ಬ್ರೇಕಿಂಗ್ ನ್ಯೂಸ್
19-10-21 04:53 pm Headline Karnataka News Network ಕರ್ನಾಟಕ
ಢಾಕಾ, ಅ.19: ಬಾಂಗ್ಲಾದೇಶದಲ್ಲಿ ಹಿಂದುಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ ಮುಂದುವರಿದಿದ್ದು, ಪ್ರವಾದಿ ನಿಂದನೆ ನೆಪ ಇಟ್ಟುಕೊಂಡು ಜನಾಂಗೀಯ ಹಿಂಸೆ ನಡೆದಿದೆ. ಹಿಂದುಗಳನ್ನು ಗುರಿಯಾಗಿಸಿ ಉದ್ರಿಕ್ತರ ಗುಂಪು ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಬಾಂಗ್ಲಾ ರಾಜಧಾನಿ ಢಾಕಾದಿಂದ 255 ಕಿಮೀ ದೂರದ ರಂಗ್ ಪುರ್ ಜಿಲ್ಲೆಯಲ್ಲಿ ಕನಿಷ್ಠ 66 ಹಿಂದುಗಳ ಮನೆಗಳ ಮೇಲೆ ದಾಳಿ ನಡೆಸಿ, ಹಾನಿ ಮಾಡಿದ್ದಾರೆ. ಹಿಂದು ಮೀನುಗಾರನೊಬ್ಬ ಫೇಸ್ಬುಕ್ ನಲ್ಲಿ ಪ್ರವಾದಿಗೆ ಅಗೌರವದಿಂದ ಪೋಸ್ಟ್ ಮಾಡಿದ್ದಾನೆಂಬ ವಿಚಾರದಲ್ಲಿ ಕಿಡಿಗೇಡಿಗಳು ವದಂತಿಗಳನ್ನು ಹರಡಿದ್ದು, ಮುಸ್ಲಿಮ್ ಉದ್ರಿಕ್ತರ ಗುಂಪು ದಾಳಿ ನಡೆಸಿದೆ. ಪೊಲೀಸರು ಜೊತೆಗಿದ್ದರೂ, ಅವರನ್ನು ಲೆಕ್ಕಿಸದೆ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದು ಅಲ್ಲಿದ್ದ ನಿವಾಸಿಗಳ ಮೇಲೆ ಪೀಡನೆ ನೀಡುತ್ತಿದ್ದಾರೆ. ರಂಗ್ ಪುರ್ ಜಿಲ್ಲೆಯ ಪಿರ್ಗಾಂಜ್ ಮಜಿಪಾರ ಎಂಬ ಗ್ರಾಮದಲ್ಲಿ 29 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾಗಿ ಇಂಡಿಯಾ ಟುಡೇ ಹೇಳಿದೆ.



ಮೊನ್ನೆ ಭಾನುವಾರ ನಾನೌರ್ ದಿಘಿ ಸರೋವರದ ಬಳಿಯ ಕುಮಿಲಾ ಎಂಬಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದ ಪೆಂಡಾಲ್ ಮೇಲೆ ಗುಂಪು ದಾಳಿ ನಡೆಸಿದ್ದು, ಅಲ್ಲಿ ಮೂರು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ದುರ್ಗಾ ಪೂಜೆಯ ಪೆಂಡಾಲ್ ನಲ್ಲಿ ಖುರಾನ್ ಪುಸ್ತಕಕ್ಕೆ ಅವಮಾನ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದರು. ಅದನ್ನು ನಂಬಿದ್ದ ಮತಾಂಧರು ದುರ್ಗಾ ಪೂಜೆ ನಡೆಸುತ್ತಿದ್ದ ಜಾಗಕ್ಕೆ ದಾಳಿ ನಡೆಸಿದ್ದರು. ಕುಮಿಲ್ಲಾದ ಹಿಂಸಾಚಾರ ಘಟನೆಯ ಬೆನ್ನಲ್ಲೇ ಚಾಂದ್ ಪುರದ ಹಜೀಗಂಜ್, ಚತ್ತೋಗ್ರಾಮ್ ಜಿಲ್ಲೆಯ ಬನ್ಶಕಾಳಿ, ಕೋಕ್ಸ್ ಬಜಾರಿನ ಪೆಕುವಾ ಎಂಬಲ್ಲಿನ ದೇವಸ್ಥಾನಗಳಿಗೂ ದಾಳಿ ನಡೆಸಲಾಗಿದ್ದು ಜಖಂ ಮಾಡಲಾಗಿದೆ.
ಕಳೆದ ಶುಕ್ರವಾರ ಚಿತ್ತಗಾಂಗ್ ಜಿಲ್ಲೆಯ ನೋಕಾಲಿ ಎಂಬಲ್ಲಿ ಇಸ್ಕಾನ್ ದೇವಸ್ಥಾನದ ಮೇಲೆ ಬೆಂಕಿ ಹಚ್ಚಲಾಗಿತ್ತು. ಇಸ್ಕಾನ್ ಮಂದಿರದಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ 500 ಮಂದಿಯಷ್ಟಿದ್ದ ಉದ್ರಿಕ್ತರ ಗುಂಪು ದಾಳಿ ನಡೆಸಿದ್ದು, ಬೆಂಕಿ ಹಚ್ಚಿದ್ದಲ್ಲದೆ, ಅಲ್ಲಿದ್ದ ಇಸ್ಕಾನ್ ಅರ್ಚಕರ ಮೇಲೆ ಚೂರಿಯಿಂದ ಇರಿದು ಕೊಲ್ಲಲಾಗಿತ್ತು.
Amid outrage over the incidents of temple vandalism in Bangladesh, a group of assailants vandalised at least 66 homes and torched 20 homes of Hindus in the country on Sunday over an alleged blasphemous social media post.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm