ಬ್ರೇಕಿಂಗ್ ನ್ಯೂಸ್
14-08-21 04:51 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ಹಿಂದಷ್ಟೇ ಮಂಗಳೂರಿಗೆ ಬಂದಿದ್ದಾಗ ಸಿಕ್ಕ ಸಿಕ್ಕಲ್ಲಿ ಗಾಡ್ ಆಫ್ ಹಾನರ್ ಬೇಡ, ಅದನ್ನು ತೆಗೆದುಹಾಕಲು ಆದೇಶ ತರುವುದಾಗಿ ಹೇಳಿದ್ದರು. ನಿನ್ನೆಯಷ್ಟೇ ಅವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಈ ಬಗ್ಗೆ ತಮ್ಮ ಇಲಾಖೆಯ ಘಟಕಾಧಿಕಾರಿಗಳಿಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಗೌರವ ರಕ್ಷೆ ಸಲ್ಲಿಸುವುದು ಪೊಲೀಸ್ ಕವಾಯತು ಕೈಪಿಡಿಯ ಪ್ರಕಾರ ತುಂಬಾ ಹಳೆಯ ಪದ್ಧತಿಯಾಗಿದೆ. ಆದಾಗ್ಯೂ ಕಾಲ ಕಾಲಕ್ಕೆ ನಿರ್ದಿಷ್ಟ ಸೂಚನೆಗಳನ್ನು ನೀಡುತ್ತಿದ್ದರೂ, ವ್ಯತಿರಿಕ್ತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಹೊಟೇಲ್, ಪ್ರವಾಸಿ ಮಂದಿರ, ಕಾರ್ಯಕ್ರಮ ನಡೆಯುವ ಸ್ಥಳ ಇತ್ಯಾದಿ ಕಡೆಗಳಲ್ಲಿ ಗೌರವ ರಕ್ಷೆಯನ್ನು ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಇದಲ್ಲದೆ, ಗೌರವ ರಕ್ಷೆಯನ್ನು ಒಂದೇ ದಿನ ಹಲವಾರು ಕಡೆಗಳಲ್ಲಿ ಸಲ್ಲಿಸುತ್ತಿರುವುದು ಕಂಡುಬಂದಿದೆ. ಇಂತಹ ಪದ್ಧತಿಗಳು ಗೌರವ ರಕ್ಷೆಯ ಪಾವಿತ್ರ್ಯತೆಗೆ ಕುಂದು ಬರುವುದಲ್ಲದೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತದೆ.


ಆದುದರಿಂದ ಈ ರೀತಿಯ ಪದ್ಧತಿಯನ್ನು ಕೈಬಿಟ್ಟು ಇದರ ಬದಲಿಗೆ ಸರಕಾರಿ ಕಚೇರಿಗಳ ಆವರಣದಲ್ಲಿ ಮಾತ್ರ ಗೌರವ ರಕ್ಷೆಯನ್ನು ಸಲ್ಲಿಸುವುದು. ಅಲ್ಲದೆ, ಗೌರವ ರಕ್ಷೆಯನ್ನು ಗಣ್ಯರು ಆಗಮಿಸಿದಾಗ ದಿನದಲ್ಲಿ ಒಂದು ಬಾರಿ ಮಾತ್ರ ಸಲ್ಲಿಸುವುದು. ನಿರ್ಗಮನ ಸಂದರ್ಭದಲ್ಲಿ ಗೌರವ ರಕ್ಷೆ ಸಲ್ಲಿಸುವ ಪದ್ಧತಿಯನ್ನು ಕೈಬಿಡುವುದು. ಆದರೆ, ಈ ಮೇಲಿನ ಸೂಚನೆಗಳು ರಾಜ್ಯಪಾಲರು ಮತ್ತು ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳ ಭೇಟಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶದ ಮೂಲಕ ಅಧಿಕೃತವಾಗಿ ಜಾರಿಗೊಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಷ್ಟರ ಮಟ್ಟಿಗೆ ಸರಳ ಮತ್ತು ಕರ್ತವ್ಯದಲ್ಲಿ ವೇಗ ಇಟ್ಟುಕೊಂಡಿದ್ದಾರೆ ಎಂದರೆ, ನಿನ್ನೆ ಬೆಳಗ್ಗೆ ಬೆಂಗಳೂರಿಗೆ ತೆರಳಿದ ಕೂಡಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಕರೆದು ಈ ಬಗ್ಗೆ ಆದೇಶ ಹೊರಡಿಸುವಂತೆ ಮಾಡಿದ್ದಾರೆ. ಯಾವುದೇ ಫೈಲ್, ಒಂದು ಆದೇಶ ಹೊರಬರಬೇಕಿದ್ದರೆ ತಿಂಗಳ ಕಾಲ ಕಾಯಬೇಕಿದ್ದ ಸ್ಥಿತಿಯನ್ನು ಬದಲಿಸಿ, ತಾನು ಸೂಚಿಸಿದ ಗಂಟೆಯೊಳಗೆ ಲಿಖಿತ ಆದೇಶ ಪಾಸ್ ಆಗುವಂತೆ ನೋಡಿಕೊಂಡಿದ್ದಾರೆ. ಆದೇಶದಲ್ಲಿ ಸಹಿ ಹಾಕಿದ ದಿವಸ ಆಗಸ್ಟ್ 13 ಎಂದು ನಮೂದಾಗಿರುವುದು ಇದನ್ನು ಸೂಚಿಸುತ್ತದೆ.
Read: ಹೋದಲ್ಲಿ ಬಂದಲ್ಲಿ ಗಾರ್ಡ್ ಆಫ್ ಹಾನರ್ ಬೇಡ, ಕಟೌಟ್, ಹೋರ್ಡಿಂಗೂ ಹಾಕ್ಬೇಡಿ ; ಸಿಎಂ ಬೊಮ್ಮಾಯಿ ವಾರ್ನ್
ಮಾನ್ಯ ಮುಖ್ಯಮಂತ್ರಿಗಳಿಗೆ ಗೌರವ ರಕ್ಷೆ ಸಲ್ಲಿಸುವ ಬಗ್ಗೆ ಸೂಚನೆಗಳನ್ನು ನೀಡಿ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.@CMofKarnataka pic.twitter.com/P0lffghpKP
— DIPR Karnataka (@KarnatakaVarthe) August 14, 2021
Karnataka DGP orders No more guard of honour in public places to VIPs. Bommai received a guard of honour at Mangalore International Airport before heading to a review meeting on the Covid-19 situation in Dakshina Kannada. After a discussion with senior police officers, the CM said that henceforth the police need not give a guard of honour during his arrival be it in airports, railway stations or other public places to avoid inconvenience to the public.
02-03-26 09:19 pm
HK News Staffer
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
02-03-26 09:23 pm
HK News Staffer
ಇರಾನ್ ಸಂಘರ್ಷ ; ಸುಪ್ರೀಂ ಲೀಡರ್ ಆಗಿ ನೇಮಿಸಲ್ಪಟ್ಟ...
02-03-26 06:51 pm
ಖಮೇನಿ ಹತ್ಯೆಗೆ ಕಾಶ್ಮೀರದಲ್ಲಿ ಬೀದಿಗಿಳಿದ ಶಿಯಾಗಳು...
02-03-26 03:10 pm
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ; ಸೆನ್ಸೆಕ್ಸ್ 1,000...
02-03-26 01:34 pm
02-03-26 10:06 pm
HK News Staffer
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚ...
02-03-26 07:57 pm
'ಬೊಲ್ಪು’ ಯೋಜನೆಯಡಿ 11 ಸ್ಟಾರ್ಟಪ್ಗಳ ಆಯ್ಕೆ ; ಭಾವ...
01-03-26 08:37 pm
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm