ಬ್ರೇಕಿಂಗ್ ನ್ಯೂಸ್
03-12-21 07:22 pm HK Desk news ಕರ್ನಾಟಕ
ಚಿತ್ರದುರ್ಗ, ಡಿ.3: ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ತನ್ನ ಕ್ಷೇತ್ರದಲ್ಲಿ ಅಮಾಯಕ ಜನರನ್ನು ಕ್ರಿಸ್ತಿಯನ್ನರಾಗಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಮತಾಂತರ ನಿಷೇಧಕ್ಕೆ ಕಾನೂನು ತರಬೇಕೆಂದು ಆಗ್ರಹಿಸಿದ್ದರು. ತನ್ನ ತಾಯಿಯೂ ಈ ಮತಾಂತರ ಪೀಡೆಗೆ ಒಳಗಾಗಿದ್ದಾರೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.
ಅದರಂತೆ, ಹೊಸದುರ್ಗ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಮತಾಂತರ ಪ್ರಕ್ರಿಯೆ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ತಾಲೂಕಿನ ಎರಡು ಗ್ರಾಮಗಳಲ್ಲಿ 45 ಕುಟುಂಬಗಳ ಸದಸ್ಯರು ಸ್ವಯಂಪ್ರೇರಿತರಾಗಿ ಮತಾಂತರ ಆಗಿದ್ದಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ಒತ್ತಡ, ಬಲವಂತಕ್ಕೆ ನಾವು ಮತಾಂತರ ಆಗಿಲ್ಲ. ಸ್ವಯಂ ಆಗಿಯೇ ಕ್ರಿಸ್ತಿಯನ್ ಆಗಿ ಮತಾಂತರ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಬಲವಂತದ ಮತಾಂತರ ಪ್ರಕ್ರಿಯೆ ಬಗ್ಗೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮೀಕ್ಷೆ ಕೈಗೊಂಡಿದ್ದರು. ಸಮೀಕ್ಷೆಯಲ್ಲಿ ಕೆಲವು ಕಡೆ ಗ್ರಾಮಸ್ಥರು ಬಲವಂತದ ಮತಾಂತರ ನಡೆಸುತ್ತಿರುವ ಬಗ್ಗೆ ಆರೋಪ ಮಾಡಿದ್ದಾರೆ. ಮತಾಂತರ ಆದವರು, ಕೆಲವು ಆಮಿಷಗಳಿಗೆ ಬಲಿಯಾಗಿ ಸ್ವಧರ್ಮ ತೊರೆದಿದ್ದಾರೆ ಎನ್ನುವ ಮಾತು ಹೇಳಿದ್ದಾರೆ. ಆದರೆ, ಮತಾಂತರ ಆದವರು ಈ ಮಾತನ್ನು ಅಲ್ಲಗಳೆದಿದ್ದಾರೆ. ನಾವು ಯಾವುದೇ ಒತ್ತಡಕ್ಕೆ ಕಟ್ಟುಬಿದ್ದಿಲ್ಲ. ನಮಗೆ ಇಲ್ಲಿ ಮಾನಸಿಕ ಶಾಂತಿ ಸಿಕ್ಕಿದೆ, ಹೀಗಾಗಿ ಮತಾಂತರ ಆಗಿದ್ದೇವೆ ಎಂದಿದ್ದಾರೆ.
ಗೂಳಿಹಟ್ಟಿ ಶೇಖರ್ ಅಧಿವೇಶನದಲ್ಲಿ ತನ್ನ ತಾಯಿಯೇ ಮತಾಂತರ ಆಗಿದ್ದಾರೆಂದು ಹೇಳಿಕೆ ನೀಡಿದ್ದು ದೊಡ್ಡ ಸಂಚಲನ ಉಂಟುಮಾಡಿತ್ತು. ಆನಂತರ, ಶೇಖರ್ ತಾಯಿ ಮತ್ತು ಇತರ 9 ಮಂದಿ ಸ್ವಧರ್ಮಕ್ಕೆ ಮರಳಿದ್ದಾಗಿ ಹೇಳಲಾಗಿತ್ತು. ರಾಜ್ಯ ಸರಕಾರ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಹೇಳಿಕೆ ನೀಡಿದೆ.
Contrary to what Hosadurga BJP MLA Gulihatti Shekhar had claimed, an official survey conducted by Hosadurga tahsildar found that 46 families in two villages in Hosadurga taluk of Chitradurga district accepted Christianity on their own, and were not forced. The families told the official team that nobody forced them to accept Christianity.
03-03-26 08:25 pm
HK News Staffer
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
03-03-26 03:10 pm
HK News Staffer
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
ನಾಲ್ಕು ವರ್ಷಗಳ ಪ್ರೀತಿ ನಿರಾಕರಿಸಿದ ಪ್ರೇಯಸಿ; ವಿರಸ...
03-03-26 10:37 am
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆ ಚತುಷ್ಪಥ ಅಭ...
02-03-26 10:06 pm
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚ...
02-03-26 07:57 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm