ಬ್ರೇಕಿಂಗ್ ನ್ಯೂಸ್
11-10-21 04:56 pm Headline Karnataka News Network ಕರ್ನಾಟಕ
ಬೆಂಗಳೂರು, ಅ.11: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಏಳು ಮಂದಿ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಹೆತ್ತವರು ಮತ್ತು ಪೊಲೀಸರು ಆತಂಕಗೊಂಡಿದ್ದಾರೆ.
ಹೆಸರಘಟ್ಟದ ಸೌಂದರ್ಯಾ ಲೇಔಟ್ ನಲ್ಲಿ ನಿವಾಸಿಗಳಾಗಿರುವ ಹತ್ತನೇ ಕ್ಲಾಸ್ ಕಲಿಯುತ್ತಿದ್ದ ಪರೀಕ್ಷಿತ್, ನಂದನ್ ಮತ್ತು ಕಿರಣ್ ಶನಿವಾರ ಬೆಳಗ್ಗೆ ಒಂದೇ ಸಮಯದಲ್ಲಿ ನಾಪತ್ತೆಯಾಗಿದ್ದಾರೆ. ಆನಂತರ ಹೆತ್ತವರು ಸಂಜೆವರೆಗೂ ಹುಡುಕಾಡಿ, ಬಗಲಗುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮನೆಯಲ್ಲಿ ಓದಿನಲ್ಲಿ ಆಸಕ್ತಿ ಇಲ್ಲ. ಹಾಗಾಗಿ ಮನೆ ಬಿಟ್ಟು ಹೋಗುತ್ತಿದ್ದೇವೆಂದು ಬರೆದಿರುವ ಪತ್ರ ಸಿಕ್ಕಿದೆ.
ನಮಗೆ ಕ್ರೀಡೆಯಲ್ಲಿ ತುಂಬ ಆಸಕ್ತಿ ಇದೆ. ನೀವು ಓದುವುದಕ್ಕೆ ಹೆಚ್ಚು ಒತ್ತಡ ಹಾಕಿದರೆ, ಓದಲು ಆಗೋದಿಲ್ಲ. ನಾವು ಕಬಡ್ಡಿಯಲ್ಲಿ ಕೇರಿಯರ್ ಬಿಲ್ಡ್ ಮಾಡಬೇಕೆಂದಿದ್ದೇವೆ. ಕಬಡ್ಡಿಯಲ್ಲಿ ಸಾಧನೆ ಮಾಡುತ್ತೇವೆ. ಅದೇ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಅಲ್ಲದೆ, ಹೆತ್ತವರು ನಮ್ಮನ್ನು ಹುಡುಕುವುದು ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಆಸುಪಾಸಿನ ಸಿಸಿಟಿವಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದೇ ವೇಳೆ, ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಎಜಿಬಿ ಲೇಔಟ್ ನಲ್ಲಿ ಮೂವರು 12 ವರ್ಷ ಪ್ರಾಯದ ಮಕ್ಕಳು ಮತ್ತು ಒಬ್ಬಳು ಕಾಲೇಜು ಓದುತ್ತಿದ್ದ ಯುವತಿ ಮಿಸ್ ಆಗಿದ್ದಾರೆ. ಬಿಸಿಎ ಓದುತ್ತಿದ್ದ ಅಮೃತವರ್ಷಿಣಿ(21), ಮಕ್ಕಳಾದ ರಾಯನ್ ಸಿದ್ಧಾರ್ಥ್, ಚಿಂತನ್ ಮತ್ತು ಭೂಮಿ ನಾಪತ್ತೆಯಾಗಿದ್ದಾರೆ. ಮಕ್ಕಳು ಒಂದೇ ಅಪಾರ್ಟ್ಮೆಂಟ್ ನಿವಾಸಿಗಳಾಗಿದ್ದು ಅಮೃತವರ್ಷಿಣಿ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದಿತ್ಯವಾರ ಬೆಳಗ್ಗಿನಿಂದ ಮಕ್ಕಳು ಮತ್ತು ಯುವತಿ ಕಾಣೆಯಾಗಿದ್ದು, ಈ ಬಗ್ಗೆ ಹೆತ್ತವರು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಒಂದು ಮಗುವಿನ ಮನೆಯಲ್ಲಿ ಪತ್ರ ಸಿಕ್ಕಿದ್ದು, ಟೂತ್ ಬ್ರಶ್, ವಾಟರ್ ಬಾಟಲ್, ಸ್ಲಿಪ್ಪರ್, ನಗದು, ಟೂತ್ ಪೇಸ್ಟ್, ಕ್ರೀಡಾ ಸಾಮಗ್ರಿ ತಗೊಂಡು ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Three class X boys suspected to have run away in Bagalagunte; while three 12-year-olds and one woman who lived in the same building are missing
In two separate incidents, six minor children and a 21-year-old woman went missing in Bagalagunte and Soladevanahalli police station limits. The police are making all efforts to trace the missing children. In the first case reported in Bagalagunte, three Class X boys who studied in the same school, have been missing since early Saturday morning.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm