟ್ಟರ್ ಗೆದ್ದಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಸಮಬಲದ ಸಾಧನೆ
ಒಟ್ಟಾರೆ, 25 ಕ್ಷೇತ್ರಗಳ ಪೈಕಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು, ಕಾಂಗ್ರೆಸ್ ಕೂಡ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಹಾಸನದಲ್ಲಿ ಸೂರಜ್ ರೇವಣ್ಣ ಒಬ್ಬರ ಗೆಲುವಿನೊಂದಿಗೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಒಂದು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡಿದೆ. ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಗೆಲುವಿನ ನಗೆ ಬೀರಿದ್ದಾರೆ. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 2865 ಮತಗಳನ್ನು ಪಡೆದು ಗೆದ್ದರೆ, ಬಿಜೆಪಿಯ ರಘು ಕೌಟಿಲ್ಯ (1919) ಮತ್ತು ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ(1780) ಮಧ್ಯೆ ಎರಡನೇ ಅಭ್ಯರ್ಥಿ ಗೆಲುವಿಗಾಗಿ ಪೈಪೋಟಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಗೆಲುವು ಸಾಧ್ಯತೆ ಹೆಚ್ಚಿದೆ.
Counting of votes for Karnataka Legislative Council Elections are underway today and the results are likely to clear by afternoon. The voting for the biennial election to Karnataka Legislative Council’s 25 seats from 20 Local Authorities’ Constituencies was held on December 10 and around above 99 per cent voter turnout was recorded during the polls. There were a total of 90 candidates whose fates have been sealed in the ballot box. These include 20 each from BJP and Congress, six from JD(S), 33 Independents and the rest from smaller parties.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm