ಬ್ರೇಕಿಂಗ್ ನ್ಯೂಸ್
06-09-20 01:20 pm Bangalore Correspondant ಕರ್ನಾಟಕ
ಬೆಂಗಳೂರು, ಸೆಪ್ಟೆಂಬರ್ 06: ಉದ್ಯಾನದಲ್ಲಿ ಸ್ಪೋರ್ಟ್ಸ್ ಉಡುಗೆ ಧರಿಸಿ ಹುಲಾ ಹೂಪ್ ಪ್ರಾಕ್ಟಿಸ್ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದ ನಟಿ ಸಂಯುಕ್ತಾ ಹೆಗ್ಡೆ ಪರವಾಗಿ ನಟ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ.
ಈಗಷ್ಟೇ ನಟಿ ರಮ್ಯಾ ಸಹ ಸಂಯುಕ್ತಾ ಹೆಗ್ಡೆ ಟ್ವೀಟ್ ರೀಟ್ವಿಟ್ ಮಾಡಿಕೊಂಡು, ‘ಪೂರ್ತಿ ವಿಡಿಯೋವನ್ನು ನಾನು ನೋಡಿದ್ದೇನೆ. ಸಂಯುಕ್ತಾ ಮತ್ತು ಆಕೆಯ ಫ್ರೆಂಡ್ಸ್ ಅನ್ನು ನಡೆಸಿಕೊಂಡ ರೀತಿ ನೋಡಿ ನನಗೆ ಶಾಕ್ ಆಯಿತು. ಕಾರಣ ಏನೇ ಇರಬಹುದು ಆದರೆ, ನೈತಿಕ ಪೊಲೀಸ್ ಗಿರಿ, ಇನ್ನೊಬ್ಬರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದರು. ಇದೀಗ ಜಗ್ಗೇಶ್ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಜಾಲತಾಣಗಳಲ್ಲಿ ಮೊಬೈಲ್ ರೆಕಾರ್ಡ್ ಶುರು ಮಾಡಿ, ಕಾಲುಕೆರೆದು ಬರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇಂದು ಬಾಪ್ ಕಟ್, ಪ್ಯಾಂಟ್ ಶರ್ಟಿನ ಹೆಂಗಸು ಅನ್ಯಳ ಬಟ್ಟೆ ಬಗ್ಗೆ ಬುದ್ಧಿ ಹೇಳುವಂತೆ ಕೈಮಾಡಿ ರೆಕಾರ್ಡ್ ಮಾಡುತ್ತಾಳೆ. ನಾವು ನೋಡಿ ಪರವಿರೋಧ ಚರ್ಚೆ ಮಾಡುತ್ತೇವೆ. ಸಮಾಜದ ಡೊಂಕು ತಿದ್ದುವ ಮೊದಲು ನಾವು ಸರಿ ಇರಬೇಕು’ ಎಂದು ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಶುಕ್ರವಾರ ಸಂಜೆ ನಗರದ ಅಗರ ಕೆರೆ ಬಳಿ ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್ನಲ್ಲಿ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಕ್ರೀಡಾ ಉಡುಗೆ ತೊಟ್ಟು ಹುಲಾ ಹೂಪ್ ಡಾನ್ಸ್ ಮಾಡಿದ್ದಾರೆ. ಹಾಗೆ ಬಟ್ಟೆ ತೊಟ್ಟು ನೃತ್ಯ ಮಾಡಿದ್ದಕ್ಕೆ ಸ್ಥಳೀಯರು ಗರಂ ಆಗಿ, ‘ಇದೇನು ಕ್ಯಾಬರೇನಾ? ಇಂಥ ಬಟ್ಟೆ ತೊಡಬೇಡಿ’ ಎಂದು ಸಂಯುಕ್ತಾ ಮತ್ತವರ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು. ನಟಿಯರ ವಿರುದ್ಧ ಧಿಕ್ಕಾರ ಕೂಗಿ, ಉದ್ಯಾನದ ಗೇಟ್ ಲಾಕ್ ಮಾಡಿ, ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು.
ಇತ್ತ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಸಂಯುಕ್ತಾ ಪರಿಸ್ಥಿತಿ ವಿವರಿಸಿದ್ದಾರೆ. ನಮ್ಮದೇನು ತಪ್ಪಿಲ್ಲ, ಕ್ರೀಡೆಯ ಉಡುಗೆ ತೊಟ್ಟು ಹುಲಾ ಪ್ರಾಕ್ಟಿಸ್ ಮಾಡಿದ್ದೇ ತಪ್ಪಾ ಎಂದು ಕಣ್ಣೀರಿಟ್ಟಿದ್ದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ಪರಿಸ್ಥಿತಿ ಶಾಂತಗೊಳಿಸಲಾಯಿತು.
Join our WhatsApp group for latest news updates
ಕೋಪ ದುಃಖಕ್ಕೆಮೂಲ!
— ನವರಸನಾಯಕ ಜಗ್ಗೇಶ್ (@Jaggesh2) September 5, 2020
ಸಮಾಜದಡೊಂಕು ತಿದ್ದುವ ಮೊದಲು ನಾವು ಸರಿಯಿರಬೇಕು!
ಇತ್ತೀಚಗೆ ಜಾಲತಾಣಪ್ರಚಾರಕ್ಕೆ ಮೊಬೈಲ್ ರೆಕಾರ್ಡ ಚಾಲುಮಾಡಿ ಕಾಲುಕೆರದು ಬರುವವರ ಸಂಖ್ಯೆ ಜಾಸ್ತಿಆಗುತ್ತಿದೆ!ಇಂದು ಬಾಪ್ ಕಟ್ ಪ್ಯಾಂಟ್ ಶರ್ಟಿನ ಹೆಂಗಸು
ಅನ್ಯಳ ಬಟ್ಟೆಬಗ್ಗೆ ಬುದ್ದಿ ಹೇಳುವಂತೆ ಕೈಮಾಡಿ ರೆಕಾರ್ಡ ಮಾಡುತ್ತಾಳೆ!ನಾವು ನೋಡಿ ಪರವಿರೋಧ ಚರ್ಚೆಮಾಡುತ್ತೇವೆ😜 pic.twitter.com/Fz0Fbaqbyt
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm