ಬ್ರೇಕಿಂಗ್ ನ್ಯೂಸ್
14-10-21 01:31 pm Mangaluru Correspondent ಕರ್ನಾಟಕ
ತುಮಕೂರು, ಅ.14: ಎಲ್ಲೋ ಒಂದು ಕಡೆ ಪಕ್ಷ ನನಗೆ ದ್ರೋಹ ಮಾಡ್ತಾ ಇದೆ ಅನ್ನುವ ಮಟ್ಟಕ್ಕೆ ಬಂದಿದೆ. ನಾವು ಕೇಳೋ ವರೆಗೂ ಕೇಳ್ಕೊಂಡು ಬಂದಿದ್ದೇವೆ. ರಾಜ್ಯಾಧ್ಯಕ್ಷರನ್ನ ಕೇಳಿದ್ದೇವೆ, ಮುಖ್ಯಮಂತ್ರಿಗಳನ್ನ ಕೇಳಿದ್ದೇವೆ. ನಮ್ಮನ್ನು ಕಡೆಗಣಿಸಿದ್ರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರೋಲ್ಲ... ಹೀಗೆಂದು ಬಿಜೆಪಿ ರಾಜ್ಯ ಸರಕಾರದ ವಿರುದ್ಧ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಕಿಡಿಕಾರಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ಶಾಸಕ ಮಸಾಲ ಜಯರಾಂ ಪಕ್ಷ ಮತ್ತು ಸರಕಾರ ತನ್ನನ್ನು ಕಡೆಗಣಿಸಿದರೆ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಪಕ್ಷದಲ್ಲಿ ಇರೋಲ್ಲಾ ಅಂದ್ರೆ ರಾಜಕೀಯನೇ ಕಡೆ ಮಾಡ್ತೀವಿ. ನಮ್ಮ ತಾಳ್ಮೆಗೂ ಒಂದು ಸಹಕಾರ ಇರಬೇಕು ಈ ತಿಂಗಳ ಅಂತ್ಯಕ್ಕೆ ಗಡುವು ಕೊಟ್ಟಿದ್ದೇವೆ. ನವಂಬರ್ ಅಂತ್ಯದ ವರೆಗೂ ನೋಡ್ತೀವಿ, ನಾವೇನೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲಾ. ಒಳ್ಳೆಯ ನಿಗಮ ಕೊಡಿ ಅಂತಾ ಕೇಳಿದ್ದೇವೆ, ಕೊಟ್ರೆ ಕೊಡಲಿ ಇಲ್ಲಾ ಅಂದ್ರೆ ನಾವು ಏನ್ ಮಾಡಬೇಕೋ ಮಾಡ್ತೀವಿ. ಜನ ಓಟ್ ಹಾಕಿದ್ದಾರೆ, ಅವರಿಗೆ ತೃಪ್ತಿ ಆಗೋ ಹಾಗೇ ಕೆಲಸ ಮಾಡಿದ್ದೇನೆ.
ಈ ತಿಂಗಳ ಗಡುವು ಕೊಡ್ತೀನಿ ಕೊಟ್ರೆ ಕೊಡಲಿ ಕೊಡಲಿಲ್ಲ ಅಂದ್ರೆ ಬೇಡ.. ನನಗೆ ಹಂಗೇ ಕೆಲಸ ಮಾಡೋ ತಾಕತ್ತಿದೆ ಅಂತಾ ಹೇಳ್ತೀನಿ. ಯಾವುದಾದ್ರು ಸರಿ ಒಳ್ಳೆದೊಂದು ನಿಗಮ ಕೊಡಿ. ಸಾಂಬರು ಅಭಿವೃದ್ಧಿ ನಿಗಮದಲ್ಲಿ ಹತ್ತು ರೂಪಾಯಿ ದುಡ್ಡಿಲ್ಲ. ನಾನೇ ಊಟ ತಗೊಂಡೋಗಿ ಕೊಟ್ಟು ಬರಬೇಕು. ಅಂಥ ನಿಗಮ ನಮಗ್ಯಾಕೆ ಬೇಕು, ಜಿಲ್ಲಾಧ್ಯಕ್ಷ ಸ್ಥಾನವೂ ಬೇಡ. ನಮ್ಮ ಅಹವಾಲು ಕೇಳದಿದ್ದರೆ ನಮ್ಮ ಮುಂದಿನ ನಡೆ ನಾವು ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿಗೆ ಶಾಸಕ ಮಸಾಲ ಜಯರಾಂ ಹೇಳಿದ್ದಾರೆ.
Tumakuru district Turuvekere BJP MLA Masala Jayaram threatens of quitting BJP if good post if not given to him.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm