ಬ್ರೇಕಿಂಗ್ ನ್ಯೂಸ್
29-07-21 08:51 pm Mangaluru Correspondent ಕರ್ನಾಟಕ
ಬೆಂಗಳೂರು, ಜುಲೈ 29: ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗುವುದಕ್ಕೆ ಬಹಳಷ್ಟು ಮಂದಿ ಲಾಬಿ ಮಾಡುತ್ತಿದ್ದಾರೆ. ಇದೇ ವೇಳೆ, ಹಳಬರಿಗೆ ಕೊಕ್ ಸಿಗಲಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ಈ ಬಗ್ಗೆ ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರು ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಟ, ಎರಡು ವರ್ಷದ ಅವಧಿಯಲ್ಲಿ ನನಗೆ ಕೊಟ್ಟ ಎರಡೂ ಇಲಾಖೆಗಳಲ್ಲಿ ಪಾರದರ್ಶಕವಾಗಿ ಮತ್ತು ಯಾವುದೇ ಭ್ರಷ್ಟಾಚಾರ ಇಲ್ಲದೆ ಕೆಲಸ ಮಾಡಿದ್ದೇನೆ. ಎರಡೂ ಇಲಾಖೆಯಲ್ಲಿ ಭ್ರಷ್ಟಾಚಾರ ಝೀರೋಗೆ ಇಳಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಹಾಗೆ ಹೇಳಿಕೊಳ್ಳಲು ನನಗೆ ಧೈರ್ಯವಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ನಾಯಕರು, ಕೇಂದ್ರ ನಾಯಕರು ನನ್ನ ಕೆಲಸವನ್ನು ಗುರುತಿಸಲಿದ್ದಾರೆಂಬ ವಿಶ್ವಾಸ ಇದೆ ಎಂದಿದ್ದಾರೆ.
ರಾಜ್ಯ ಸರಕಾರದಲ್ಲಿ ಯಾರು ಸಚಿವರಾಗಬೇಕು ಎಂದು ನಾವು ಹೇಳುವುದಲ್ಲ. ಯಾರು ಸಚಿವರಾಗಬೇಕು ಎಂಬುದನ್ನು ನಾಯಕರು ನಿರ್ಧರಿಸುತ್ತಾರೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಉತ್ತಮ ತಂಡವೊಂದನ್ನು ನಿರ್ಧರಿಸಲಿದ್ದಾರೆ. ಒಂದೂವರೆ ವರ್ಷದ ನಂತರ ಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಉತ್ತಮ ತಂಡವನ್ನು ತರಲಿದ್ದಾರೆ ಎಂದು ಹೇಳಿದ್ದಾರೆ.
ಮುಂದಿನ ತಂಡದಲ್ಲಿ ನಿಮಗೆ ಸಚಿವ ಸ್ಥಾನ ಸಿಗುತ್ತೆ ಎನ್ನುವ ನಿರೀಕ್ಷೆ ಇದೆಯೇ ಎಂಬ ಪ್ರಶ್ನೆಗೆ, ನಿರೀಕ್ಷೆ ಯಾರಿಗೆ ಇರುವುದಿಲ್ಲ ಹೇಳಿ. ನಿರೀಕ್ಷೆ ಇಲ್ಲದಿರುವ ಕರ್ನಾಟಕದ ರಾಜಕಾರಣಿಗಳು ಯಾರಿದ್ದಾರೆ. ಯಡಿಯೂರಪ್ಪರು ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಮಂತ್ರಿ ಮಾಡಿದ್ದಾರೆ. ಅವರು ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಪಾರದರ್ಶಕವಾಗಿ ಮತ್ತು ಭ್ರಷ್ಟಾಚಾರ ರಹಿತವಾಗಿ ನಡೆಸಿದ್ದು ನನ್ನ ಸಾಧನೆ. ಅದನ್ನು ಪರಿಗಣಿಸಿ ಮತ್ತೆ ಉಳಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.
I have worked promptly and corrupt freely in my department kota Srinivas Poojary on cabinet expansion.
15-04-25 12:51 pm
HK News Desk
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
SIT, Probe, Dysp Kanakalakshmi: ಸಿಐಡಿ ಡಿವೈಎಸ್...
14-04-25 02:06 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
14-04-25 09:20 pm
Mangalore Correspondent
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
Siddaramaiah, caste census, Somanna: ಜಾತಿಗಣತಿ...
12-04-25 10:13 pm
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
15-04-25 06:17 pm
HK News Desk
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm