ಬ್ರೇಕಿಂಗ್ ನ್ಯೂಸ್
04-10-21 05:44 pm Headline Karnataka News Network ಕರ್ನಾಟಕ
ವಿಜಯಪುರ, ಅ.4: ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿಯೂ ಪ್ರಭಾವಿ ರಾಜಕಾರಣಿಗಳ ಮಕ್ಕಳು, ಸಿನಿಮಾ ನಟರು ಇದ್ದಾರೆ. ಅದೇ ಕಾರಣಕ್ಕೆ ಡ್ರಗ್ಸ್ ಕೇಸ್ ನಲ್ಲಿ ಸೀಮಿತ ತನಿಖೆ ನಡೆದಿದೆ. ಅರ್ಧಕ್ಕೆ ತನಿಖೆ ನಡೆಸಿ ಇಡೀ ಪ್ರಕರಣ ಮುಚ್ಚಿ ಹಾಕಿದ್ದಾರೆ. ಆಳವಾಗಿ ತನಿಖೆ ನಡೆದಿದ್ದರೆ ಕೈ ಶಾಸಕರ ಕೈವಾಡ ಬಯಲಿಗೆ ಬರ್ತಿತ್ತು. ಡ್ರಗ್ಸ್ ಕೇಸ್ ನಲ್ಲಿ ಕಾಂಗ್ರೆಸ್ ಶಾಸಕರೂ ಇದ್ದರು, ಬಿಜೆಪಿಯ ಕೆಲವು ಶಾಸಕರ ಮಕ್ಕಳ ಹೆಸರೂ ಬಂದಿತ್ತು ಎಂದು ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಡ್ರಗ್ಸ್ ಮಾಫಿಯಾ ಭಯೋತ್ಪಾದನೆಯ ಒಂದು ಭಾಗವೇ ಆಗಿದೆ. ಬಾಲಿವುಡ್ ಸೇರಿದಂತೆ ನಮ್ಮ ಸಿನಿಮಾ ನಟರು ಡ್ರಗ್ಸ್ ಮಾಫಿಯಾದ ಭಾಗವಾಗಿದ್ದಾರೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಡ್ರಗ್ಸ್ ಮೂಲಕ ಹಿಂದೂ ಯುವಕರನ್ನ ಟಾರ್ಗೆಟ್ ಮಾಡಲಾಗಿದೆ. ಹಿಂದುಗಳನ್ನ ಡ್ರಗ್ಸ್ ಮಾಫಿಯಾಗೆ ಬಲಿ ಕೊಡಲಾಗ್ತಿದೆ. ಹಿಂದು ಯುವಕರ ಯೌವನವನ್ನು ಹಾಳು ಮಾಡಲಾಗ್ತಿದೆ. ಡ್ರಗ್ಸ್ ಮೂಲಕ ಹಿಂದುಗಳಲ್ಲಿ ನಪುಂಸಕತ್ವ ಹೆಚ್ಚಾಗಿ, ಹಿಂದುಗಳ ಜನಸಂಖ್ಯೆ ಕಡಿಮೆ ಮಾಡಬೇಕು ಎನ್ನುವ ಉದ್ದೇಶ ಇದರ ಹಿಂದಿದೆ. ಇಂಥ ಹಿಡನ್ ಅಜೆಂಡಾ ಇಟ್ಕೊಂಡು ದಂಧೆ ನಡೆಸುತ್ತಿದ್ದರೂ ನಮ್ಮ ಸರ್ಕಾರ ಇದ್ದೂ ಏನು ಮಾಡಲಾಗ್ತಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.


ಶಾರುಖ್ ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಬಂಧನ ಆಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಖಾನ್ ಗಳ ಬಗ್ಗೆ ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ. ಖಾನ್ ಗಳಿಂದ ದೇಶ ಸುರಕ್ಷಿತ ಅಲ್ಲ. ಅವರು ದೇಶ ಬಿಡಲಿ. ಆ ಮಕ್ಕಳೆಲ್ಲ ನೇರವಾಗಿ ಅಫ್ಘಾನಿಸ್ತಾನಕ್ಕೆ ಹೋಗಲಿ. ಸುರಕ್ಷಿತವಾಗಿ ತಾಲಿಬಾನ್ ಕೈಕೆಳಗೆ ನಟನೆ ಮಾಡಿಕೊಂಡು ಇರಲಿ ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಹಿಂದುಗಳು ಸಿನಿಮಾ ನೋಡುತ್ತಾರೆ. ಇವರು ಸಾವಿರಾರು ಕೋಟಿ ಗಳಿಕೆ ಮಾಡುತ್ತಾರೆ. ಅವರ ಮಕ್ಕಳೆಲ್ಲ ಮಜಾ ಮಾಡಿಕೊಂಡು ದೇಶದ ವ್ಯವಸ್ಥೆ ಕೆಡಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಆರ್ಥಿಕ ಸ್ಥಿತಿ ಡ್ರಗ್ಸ್ ಮೇಲೆ ನಿಂತಿದೆ. ಡ್ರಗ್ಸ್ ಕಟ್ ಮಾಡಿದರೆ, ಭಯೋತ್ಪಾದನೆ ತಡೆಯಬಹುದು ಎಂದು ಯತ್ನಾಳ್ ಹೇಳಿದ್ದಾರೆ.
Congress and BJP leaders are involved in drugs case along with film stars sparks another controversial statement Basangouda Patil Yatnal.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
16-07-26 09:26 pm
HK News Staffer
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm
ದೆಹಲಿಯಿಂದ ಕಾರಿನಲ್ಲಿ 5 ಕೋಟಿ ಮೌಲ್ಯದ ಎಂಡಿಎಂಎ ಡ್ರ...
16-07-26 05:10 pm
ಗುರುವಾಯನಕೆರೆ ವಿದ್ಯುತ್ ಸಬ್ ಸ್ಟೇಶನ್ ಬಳಿ ಶವ ಪತ್ತ...
16-07-26 02:29 pm
ಬೃಹತ್ ಖೋಟಾ ನೋಟು ಜಾಲ ಬಯಲಿಗೆ ; ಉಪ್ಪಿನಂಗಡಿ ಬಳಿ ಫ...
16-07-26 02:02 pm