ಬ್ರೇಕಿಂಗ್ ನ್ಯೂಸ್
18-07-21 09:11 pm Headline Karnataka News Network ಕರ್ನಾಟಕ
ಕಾರವಾರ, ಜುಲೈ 18: ಲಾಕ್ಡೌನ್ ಕಾರಣ ಇರಾನ್ ಬಂದರಿನಲ್ಲಿ ಸಿಕ್ಕಿಬಿದ್ದಿರುವ ಸರಕು ಹಡಗಿನಲ್ಲಿ ಭಟ್ಕಳ ಮೂಲದ ಕಾರ್ಮಿಕ ಸಿಲುಕಿದ್ದು ಕೈಯಲ್ಲಿ ವೀಸಾ ಮತ್ತು ಮರಳಿ ಬರಲು ಹಣ ಇಲ್ಲದೆ ಸಂಕಷ್ಟಕ್ಕೀಡಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ. ಭಟ್ಕಳ ಮೂಲದ ಯಾಸೀನ್ ಷಾ (31) ಎನ್ನುವಾತ ಒಂದೂವರೆ ವರ್ಷದಿಂದ ಇರಾನ್ನ ಬಂದರಿನಲ್ಲಿ ಸಿಲುಕಿದ್ದಾನೆ.
ಸರಕು ಹಡಗಿನಲ್ಲಿ ಸಮುದ್ರಯಾನಗಾರನಾಗಿ ಕೆಲಸ ಮಾಡುತ್ತಿದ್ದ ಯಾಸೀನ್, 2020ರ ಜನವರಿಯಲ್ಲಿ ಇರಾನ್ ಬಂದರಿನಲ್ಲಿ ಇಳಿದಿದ್ದ. ಕೋವಿಡ್ ಕಾರಣದಿಂದ ಹಡಗನ್ನು ಬಂದರಿನಲ್ಲೇ ಲಂಗರು ಹಾಕಲಾಗಿತ್ತು. ಹಡಗು ಮೂವರ ಪಾಲುದಾರಿಕೆ ಹೊಂದಿದ್ದು, ಮಾಲೀಕರ ನಡುವಿನ ವಿವಾದದ ಕಾರಣದಿಂದ ಒಂದೂವರೆ ವರ್ಷದಿಂದ ಅಲ್ಲಿಯೇ ಉಳಿದುಕೊಂಡಿದೆ. ಭಟ್ಕಳ ಮೂಲದ ಕಾರ್ಮಿಕನ ಬಗ್ಗೆಯೂ ಯಾರೂ ಕೇರ್ ವಹಿಸಿಲ್ಲ. ಜೊತೆಗೆ ಒಂದು ವರ್ಷಗಳ ವೇತನವನ್ನೂ ನೀಡದೆ ಉಳಿಸಿಕೊಂಡಿದ್ದಾರೆ. ಇದೀಗ ಸರಕು ಹಡಗುಗಳ ಚಲನೆ ಪುನರಾರಂಭ ಗೊಂಡಿದ್ದರೂ ಯಾಸೀನ್ ಇರುವ ಹಡಗು ಅಲ್ಲಿಂದ ತೆರಳಿಲ್ಲ ಎನ್ನಲಾಗಿದೆ.
ಯಾಸೀನ್ ಇರಾನ್ಗೆ ತೆರಳಲು ಏಜೆನ್ಸಿ ಜೊತೆಗೆ ಮಾಡಿದ್ದ ಒಪ್ಪಂದವನ್ನು ಇರಾನ್ನಲ್ಲಿ ಬದಲಿಸಲಾಗಿತ್ತು. ಬಹುತೇಕ ಇರಾನ್ ಏಜನ್ಸಿಗಳು ಕಾರ್ಮಿಕರಲ್ಲಿ ಪರ್ಸಿಯನ್ ಭಾಷೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು, ವೇತನ ಪಾವತಿಸದೆ ಕೆಲಸಗಾರರಿಗೆ ವಂಚಿಸುತ್ತದೆ. ಆದರೆ, ಪರ್ಸಿಯನ್ ಭಾಷೆ ಅಲ್ಪಸ್ವಲ್ಪ ತಿಳಿದಿದ್ದ ಯಾಸೀನ್, ಏಜೆನ್ಸಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕದೆ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಕಳೆದ ಆರು ತಿಂಗಳಿನಿಂದ ಯಾಸೀನ್ಗೆ ಆಹಾರ ಸಾಮಗ್ರಿಗಳನ್ನೂ ನೀಡುತ್ತಿಲ್ಲ. ಬಂದರಿನಲ್ಲಿ ಲಂಗರು ಹಾಕಿರುವ ಇತರ ಹಡಗುಗಳಿಂದ ಆಹಾರಗಳನ್ನು ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ತಾನು ಇರಾನ್ನಲ್ಲಿ ಅನುಭವಿಸುತ್ತಿರುವ ಸಂಕಷ್ಟದ ಕುರಿತು ಯಾಸೀನ್ ಭಾರತೀಯ ದೂತಾವಾಸ ಮತ್ತು ಇತರ ಸಂಸ್ಥೆಗಳಿಗೆ ಸಂಪರ್ಕಿಸಿ ಹೇಳಿಕೊಂಡಿದ್ದಾನೆ.
ಭಾರತ ಮತ್ತು ವಿದೇಶದ ಹಲವಾರು ಸಂಸ್ಥೆಗಳು ಯಾಸೀನ್ಗೆ ಸಹಾಯ ಮಾಡಲು ಪ್ರಯತ್ನಿಸುತ್ತಿವೆ. ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಕೆಲವು ಸಂಘಟನೆಗಳು ಸಂಪರ್ಕ ಸಾಧಿಸಿವೆ. ಇರಾನ್ನಲ್ಲಿ ಸಿಲುಕಿರುವ ಭಾರತೀಯನಿಗೆ ವೇತನ ಪಾವತಿಸಿ, ಮರಳಿ ಮನೆಗೆ ಕರೆತರಲು ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಏಮ್ ಇಂಡಿಯಾ ಫೋರಂ ಸ್ಥಾಪಕ ಅಧ್ಯಕ್ಷ ಶೇಖ್ ಮುಜಾಫರ್ ಶಿರಾಲಿ ಒತ್ತಾಯಿಸಿದ್ದಾರೆ.
Bhatkal man trapped in Iran harbour due to lockdown. Yasin from Bhatkal who went to work at Harbour has now been stuck for one year.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm