ಬ್ರೇಕಿಂಗ್ ನ್ಯೂಸ್
01-10-21 02:55 pm Headline Karnataka News Network ಕರ್ನಾಟಕ
ಮಂಗಳೂರು, ಅ.1: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವುದರಿಂದ ಆರನೇ ತರಗತಿಯಿಂದ ಮೇಲ್ಪಟ್ಟ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಸಂಘ(ರುಪ್ಸಾ) ಪದಾಧಿಕಾರಿಗಳು ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇದರಂತೆ, ರಾಜ್ಯದಾದ್ಯಂತ ಬಹುತೇಕ ಶಾಲೆಗಳಲ್ಲಿ 6ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿಯನ್ನು ಇಂದಿನಿಂದಲೇ ಆರಂಭಿಸಲಾಗಿದೆ ಎಂದು ರುಪ್ಸಾ ಸಂಘಟನೆಯ ಉಪಾಧ್ಯಕ್ಷ ಡಾ.ಮಂಜುನಾಥ ರೇವಣಕರ್ ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಒಂದು ವಾರದೊಳಗೆ 3ರಿಂದ 5ನೇ ಕ್ಲಾಸ್ ವಿದ್ಯಾರ್ಥಿಗಳಿಗೂ ದಿನ ಪೂರ್ತಿ ಶಾಲೆ ಆರಂಭಿಸಲು ಶಿಕ್ಷಣ ಸಚಿವರು ಒಪ್ಪಿಗೆ ನೀಡಿದ್ದಾರೆ. ದಸರಾ ಬಳಿಕ 1 ಮತ್ತು 2ನೇ ಕ್ಲಾಸ್ ವಿದ್ಯಾರ್ಥಿಗಳಿಗೂ ಶಾಲೆ ಆರಂಭಿಸುವ ಬಗ್ಗೆ ಅಧಿಕೃತ ಆದೇಶ ನೀಡುವುದಾಗಿ ಸಚಿವ ನಾಗೇಶ್ ತಿಳಿಸಿದ್ದಾಗಿ ಮಂಜುನಾಥ್ ರೇವಣಕರ್ ಹೇಳಿದ್ದಾರೆ. 5ನೇ ತರಗತಿಯಿಂದ ಕೆಳಗಿನ ವಿದ್ಯಾರ್ಥಿಗಳಿಗೆ ಶಾಲೆ ಆರಂಭಗೊಂಡಲ್ಲಿ ಕೊರೊನಾ ಸೋಂಕು ಕಂಡುಬಂದ ಎರಡು ವರ್ಷಗಳ ಬಳಿಕ ಮತ್ತೆ ಶಾಲೆ ಯಥಾಸ್ಥಿತಿಗೆ ಬಂದಂತಾಗಲಿದೆ.
ಶಾಲಾ ಬಸ್ ಗಳಿಗೆ 20 ವರ್ಷಕ್ಕೆ ವಿನಾಯ್ತಿ
ಇದೇ ವೇಳೆ, ರುಪ್ಸಾ ಸಂಘಟನೆಯ ವತಿಯಿಂದ 15 ವರ್ಷ ಮೀರಿದ ಬಸ್ಸುಗಳನ್ನು ಗುಜರಿಗೆ ಹಾಕಬೇಕೆಂಬ ಕೇಂದ್ರ ಸರಕಾರದ ಆದೇಶಕ್ಕೆ ಶಾಲೆಗಳ ಬಸ್ಸುಗಳಿಗೆ ವಿನಾಯ್ತಿ ನೀಡಬೇಕೆಂದು ರಾಜ್ಯ ಸಾರಿಗೆ ಸಚಿವರನ್ನು ಭೇಟಿಯಾಗಿ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. 15 ವರ್ಷ ಮೀರಿದ ಶಾಲಾ ಬಸ್ ಗಳನ್ನು ಉಪಯೋಗಿಸಲು ಆರ್ ಟಿಓ ಅಧಿಕಾರಿಗಳು ಬಿಡುತ್ತಿಲ್ಲ. ಶಾಲಾ ಬಸ್ ಗಳು ದಿನಕ್ಕೆ ಕೇವಲ 20ರಿಂದ 30 ಕಿಮೀ ಅಷ್ಟೇ ಓಡುತ್ತವೆ. ಕೊನೆಪಕ್ಷ ಶಾಲಾ ಬಸ್ ಗಳಿಗೆ 25 ವರ್ಷ ಓಡಾಟಕ್ಕೆ ಅನುಮತಿ ನೀಡಬೇಕೆಂದು ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಮನವಿಯನ್ನು ಪರಿಗಣಿಸಿದ ಸಚಿವರು ಶಾಲಾ ಬಸ್ ಗಳಿಗೆ ಮಾತ್ರ ಕನಿಷ್ಠ 15ರಿಂದ 20 ವರ್ಷಕ್ಕೆ ವಿನಾಯ್ತಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ರಾಜ್ಯದ 31 ಜಿಲ್ಲೆಗಳ 1 ಲಕ್ಷ 85 ಸಾವಿರ ಶಾಲೆಗಳಿಗೆ ಅನುಕೂಲವಾಗಲಿದೆ ಎಂದು ರುಪ್ಸಾ ಸಂಘಟನೆ ಹೇಳಿದೆ.
Mangalore Corona fear goes away schools to reopen high schools to have full class. 3rd standard to 5th Std classes to commence in a week.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm