ಬ್ರೇಕಿಂಗ್ ನ್ಯೂಸ್
29-10-21 01:57 pm Bengaluru Correspondent ಕರ್ನಾಟಕ
ಬೆಂಗಳೂರು, ಅ.29: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತೀವ್ರ ಹೃದಯಾಘಾತದಿಂದ ಚಿಂತಾಜನಕ ಸ್ಥಿತಿಗೆ ಒಳಗಾಗಿದ್ದು ಸ್ಯಾಂಡಲ್ ವುಡ್ ಶಾಕ್ ಆಗಿದೆ. ಅಭಿಮಾನಿಗಳು ಆರೋಗ್ಯಕ್ಕಾಗಿ ಪ್ರಾರ್ಥನೆಯ ಮೊರೆ ಹೋಗಿದ್ದಾರೆ. ಈ ನಡುವೆ, ಆಸ್ಪತ್ರೆ ವೈದ್ಯರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಪುನೀತ್ 11.30 ಕ್ಕೆ ಆಸ್ಪತ್ರೆಗೆ ಬಂದಾಗಲೇ ತೀವ್ರ ಹೃದಯಾಘಾತಕ್ಕೆ ಈಡಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಬರುವಾಗಲೇ ದೇಹಸ್ಥಿತಿ ಗಂಭೀರವಾಗಿತ್ತು. ಕೂಡಲೇ ಅವರನ್ನು ಐಸಿಯುಗೆ ಸೇರಿಸಲಾಗಿತ್ತು. ಚಿಕಿತ್ಸೆ ನೀಡಲಾಗುತ್ತಿದ್ದು ಯಾವುದನ್ನೂ ಹೇಳಕ್ಕಾಗಲ್ಲ ಎಂದು ಹೇಳಿದ್ದು ಸ್ಯಾಂಡಲ್ ವುಡ್ ಪಾಲಿಗೆ ಶಾಕ್ ಹೆಚ್ಚಿಸಿದ್ದಾರೆ.
ಆದರೆ, ಪುನೀತ್ ತಮ್ಮ ಆರೋಗ್ಯ, ದೇಹದ ಚೌಕಟ್ಟು ಬಗ್ಗೆ ತೀವ್ರ ಕಾಳಜಿ ವಹಿಸುತ್ತಿದ್ದರು. ಅದಕ್ಕಾಗಿ ದಿನದ ಹೆಚ್ಚಿನ ಸಮಯವನ್ನು ಜಿಮ್ ತರಬೇತಿಗೆ ವಿನಿಯೋಗಿಸುತ್ತಿದ್ದರು. ಪುನೀತ್ ಪಾಲಿಗೆ ಅತಿಯಾದ ಕಾಳಜಿ ಮತ್ತು ಅತಿಯಾದ ವರ್ಕೌಟ್ ಮಾಡುತ್ತಿದ್ದುದೇ ಮುಳುವಾಯ್ತಾ ಅನ್ನುವ ಮಾತು ಕೇಳಿಬಂದಿದೆ.
ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳದಿದ್ದರೆ ಅದು ತನ್ನ ವೃತ್ತಿ ಬದುಕಿಗೆ ಹಿನ್ನಡೆ ಆಗಬಹುದೆನ್ನುವ ಕಾಳಜಿಯಿಂದಾಗಿ ದಿನನಿತ್ಯ ಜಿಮ್ ಮಾಡೋದನ್ನು ಮಾತ್ರ ಬಿಡುತ್ತಿರಲಿಲ್ಲ. ಸದಾಶಿವನಗರದ ತನ್ನ ಮನೆ ಹಾಗು ಕಾಮನ್ ಆಗಿ ಹೋಗುತ್ತಿದ್ದ ಜಿಮ್ ನಲ್ಲಿ ಗಂಟೆಗಟ್ಟಲೇ ಬೆವರು ಹರಿಸುತ್ತಿದ್ದ ಪುನೀತ್ ಕೆಲವೊಮ್ಮೆ ದಿನದ ಬಹುತೇಕ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು. ಈ ಬಗ್ಗೆ ಮನೆಮಂದಿ ಕೂಡ ಅನೇಕ ಬಾರಿ ಅತಿಯಾದ ವರ್ಕೌಟ್ ಮಾಡದಂತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರಂತೆ. ವೈದ್ಯರು ಕೂಡ ಈ ಬಗ್ಗೆ ಅಪ್ಪು ಅವರನ್ನು ಎಚ್ಚರಿಸಿದ್ದರು. ಆದರೆ ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿದ್ದೇ ಈಗ ಅಪ್ಪು ಪಾಲಿಗೆ ಮುಳುವಾಗಿದೆ. ಅಲ್ಲದೆ, ಜಿಮ್ ತರಬೇತಿ ವೇಳೆ ಟ್ರೈನರ್ ಗಳು ಶಕ್ತಿ ವರ್ಧನೆಗಾಗಿ ಪ್ರೋಟೀನ್ ಪುಡಿಗಳನ್ನು ನೀಡುತ್ತಾರೆ ಎನ್ನಲಾಗುತ್ತಿದ್ದು ಆ ರೀತಿಯ ಫುಡ್ ದೇಹದ ಸಂರಚನೆಗೆ ಮುಳುವಾಗುತ್ತೆ ಎನ್ನುತ್ತಾರೆ ವೈದ್ಯರು.
ಸದ್ಯ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪುಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆದರೂ ಕ್ಷಣ ಕ್ಷಣಕ್ಕು ದೇಹಸ್ತಿತಿ ವಿಷಮವಾಗುತ್ತಿದ್ದು ವೈದ್ಯರಿಗೂ ಆತಂಕ ಮೂಡಿಸಿದೆ. ಈ ನಡುವೆ ಪುನೀತ್ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಷಯ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಆಸ್ಪತ್ರೆ ಬಳಿ ದೌಡಾಯಿಸುತ್ತಿದ್ದಾರೆ. ಅಪ್ಪು ಕ್ಷೇಮವಾಗಿ ಹೊರಬನ್ನಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಪ್ಪು ಕುಟುಂಬದಲ್ಲಂತೂ ಶೋಕ ಮಡುಗಟ್ಟಿದೆ. ಆಸ್ಪತ್ರೆ ಆವರಣದಲ್ಲಿ ಚಿತ್ರನಟರ ದಂಡೇ ಸೇರಿದ್ದು ಕಣ್ಣೀರಿಡುತ್ತಿದ್ದಾರೆ. ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅನೇಕ ಸಚಿವರು ಹಾಗೂ ಚಿತ್ರರಂಗದ ಗಣ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
Sandalwood 'Power Star' Puneeth Rajkumar's health condition is serious, according to the latest statement by Vikram Hospital. Puneeth was admitted to Vikram Hospital in Bengaluru at 11:30 am today after he complained of chest pain. "We are trying our best to treat him. His condition is serious. We can't say anything as of now.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm