ಬ್ರೇಕಿಂಗ್ ನ್ಯೂಸ್
17-06-21 05:15 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 17: ಯಾವುದೇ ಪ್ರಕರಣದಲ್ಲಿ ತನಿಖೆ ಪೂರ್ಣಗೊಳ್ಳುವ ಮೊದಲು ದೂರುದಾರರು ಹಾಗೂ ಆರೋಪಿತರಿಗೆ ಸಂಬಂಧಿಸಿದ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ ಹೊಸ ರೀತಿಯ ಆದೇಶ ಮಾಡಿದ್ದು ಈ ಬಗ್ಗೆ ನಾಲ್ಕು ವಾರಗಳಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಾಧ್ಯಮಗಳು ಅಶ್ಲೀಲ ಮತ್ತು ಹಿಂಸಾತ್ಮಕ ವಿಚಾರಗಳನ್ನು ಪ್ರಕಟಿಸದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ವಕೀಲೆ ದೀಪಶ್ರೀ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ತನಿಖಾ ಮಾಹಿತಿಗಳನ್ನು ಮಾಧ್ಯಮದವರಿಗೆ ಸೋರಿಕೆ ಮಾಡದಂತೆ ಈ ಹಿಂದೆಯೇ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸಿ ಡಿಜಿಪಿ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹೇಳಿ ಸುತ್ತೋಲೆಯ ಪ್ರತಿಯನ್ನು ಪೀಠಕ್ಕೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೇವಲ ಸುತ್ತೋಲೆ ಹೊರಡಿಸಿ ಪ್ರಯೋಜನವಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಪ್ರಕರಣದ ಸ್ವರೂಪ, ಸಾಕ್ಷ್ಯಾಧಾರ, ದೂರುದಾರರು ಮತ್ತು ಆರೋಪಿತರ ವಿವರ ಸೇರಿದಂತೆ ಯಾವುದೇ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಬಾರದು ಅಥವಾ ಸೋರಿಕೆ ಮಾಡಬಾರದು. ಮಾಹಿತಿ ನೀಡುವುದರಿಂದ ತನಿಖೆ ಮೇಲೆ ದುಷ್ಪರಿಣಾಮ ಬೀರುತ್ತದೆ. ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ಮೇಲೂ ಪರಿಣಾಮ ಬೀರುತ್ತದೆ.

ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಈ ಸಂಬಂಧ ಅಗತ್ಯ ನಿರ್ದೇಶನ ನೀಡಬೇಕು. ಒಂದೊಮ್ಮೆ ಮಾಹಿತಿ ಸೋರಿಕೆ ಮಾಡಿದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಹಲವಾರು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಮಾಧ್ಯಮಗಳ ಮುಂದೆ, ತನಿಖೆಯ ವಿಚಾರವನ್ನು ಬಹಿರಂಗಪಡಿಸುತ್ತಾರೆ. ಅಲ್ಲದೆ ಪೊಲೀಸರು ಮಾಧ್ಯಮಗಳ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಬೇಕು ಎಂದು ಆದೇಶ ಮಾಡಿದೆ. ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.
ಈ ರೀತಿಯ ಆದೇಶ ಹೊರಡಿಸಿದ ಸುದ್ದಿ ಹೊರಬೀಳುತ್ತಲೇ ಮಾಧ್ಯಮ ವಲಯದಲ್ಲಿ ಮತ್ತು ಪೊಲೀಸ್ ವಲಯದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ಪ್ರಕರಣದಲ್ಲಿ ಆರೋಪಿಗಳ ಬಂಧನ ಆಗಿರುವುದನ್ನು ಪೊಲೀಸ್ ಇಲಾಖೆಯಿಂದ ಅಧಿಕೃತವಾಗಿ ನೀಡಬಹುದೇ ಇಲ್ಲವೇ ಎನ್ನುವ ಜಿಜ್ಞಾಸೆಗೆ ಒಳಗಾಗಿದ್ದಾರೆ. ಆದೇಶದ ಪ್ರಕಾರ, ಆರೋಪಿಗಳ ಮಾಹಿತಿಯನ್ನೇ ನೀಡಬಾರದು ಎಂದಿರುವುದು ಮತ್ತು ಸೋರಿಕೆಯಾಗಿ ಮಾಧ್ಯಮಗಳಲ್ಲಿ ಪ್ರಕಟವಾದರೆ ಪೊಲೀಸರಿಗೆ ದಂಡ ವಿಧಿಸಬೇಕು ಎನ್ನುವ ರೀತಿಯ ಆದೇಶ ಇಲಾಖೆಯೊಳಗೇ ಇರಿಸುಮುರಿಸು ಉಂಟುಮಾಡಿದೆ.
The information of the accused in any case should not be given to the media High Court order
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm