ಬ್ರೇಕಿಂಗ್ ನ್ಯೂಸ್
12-06-21 10:23 pm Satish, Bengaluru Correspondent ಕರ್ನಾಟಕ
ಬೆಂಗಳೂರು, ಜೂನ್ 12: ಅಕ್ರಮವಾಗಿ ಟೆಲಿಫೋನ್ ಎಕ್ಸ್ ಚೇಂಜ್ ನೆಟ್ವರ್ಕ್ ಸ್ಥಾಪಿಸಿ, ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸುತ್ತಿದ್ದ ಜಾಲದಲ್ಲಿ ಸೆರೆಸಿಕ್ಕಿದ್ದ ವ್ಯಕ್ತಿ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ನಕಲಿ ಸಿಮ್ ಗಳ ಮೂಲಕ ಪಾಕಿಸ್ತಾನದಿಂದ ಬೆಂಗಳೂರಿಗೆ 600 ಕರೆಗಳನ್ನು ಮಾಡಲಾಗಿತ್ತು ಎನ್ನೋ ವಿಚಾರವನ್ನು ತನಿಖಾಧಿಕಾರಿಗಳಲ್ಲಿ ಬಿಚ್ಚಿಟ್ಟಿದ್ದಾನೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಕೇರಳ ಮೂಲದ ಮಲಪ್ಪುರಂ ನಿವಾಸಿ ಇಬ್ರಾಹಿಂ ಪುಲಟ್ಟಿ ಮತ್ತು ತಮಿಳುನಾಡು ಮೂಲದ ತಿರುಪ್ಪೂರ್ ನಿವಾಸಿ ಗೌತಮ್ ಎಂಬ ಇಬ್ಬರು ಬಂಧನಕ್ಕೀಡಾಗಿದ್ದರು. ಅಲ್ಲದೆ, ಬಿಟಿಎಂ ಲೇಔಟ್ ನಲ್ಲಿ ಸ್ಥಾಪಿಸಿದ್ದ ಆರು ಟೆಲಿಫೋನ್ ಎಕ್ಸ್ ಚೇಂಜ್ ಗಳನ್ನು ಪತ್ತೆ ಮಾಡಿದ್ದರು. ಇದಕ್ಕಾಗಿ 30 ಇಲೆಕ್ಟ್ರಾನಿಕ್ ಸರ್ಕಿಟ್ ಗಳನ್ನು ನಕಲಿ ಸಿಮ್ ಬಳಸ್ಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿಸುವ ಕೆಲಸ ನಡೆಯುತ್ತಿತ್ತು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಭಾರತೀಯ ಸೇನಾ ಕೇಂದ್ರದ ಹೆಲ್ಪ್ ಲೈನ್ ಸೆಂಟರಿಗೆ ಅನುಮಾನಾಸ್ಪದ ಕರೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಸೇನಾ ಗೂಢಚರ ತಂಡ ನೆಟ್ವರ್ಕ್ ಭೇದಿಸಿದಾಗ ಬೆಂಗಳೂರನ್ನು ತೋರಿಸಿತ್ತು. ಅದರಂತೆ, ಸೇನಾಧಿಕಾರಿಗಳ ಸೂಚನೆಯಂತೆ ಸೇನಾ ಗುಪ್ತಚರ ತಂಡ ಮತ್ತು ಬೆಂಗಳೂರು ಕ್ರೈಂ ಬ್ರಾಂಚ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದರು.
ವಿಚಾರಣೆ ವೇಳೆ, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಕಿಸ್ತಾನಕ್ಕೆ ಕರೆ ಮಾಡುತ್ತಿದ್ದ ವಿಚಾರವನ್ನು ಇಬ್ರಾಹಿಂ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಹೀಗೆ ಕರೆ ಮಾಡುತ್ತಿದ್ದ ವ್ಯಕ್ತಿಗಳು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ಐ ಜೊತೆ ನೇರ ಲಿಂಕ್ ಹೊಂದಿದ್ದರು ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಇಬ್ರಾಹಿಂ ಬೆಂಗಳೂರಿನಲ್ಲಿ ಪಾಕಿಸ್ತಾನಿ ಗೂಢಚರ ಸಂಸ್ಥೆಯ ಪರವಾಗಿ ಕೆಲಸ ಮಾಡಲು ಯುವಕರನ್ನು ಪೂರೈಕೆ ಮಾಡುತ್ತಿದ್ದ ಅನ್ನೋ ವಿಚಾರವೂ ಬಯಲಾಗಿದೆ. ಇದೇ ಯುವಕರು ಆತನ ಟೆಲಿಫೋನ್ ಎಕ್ಸ್ ಚೇಂಜ್ ಗ್ರಾಹಕರು ಎನ್ನಲಾಗುತ್ತಿದೆ.
ಮಾಹಿತಿ ಪ್ರಕಾರ, ಇಬ್ರಾಹಿಂ ಪಾಕಿಸ್ತಾನದಲ್ಲಿ 600ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದಾನೆ. ಅವರು ತಮ್ಮ ಗೆಳೆಯರು, ಸಂಬಂಧಿಕರ ಜೊಕೆ ಕರೆ ಮಾಡಿ ಮಾತನಾಡಲು ಇಬ್ರಾಹಿಂ ನೀಡುತ್ತಿದ್ದ ಟೆಲಿಫೋನ್ ನೆಟ್ವರ್ಕನ್ನು ಬಳಸುತ್ತಿದ್ದರು. ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ನೀಡುತ್ತಿದ್ದುದರಿಂದ ಕಡಿಮೆ ಹಣಕ್ಕೆ ಸಂಪರ್ಕ ಆಗುತ್ತಿತ್ತು. ಇದಕ್ಕಾಗಿ ಪಾಕಿಸ್ತಾನಿ ಗ್ರಾಹಕರು ಹವಾಲಾ ರೂಪದಲ್ಲಿ ಆರೋಪಿ ಇಬ್ರಾಹಿಂಗೆ ಹಣ ನೀಡುತ್ತಿದ್ದರು.
ಕಳೆದ ಒಂದೂವರೆ ವರ್ಷದಿಂದ ಇಬ್ರಾಹಿಂ ಈ ರೀತಿಯ ಅಕ್ರಮ ವಹಿವಾಟು ನಡೆಸುತ್ತಿದ್ದ. ಆದರೆ, ತಾನು ಸೇವೆ ನೀಡುತ್ತಿದ್ದ ಗ್ರಾಹಕರ ಬಗ್ಗೆ ಮಾಹಿತಿ ಹೊಂದಿಲ್ಲ ಎಂದು ತಿಳಿಸಿದ್ದಾನೆ. ಆದರೆ, ಆತನ ಬಳಿ 900ಕ್ಕೂ ಹೆಚ್ಚು ಸಿಮ್ ಕಾರ್ಡ್ ಬಳಕೆಯಾಗಿರುವ ಬಗ್ಗೆ ಮಾಹಿತಿಗಳು ತನಿಖಾ ತಂಡಕ್ಕೆ ಸಿಕ್ಕಿದ್ದು ಅದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ರಾಹಿಂ ಕರ್ನಾಟಕ ಮಾತ್ರವಲ್ಲದೆ, ಕೇರಳ, ತಮಿಳುನಾಡಿನಲ್ಲಿಯೂ ಸಿಮ್ ಪಡೆದಿದ್ದ. ಅದರಲ್ಲೂ ಅತಿ ಹೆಚ್ಚು ಸಿಮ್ ಗಳು ಆತನ ಸ್ವಗ್ರಾಮ ಕೇರಳದ ಮಲಪ್ಪುರಂ ಹೆಸರಿನಲ್ಲೇ ಇದೆ.
ಪಾಕಿಸ್ತಾನಿ ಗೂಢಚರರು ಕರೆ ಮಾಡುತ್ತಿದ್ದ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಯಾವ ಉದ್ದೇಶಕ್ಕೆ ಕರೆ ಮಾಡುತ್ತಿದ್ದರು. ಯಾರ ಜೊತೆ ಮಾತನಾಡುತ್ತಿದ್ದರು ಅನ್ನೋದ್ರ ಬಗ್ಗೆ ಇನ್ನೂ ತನಿಖೆಯಲ್ಲಿ ಮಾಹಿತಿ ಬೆಳಕಿಗೆ ಬಂದಿಲ್ಲ. ಬಂಧಿತ ಇಬ್ರಾಹಿಂಗೆ ಪಾಕಿಸ್ತಾನದ ಉಗ್ರರ ನೆಟ್ವರ್ಕ್ ಇತ್ತೇ ಅನ್ನುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಆದರೆ, ಟೆಲಿಕಾಂ ಪ್ರಾಧಿಕಾರದ ಕಾನೂನು ಉಲ್ಲಂಘಿಸಿ, ಅಂತಾರಾಷ್ಟ್ರೀಯ ಕರೆಗಳನ್ನು ಪರಿವರ್ತಿಸುತ್ತಿದ್ದ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
The Military Intelligence (MI) and the Anti-Terror Cell of Bengaluru Police have arrested two men Ibrahim Pullatti Bin Mohammed Kutty (36) hailing from Malappuram in Kerala and Gautham B Vishwanatha (27) from Tirupur in Tamil Nadu for running an illegal phone exchange that helped Pakistan spies to extract information related to the Indian Army.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm