ಬ್ರೇಕಿಂಗ್ ನ್ಯೂಸ್
09-10-21 10:49 am Headline Karnataka News Network ಕರ್ನಾಟಕ
ಬೆಳಗಾವಿ, ಅ.9 :ಸಿನಿಮೀಯ ರೀತಿಯಲ್ಲಿ ಯುವಕನ ಅಪಹರಿಸಿ ಹತ್ಯೆ ಮಾಡಿ ರೈಲ್ವೇ ಹಳಿಗೆ ತಳ್ಳಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಹತ್ತು ಮಂದಿ ಹಂತಕರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೈಕಾಲು ಕಟ್ಟಿ ರೈಲ್ವೇ ಟ್ರ್ಯಾಕ್ ಮೇಲೆ ತಳ್ಳಿ ರುಂಡ, ಮುಂಡ ಬೇರ್ಪಡಿಸಿ ಆತ್ಮಹತ್ಯೆ ಎಂದು ಬಿಂಬಿಸಲು ಹೋದ ಖತರ್ನಾಕ್ ಸುಪಾರಿ ಕಿಲ್ಲರ್ ಗಳ ಹೆಡೆಮುರಿ ಕಟ್ಟಲು ಬೆಳಗಾವಿ ಖಾಕಿ ಪಡೆ ಯಶಸ್ವಿಯಾಗಿದೆ.
ಅನ್ಯಕೋಮಿನ ಯುವಕನನ್ನು ಪ್ರೀತಿಸಿದಕ್ಕೆ ಯುವತಿ ತಂದೆ ಮತ್ತು ತಾಯಿಯೇ ಸೇರಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದು ಸಾಬೀತಾಗಿದೆ. ಕಳೆದ ಸೆ.28 ರಂದು ಖಾನಾಪುರ ನಿವಾಸಿ ಅರ್ಬಾಜ್ ಮುಲ್ಲಾನ ಶವ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರ್ಬಾಜ್ ಮತ್ತು ಅದೇ ಗ್ರಾಮದ ಶ್ವೇತಾ ಕುಂಬಾರ್ ಎಂಬ ಯುವತಿ ಕಳೆದ ಮೂರ್ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದು ಯುವತಿಯ ಹೆತ್ತವರ ಗಮನಕ್ಕೆ ಬಂದು ಬಹಳಷ್ಟು ಬಾರಿ ಅರ್ಬಾಜ್ ಮುಲ್ಲಾಗೆ ಕರೆಸಿ ಯುವತಿಯ ತಂದೆ ಈಶ್ವರ್ ಕಂಬಾರ ವಾರ್ನಿಂಗ್ ಮಾಡಿದ್ದರು. ಆದ್ರೆ ಪರಸ್ಪರ ಒಪ್ಪಿ ಪ್ರೀತಿಸುತ್ತಿದ್ದ ಪ್ರೇಮಿಗಳು ಮಾತ್ರ ದೂರವಾಗಿರಲಿಲ್ಲ. ಇದರಿಂದ ಬೇಸತ್ತ ಯುವತಿ ತಂದೆ, ಹಿಂದು ಸಂಘಟನೆಯ ಕಾರ್ಯಕರ್ತರಿಗೆ ಸುಪಾರಿ ಕೊಟ್ಟು ಹತ್ತೆಗೆ ಸ್ಕೇಚ್ ಹಾಕಿದ್ದರು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬೆಳಗಾವಿ ಪೊಲೀಸರಿಗೆ ಆರಂಭದಲ್ಲಿ ಕೊಲೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಆದರೆ ಅರ್ಬಾಜ್ ತಾಯಿ ನಜೀಮಾ, ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ತನ್ನ ಮಗ ಪ್ರೀತಿಸುತ್ತಿದ್ದ ಯುವತಿಯ ತಂದೆ, ತಾಯಿ ಮತ್ತು ಕುಟುಂಬಸ್ಥರು ಹಾಗೂ ಶ್ರೀರಾಮಸೇನೆ, ಹಿಂದೂಸ್ತಾನ ಸಂಘಟನೆಯ ಖಾನಾಪುರ ತಾಲೂಕಾ ಅಧ್ಯಕ್ಷ ಪುಂಡಲಿಕ್ ಅಲಿಯಾಸ್ ಮಹಾರಾಜ್ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಅರ್ಬಾಜ್ ಮುಲ್ಲಾನ ಕೊಲೆ ಈಶ್ವರ್ ಕುಂಬಾರ ನೀಡಿದ ಸುಪಾರಿಯಿಂದ ಆಗಿದೆ ಎನ್ನುವ ಸುಳಿವು ಸಿಕ್ಕಿತ್ತು. ಆದರೆ ಸುಪಾರಿ ನೀಡಿದ ಯುವತಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಂತಕರನ್ನು ರಕ್ಷಣೆ ಮಾಡಲು ಮುಂದಾಗಿದ್ದ. ನಾನೇ ಹತ್ಯೆ ಮಾಡಿದ್ದೇನೆ. ಇದರಲ್ಲಿ ಯಾರ ಪಾತ್ರವೂ ಇಲ್ಲಾ ಎಂದು ಹೇಳಿದ್ದ. ಆದರೆ ಖಚಿತ ಮಾಹಿತಿ ಹೊಂದಿದ್ದ ಪೊಲೀಸರು ಎಲ್ಲ ಹತ್ತು ಆರೋಪಿಗಳನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿದಾಗ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬಿದ್ದಿದೆ.
ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣದ ಬಳಿಕ ಮುಸ್ಲಿಂ ಸಂಘಟನೆ ಸೇರಿದಂತೆ ಹತ್ತಾರು ಪ್ರಗತಿಪರ ಚಿಂತಕರು, ಹತ್ಯೆಗೈದ ಹಂತಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದರು. ಆರೋಪಿ ಎಷ್ಟೇ ಪ್ರಭಾವಿ ಇದ್ರೂ ಬಿಡದೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಫಲವಾಗಿ ಬೆಳಗಾವಿ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಿತ್ರ ಅಂದ್ರೆ, ಯುವತಿ ಹೆತ್ತವರಿಬ್ಬರೂ ಪೊಲೀಸ್ ಬಲೆಗೆ ಬಿದ್ದು ಜೈಲು ಸೇರಿದ್ದಾರೆ.
The police in Karnataka Friday arrested 10 people over last month’s murder of a 24-year-old Muslim man who was in a relationship with a Hindu woman.Among those arrested are the woman’s parents Eerappa Basavanni Kumbara, 54, and Susheela Eerappa, 42 and members of a right-wing outfit, Sri Rama Sene Hindustan, allegedly hired by them to kill Arbaz Aftab Mullah, a civil engineering graduate who worked as a car dealer in Belagavi city.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm