ಬ್ರೇಕಿಂಗ್ ನ್ಯೂಸ್
03-11-21 11:20 pm Headline Karnataka News Desk ಕರ್ನಾಟಕ
ತುಮಕೂರು, ನ.3: ಕಳ್ಳರು ಪೊಲೀಸರನ್ನು ಕಂಡರೆ ಓಡಿ ತಪ್ಪಿಸಿಕೊಳ್ಳೋದು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದಾತನೇ ಪೊಲೀಸರನ್ನು ಕಂಡು ಓಡಿಹೋದ ಘಟನೆ ನಡೆದಿದೆ.
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದನ್ನು ತಿಳಿದು ಲಂಚಕೋರ ಪಿಎಸ್ಐ ಓಡಿ ತಪ್ಪಿಸಿಕೊಂಡಿದ್ದಾನೆ. ಓಡಿ ಹೋದ ಪೊಲೀಸ್ ಪೇದೆ ಮತ್ತು ಎಸ್ಐ ಅವರನ್ನು ಹಿಡಿಯಲು ಸಾರ್ವಜನಿಕರೇ ಸೇರಿ ಬೆನ್ನತ್ತಿದ್ದಾರೆ.

ಗುಬ್ಬಿ ತಾಲೂಕಿನ ಸಿ.ಎಸ್.ಪುರ ಠಾಣೆಯ ಪಿ.ಎಸ್.ಐ ಸೋಮಶೇಖರ್ ಓಡಿ ತಪ್ಪಿಸಿಕೊಂಡು ಬಳಿಕ ಸಿಕ್ಕಿಬಿದ್ದಿದ್ದಾನೆ. ಭ್ರಷ್ಟಾಚಾರ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ನಡುವೆ ಅಧಿಕಾರಿಗಳು ಮಧ್ಯಾಹ್ನ ಊಟ ಮಾಡುತ್ತಿದ್ದ ವೇಳೆ ಪಿಎಸ್ಐ ಠಾಣೆಯಿಂದ ಬೈಕ್ ಏರಿ ಪರಾರಿಯಾಗಿದ್ದಾನೆ. ಮೊಬೈಲ್ ಫೋನ್ ಜೊತೆಗೆ ಪಿಎಸ್ಐ ಪರಾರಿಯಾಗಿದ್ದು ಆಬಳಿಕ ಜನ್ನೇನಹಳ್ಳಿ ಎಂಬಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ನಡುವೆ, ಹಿಂದಿನಿಂದಲೇ ಅಧಿಕಾರಿಗಳು ಬೆನ್ನಟ್ಟಿದ್ದು , ಪಿಎಸ್ಐ ಸೋಮಶೇಖರ್ ನಡುದಾರಿಯಲ್ಲಿ ಯುನಿಫಾರ್ಮ್ ಬಿಚ್ಚಿ ಅರೆ ಬೆತ್ತಲಾಗಿ ಓಡಿದ್ದಾನೆ. ಕೊನೆಗೆ, ಅಧಿಕಾರಿಗಳು ಮತ್ತು ಸಾರ್ವಜನಿಕರು ಸೇರಿ ಪಿಎಸ್ಐ ನನ್ನು ಬಂಧಿಸಿದ್ದು ಹೊಸ ಬಟ್ಟೆ ಕೊಡಿಸಿ ಮರಳಿ ಠಾಣೆಗೆ ಕರೆತಂದಿದ್ದಾರೆ.



ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬಾತನ ವಿರುದ್ಧ ದೂರು ದಾಖಲಾಗಿತ್ತು. ಕಳೆದ ತಿಂಗಳು 22ರಂದು ದೂರು ದಾಖಲಾಗಿದ್ದು ವಿಚಾರಣೆ ನಡೆಸಿ ಬಿಟ್ಟಿದ್ದರು. ಇದೇ ವೇಳೆ, ಆತನ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕೋರ್ಟ್ ನಲ್ಲಿ ಜಾಮೀನು ಪಡೆದ ಬಳಿಕ ಚಂದ್ರಣ್ಣ ಕಾರು ಬಿಡಿಸಿಕೊಳ್ಳಲು ಬಂದಿದ್ದ. ಆದರೆ ಕಾರು ಬಿಟ್ಟುಕೊಡಲು ಪಿಎಸ್ಐ ಸೋಮಶೇಖರ್, 28 ಸಾವಿರ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಠಾಣೆಯ ಮುಖ್ಯ ಪೇದೆ ನಯಾಜ್ ಅಹಮದ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ನಡುವೆ, 12 ಸಾವಿರ ಲಂಚವನ್ನೂ ಪಡೆದಿದ್ದು ಉಳಿದ 16 ಸಾವಿರ ಹಣವನ್ನು ಇಂದು ನೀಡುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪಿಎಸ್ಐ ಲಂಚ ಬೇಡಿಕೆ ಇಟ್ಟಿದ್ದ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದು ಎಸಿಬಿ ಇನ್ಸ್ ಪೆಕ್ಟರ್ ವಿಜಯಲಕ್ಷ್ಮೀ ನೇತೃತ್ವದಲ್ಲಿ ನಡೆದ ದಾಳಿ ನಡೆಸಲಾಗಿತ್ತು.
Tumkuru ACB raid on Police Sub Inspector runs throwing uniform to escape arrest. PSI was alleged of corruption charges and when ACB came to arrest him he flee from the spot throwing his uniform but finally he was arrested.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm