ಬ್ರೇಕಿಂಗ್ ನ್ಯೂಸ್
24-10-21 04:33 pm Headline Karnataka News Network ಕರ್ನಾಟಕ
ಚಿತ್ರದುರ್ಗ, ಅ.24 : ಕೋವಿಡ್ ಬಂದ ಬಳಿಕ ದೇಹದಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸಲೆಂದು ಇಮ್ಯುನಿಟಿ ಬೂಸ್ಟರ್ ಮಾದರಿಯ ಹಲವಾರು ಔಷಧಿಗಳು ಮಾರುಕಟ್ಟೆಗೆ ಬಂದಿದ್ದವು. ಆದರೆ, ಕಾರ್ಮಿಕ ಇಲಾಖೆಯಿಂದ ಕೊಡಲಾಗಿದ್ದ ಇಮ್ಯೂನಿಟಿ ಬೂಸ್ಟರ್ ಕುಡಿದ ಎಂಟು ಜನ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜ್ಯ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದಾದ್ಯಂತ ಕಟ್ಟಡ ಹಾಗೂ ಇನ್ನಿತರ ಕಾರ್ಮಿಕರಿಗೆ ಇಮ್ಯೂನಿಟಿ ಬೂಸ್ಟರ್ ಇರುವ ಕಿಟ್ ಗಳನ್ನು ವಿತರಣೆ ಮಾಡಿತ್ತು. ಅದರಂತೆ ಕೋಟೆನಾಡು ಚಿತ್ರದುರ್ಗದಲ್ಲೂ ಅ.8ರಂದು ಜಿಪಂ ಸಭಾಂಗಣದಲ್ಲಿ ಸುಮಾರು 800 ಜನ ಕಾರ್ಮಿಕರಿಗೆ ಇಮ್ಯೂನಿಟಿ ಬೂಸ್ಟರ್ ಕಿಟ್ ಗಳನ್ನು ವಿತರಿಸಲಾಗಿತ್ತು. ಆದರೆ ಕಾರ್ಮಿಕರು ಹಬ್ಬವಿದ್ದುದರಿಂದ ಅದನ್ನು ತಕ್ಷಣವೇ ಕುಡಿಯದೇ ನಿನ್ನೆ ಕೆಲವು ಕಡೆ ಕಾಯಿಸಿ ಕುಡಿದಿದ್ದಾರೆ. ಕುಡಿದ ಬೆನ್ನಲ್ಲೇ ವಾಂತಿ ಭೇದಿ ಶುರುವಾಗಿದ್ದು, ಎಲ್ಲರೂ ಒಂದೇ ಬಾರಿಗೆ ಬಂದು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲಾಖೆಯಿಂದ ಕೊಟ್ಟಿರುವ ಡಬ್ಬಗಳ ಪುಡಿಯಲ್ಲಿ ಪ್ಲಾಸ್ಟಿಕ್ ಮಿಶ್ರಣವೂ ಇದೆ. ಕಳಪೆಯಿಂದ ಕೂಡಿರುವ ಮಿಶ್ರಣವನ್ನು ಕೊಟ್ಟಿದ್ದಾರೆ. ಇದನ್ನು ಕುಡಿದ ಮೇಲೆ ನಮಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ಕಟ್ಡಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಆರೋಪಿಸಿದ್ದಾರೆ.
ಎಂಟು ಜನ ಕಾರ್ಮಿಕರು ಇಮ್ಯೂನಿಟಿ ಬೂಸ್ಟರ್ ಕುಡಿದು ಆಸ್ಪತ್ರೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಗುಲ್ಬಾರ್ಗದಿಂದ ಕಾರ್ಮಿಕ ಕಲ್ಯಾಣ ಇಲಾಖೆಯ ಉಪ ಆಯುಕ್ತ ನಾಗೇಶ್ ಆಗಮಿಸಿದ್ದು ಕಾರ್ಮಿಕರ ಆರೋಗ್ಯ ವಿಚಾರಿಸಿದ್ದಾರೆ. ಇಲಾಖೆಯಿಂದ ಕೊಟ್ಟಿರುವ ಇಮ್ಯುನಿಟಿ ಬೂಸ್ಟರ್ ಡಬ್ಬಗಳು ಹಾಗೂ ಅವುಗಳ ಪುಡಿಯನ್ನು ಪರಿಶೀಲಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ, ಸರ್ಕಾರದ ನಿರ್ದೇಶನದಂತೆ ಕಾರ್ಮಿಕರಿಗೆ ಕಿಟ್ ಗಳನ್ನು ನೀಡಲಾಗಿದ್ದು, ರಾಜ್ಯದಲ್ಲಿ ಯಾವುದೇ ದೂರುಗಳು ಬಂದಿಲ್ಲ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಈ ಘಟನೆ ಸಂಭವಿಸಿದೆ. ನಿಖರ ಕಾರಣ ತಿಳಿದು ಬರುವವರೆಗೂ ಉಳಿದ ನಾಲ್ಕೂವರೆ ಸಾವಿರ ಕಿಟ್ ಗಳ ಹಂಚಿಕೆಯನ್ನು ನಿಲ್ಲಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ನಾಗೇಶ್ ತಿಳಿಸಿದ್ದಾರೆ.
Eight workers who drank an Immunity Booster which is given by labour department have been hospitalized.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm