ಬ್ರೇಕಿಂಗ್ ನ್ಯೂಸ್
27-07-21 08:27 pm Mangaluru Correspondent ಕರ್ನಾಟಕ
ಬೆಂಗಳೂರು, ಜುಲೈ 27: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರನ್ನು ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಕ್ಯಾಪಿಟಲ್ ಹೊಟೇಲಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಬಸವರಾಜ್ ಬೊಮ್ಮಾಯಿ ಹೆಸರನ್ನು ಪ್ರಸ್ತಾವನೆ ಮಾಡಿದ್ದಾರೆ. ಬೊಮ್ಮಾಯಿ ಹೆಸರು ಸೂಚಿಸಿದ್ದಕ್ಕೆ ಸಭೆಯಲ್ಲಿ ಬೆಂಬಲ ವ್ಯಕ್ತವಾಗಿದ್ದು ಸಂಪೂರ್ಣ ಬಹುಮತದೊಂದಿಗೆ ಅಂಗೀಕಾರ ಮಾಡಲಾಗಿದೆ.
ಕೇಂದ್ರದಿಂದ ಬಂದ ವೀಕ್ಷಕರು ಕೂಡ ಹೊಸ ಹೆಸರಿನ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ನಾಳೆ (ಬುಧವಾರ ) ಮಧ್ಯಾಹ್ನ 3.30 ಕ್ಕೆ ಮುಖ್ಯಮಂತ್ರಿ ಆಗಿ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಬಲ ಲಿಂಗಾಯತ ಸಮುದಾಯದವರೇ ಆಗಿರುವ ಬೊಮ್ಮಾಯಿ, ಯಡಿಯೂರಪ್ಪ ಆಪ್ತರೂ ಆಗಿದ್ದಾರೆ. ಬಿ ಎಸ್ ವೈ ರಾಜಿನಾಮೆ ಬಳಿಕ ಯಾರು ಸಿಎಂ ಆಗುತ್ತಾರೆ ಎನ್ನುವ ಬಗ್ಗೆ ತೀವ್ರ ಚರ್ಚೆ ನಡೆದಿತ್ತು.
ಪ್ರಬಲ ಲಿಂಗಾಯತ ಸಮುದಾಯದವರೇ ಸಿಎಂ ಆಗಲಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ ಹೆಸರು ಕೇಳಿಬಂದಿತ್ತು. ಅಲ್ಲದೆ, ಪ್ರಹ್ಲಾದ ಜೋಷಿ, ಬಿ.ಎಲ್. ಸಂತೋಷ್ ಹೆಸರು ಕೂಡ ರೇಸಿನಲ್ಲಿತ್ತು. ಆದರೆ, ಕೊನೆಕ್ಷಣದಲ್ಲಿ ಬಿಎಸ್ವೈ ಮತ್ತೆ ದಾಳ ಉರುಳಿಸಿದ್ದು ತನ್ನ ಆಪ್ತನನ್ನೇ ಸಿಎಂ ಮಾಡುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಹೈಕಮಾಂಡ್ ದಾಳಕ್ಕೆ ಪ್ರತಿ ದಾಳ ಬೀಸಿದ ಯಡಿಯೂರಪ್ಪ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮುನ್ನ ಶಾಸಕಾಂಗ ಸಭೆಯ ಬಳಿಕ ಹೊಸ ಸಿಎಂ ಹೆಸರನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೂ ಮೊದಲೇ ಸಭೆಗೆ ಎಂಟ್ರಿ ಆಗುವ ಮೂಲಕ ತಮ್ಮದೇ ವ್ಯಕ್ತಿಯನ್ನು ಯಡಿಯೂರಪ್ಪ ಸಿಎಂ ಮಾಡಿ, ಹೊಸ ದಾಳ ಉರುಳಿಸಿದ್ದಾರೆ.
The Bharatiya Janata Party's (BJP) legislature party has elected Basavaraj S Bommai as the new chief minister of Karnataka. Basavaraj Bommai was the home minister in the BS Yediyurappa government and was among the top contenders for the chief minister's post. Just like the outgoing Chief Minister BS Yediyurappa, who resigned on Monday, the new chief minister is also from the politically influential Lingayat community.
15-04-25 12:51 pm
HK News Desk
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
SIT, Probe, Dysp Kanakalakshmi: ಸಿಐಡಿ ಡಿವೈಎಸ್...
14-04-25 02:06 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
14-04-25 09:20 pm
Mangalore Correspondent
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
Siddaramaiah, caste census, Somanna: ಜಾತಿಗಣತಿ...
12-04-25 10:13 pm
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
15-04-25 06:17 pm
HK News Desk
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm