ಬ್ರೇಕಿಂಗ್ ನ್ಯೂಸ್
20-07-21 02:12 pm Headline Karnataka News Network ಕರ್ನಾಟಕ
ಬೆಂಗಳೂರು, ಜುಲೈ 20: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ ಎನ್ನಲಾದ ಆಡಿಯೋ ಬಾಂಬ್ ಬಿಜೆಪಿ ರಾಜಕೀಯ ವಲಯದಲ್ಲಿ ದೊಡ್ಡ ಕಂಪನವನ್ನೇ ಸೃಷ್ಟಿಸಿದೆ. ಆಡಿಯೋ ಬಾಂಬ್ ಸಂಚಲನ ಸೃಷ್ಟಿ ಮಾಡಿರುವಾಗಲೇ ಸೋಮವಾರ ಸಂಜೆ ಸಿಎಂ ಯಡಿಯೂರಪ್ಪ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಆಪ್ತರ ಜೊತೆ ಸಭೆ ನಡೆಸಿದ್ದಾರೆ.
ಆಡಿಯೋ ಬಾಂಬ್ ; ಅದು ನನ್ನದಲ್ಲ , ನಾನವನಲ್ಲ ! ಕಿಡಿಗೇಡಿಗಳ ಸೃಷ್ಟಿ ; ನಳಿನ್ ಕುಮಾರ್ ಪ್ರತಿಕ್ರಿಯೆ
ಸಭೆಯಲ್ಲಿ ಪ್ರಮುಖವಾಗಿ ನಳಿನ್ ಕುಮಾರ್ ಆಡಿಯೋ ಬಗ್ಗೆಯೇ ಚರ್ಚೆಯಾಗಿದೆ. ಅದು ಆಡಿಯೋ ಆತನದ್ದೇ. ಅದರಲ್ಲಿ ಎರಡು ಮಾತಿಲ್ಲ. ತನಿಖೆ ಮಾಡುವ ಅಗತ್ಯವೇ ಇಲ್ಲ. ಮಾಡುವುದೂ ಇಲ್ಲ ಎಂದು ಆಪ್ತರ ಜೊತೆಗಿನ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಆಡಿಯೋದಲ್ಲಿ ಸಿಎಂ ಬದಲಾವಣೆ ವಿಚಾರದ ಜೊತೆಗೆ, ಇನ್ನು ನಮ್ಮ ಕೈಯಲ್ಲೇ ಅಧಿಕಾರ ಇರಲಿದೆ, ಜೊತೆಗೆ ಹಿರಿಯ ಸಚಿವರಾದ ಈಶ್ವರಪ್ಪ, ಶೆಟ್ಟರ್ ಅವರನ್ನು ತೆಗೆದು ಹಾಕ್ತೀವಿ ಎಂದು ನಳಿನ್ ಕುಮಾರ್ ಹೇಳುವ ವಿಚಾರ ಬಹಿರಂಗ ಆಗಿತ್ತು. ಸಿಎಂ ಬದಲಾವಣೆ ವಿಚಾರಕ್ಕಿಂತಲೂ ಹಿರಿಯ ಸಚಿವರನ್ನು ತೆಗೆದು ಹಾಕುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ. ಇದರಿಂದ ರಾಜ್ಯ ಬಿಜೆಪಿಯ ನಾಯಕರು ಕೂಡ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಇದಕ್ಕಾಗೇ ಹಲವು ನಾಯಕರು ಡ್ಯಾಮೇಜ್ ಕಂಟ್ರೋಲ್ ಹೇಳಿಕೆ ನೀಡತೊಡಗಿದ್ದರು. ಆದರೆ, ಈ ಅಡಿಯೋದಿಂದ ತೀವ್ರ ವಿಚಲಿತ ಆಗಿದ್ದು ಯಡಿಯೂರಪ್ಪ ಅನ್ನುವ ಸೂಚನೆಯನ್ನು ಈ ಬೆಳವಣಿಗೆ ತೋರಿಸಿದೆ.
ಆಡಿಯೋದಲ್ಲಿ ಇರುವುದು ಆತನದ್ದೇ ವಾಯ್ಸ್. ಅದರ ಬಗ್ಗೆ ತನಿಖೆ ಮಾಡುವ ಅಗತ್ಯ ಏನಿದೆ ಎಂದು ಯಡಿಯೂರಪ್ಪ ತಮ್ಮ ಆಪ್ತರ ಬಳಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಮಂಗಳವಾರ ಸಂಜೆವರೆಗೂ ಕಾಯಿರಿ. ಸಾಕಷ್ಟು ರಾಜಕೀಯ ಬೆಳವಣಿಗೆ ಆಗಲಿದೆ ಎಂಬ ಸುಳಿವನ್ನೂ ಯಡಿಯೂರಪ್ಪ ಬಿಟ್ಟು ಕೊಟ್ಟಿದ್ದಾರೆ.
ನಳಿನ್ ಆಡಿಯೋ ಬಾಂಬ್ ; ಮೀರ್ ಸಾದಿಕ್ ಗೆ ಹೋಲಿಸಿದ ಕರ್ನಾಟಕ ಕಾಂಗ್ರೆಸ್ !
ಇವೆಲ್ಲ ಹಿನ್ನೆಲೆಯಲ್ಲಿ ಯಡಿಯೂರಪ್ಪ ಒಂದೆಡೆ ಸಿಎಂ ಸ್ಥಾನ ಬಿಟ್ಟು ಕೊಡುತ್ತಾರಾ ಅಥವಾ ಆಡಿಯೋ ಮುಂದಿಟ್ಟೇ ಮತ್ತೊಂದು ದಾಳ ಎಸೆಯಲಿದ್ದಾರಾ ಎನ್ನುವ ಅನುಮಾನ, ಕುತೂಹಲ ಹೆಚ್ಚಿಸಿದೆ.
Video:
Naleen Kumar Kateel audio leaked CM Yediyurappa says it's his voice no probe will be ordered. Naleen denied that the voice in the audio clip was his and added that he will write to the chief minister seeking an inquiry into it to bring out the truth. In the past, several such incidents have taken place in politics which is not right and hence there should an investigation
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm