ಬ್ರೇಕಿಂಗ್ ನ್ಯೂಸ್
01-10-21 05:40 pm Source: One India kannada ಕರ್ನಾಟಕ
ಆಹಾರದಲ್ಲಿ, ಬಗೆ ಬಗೆಯ ರೆಸಿಪಿಗಳಲ್ಲಿ ವೈವಿಧ್ಯತೆ ಮತ್ತು ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವು ಪ್ರಯತ್ನಗಳು ಜನರನ್ನು ಹೆಚ್ಚು ಹಾಗೂ ಬಹುಬೇಗ ಆಕರ್ಷಿಸುತ್ತದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆದ ತಿಂಡಿಯೊಂದರ ಬಗ್ಗೆ ನಿಮಗೆ ಹೇಳಲಿದ್ದೇವೆ.
ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಐಸ್ ಕ್ರೀಮ್ ವಿನ್ಯಾಸದ ಇಡ್ಲಿಯನ್ನು ತಯಾರಿಸಿ ವಿಭಿನ್ನತೆ ತೋರಿದೆ. ಎಂಥವರಿಗೂ ನೋಡಿದಾಕ್ಷಣ ಇದು ಇಡ್ಲಿನಾ ಅಥವಾ ಐಸ್ ಕ್ರೀಮಾ ಎಂದು ಸಂಶಯ ಬಾರದೆ ಇರದು!. ನೀವು ಇದರ ರುಚಿ ನೋಡುವವರೆಗೂ ಇದನ್ನು ಇಡ್ಲಿ ಎಂದು ನೀವು ನಂಬುವುದಕ್ಕೆ ಸಾಧ್ಯವೇ ಇಲ್ಲ.
ಹೌದು, ಗ್ರಾಹರನ್ನು ಸೆಳೆಯುವ ದೃಷ್ಟಿಯಿಂದ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ "ಸೇವರಿ ರೈಸ್ ಕೇಕ್" ರೆಸಿಪಿ ವಿಭಿನ್ನವಾಗಿ ತಯಾರಿಸಿದ್ದಾರೆ. ಚಟ್ನಿ ಹಾಗೂ ಸಾಂಬಾರ್ ಜೊತೆಗೆ ಐಸ್ಕ್ರೀಮ್ನಂತೆ ಕಾಣುವ ಈ ಇಡ್ಲಿಯನ್ನು ನೋಡಲು ವಿಚಿತ್ರ ಎನಿಸುತ್ತದೆ. ಗ್ರಾಹರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸೇವರಿ ರೈಸ್ ಕೇಕ್ ಭಾರೀ ವೈರಲ್ ಆಗಿದೆ. ಇದಕ್ಕೆ ಜನರು ತಮ್ಮ ಕಮೆಂಟ್ಗಳ ಮೂಲಕ ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆವಿಷ್ಕಾರ ಹಾಗೂ ತಂತ್ರಜ್ಞಾನ ಎರಡರ ಮಿಶ್ರಣ ಈ ಇಡ್ಲಿ. ಬೆಂಗಳೂರು ಸದಾ ಫುಡ್ ಇನ್ನೋವೆಷನ್ನಲ್ಲಿ ಬೆಸ್ಟ್ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಬಹುತೇಕರಿಗೆ ಈ ವಿಶಿಷ್ಟ ಪ್ರಯೋಗ ಇಷ್ಟವಾದರೆ, ಕೆಲವರು ಇಡ್ಲಿ ಈಗಲೇ ಚೆನ್ನಾಗಿದೆ, ವಿಭಿನ್ನತೆ ಎಂದು ಹೇಳಿ ಇದನ್ನು ಹಾಳು ಮಾಡಬೇಡಿ ಎಂದು ಸಹ ತಮ್ಮ ಪ್ರತಿಕ್ರಿಯೆ ಹೇಳಿದ್ದಾರೆ.
ಏನೇ ಆದರೂ ಹೊ ಹೊಸ ಪ್ರಯತ್ನಗಳು ಮಾತ್ರ ಸದಾ ನಿರಂತರ. ನೀವು ಮನೆಯಲ್ಲಿ ಮಾಡಿ ನೋಡಿ, ಮಕ್ಕಳಿಗೆ ಖಂಡಿತ ಇಷ್ವವಾಗುತ್ತದೆ. ಸಾಧ್ಯವಾದರೆ ರೆಸ್ಟೋರೆಂಟ್ಗೆ ಭೇಟಿ ನೀಡಿ ಈ ವಿಭಿನ್ನ ಇಡ್ಲಿಯನ್ನು ಸವಿಯಿರಿ.
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm