ಬ್ರೇಕಿಂಗ್ ನ್ಯೂಸ್
11-06-21 05:00 pm Headline Karnataka News Network ಕರ್ನಾಟಕ
ಬೆಂಗಳೂರು, ಜೂನ್ 11: ರಾಜ್ಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಎಲ್ಲಾ ಕಾಲೇಜುಗಳಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಆನ್ಲೈನ್ ಪರೀಕ್ಷೆ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ. ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಎರಡು ವಿಷಯಗಳಿಗೆ ಪರೀಕ್ಷೆ ನೀಡಲು ಸೂಚನೆ ನೀಡಲಾಗಿದೆ.
ಈ ಹಿಂದೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪಾಸ್ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದರು. ಆದರೆ ಇದೀಗ ಆನ್ಲೈನ್ ಪರೀಕ್ಷೆ ಕಡ್ಡಾಯ ಎಂದು ತಿಳಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸುವುದಿಲ್ಲ. ಆದರೆ ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಪಿಯು ಬೋರ್ಡ್, ಎರಡು ಮಾದರಿಯ ಪ್ರಶ್ನೆ ಪತ್ರಿಕೆ ರೂಪಿಸಿದ್ದು, ಪಿಯು ಬೋರ್ಡ್ ವೆಬ್ಸೈಟ್ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಿರಲಿದೆ.
ಇಲಾಖೆಯ ವೆಬ್ಸೈಟ್ನಲ್ಲಿರುವ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಂಡು ಉತ್ತರ ಬರೆದು ವಾಟ್ಸ್ಆಪ್, ಇಮೇಲ್ ಅಂಚೆ ಮೂಲಕ ಉಪನ್ಯಾಸಕರಿಗೆ ಉತ್ತರ ಪತ್ರಿಕೆ ಕಳುಹಿಸಬೇಕು.
ಉಪನ್ಯಾಸಕರು ಏನು ಮಾಡಬೇಕು?
ವಿದ್ಯಾರ್ಥಿಗಳು ಕಳುಹಿಸಿದ ಉತ್ತರ ಪತ್ರಿಕೆಗಳನ್ನು ಉಪನ್ಯಾಸಕರು ಮೌಲ್ಯಮಾಪನ ಮಾಡಿ Students Achievement Tracking System ನಲ್ಲಿ ಫಲಿತಾಂಶವನ್ನು ಅಪ್ಲೋಡ್ ಮಾಡಬೇಕು.
ಅಸೆಸ್ಮೆಂಟ್ ವಿಧದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಅಸೆಸ್ಮೆಂಟ್ಗೆ ಜೂನ್ 20 ಕೊನೆಯ ದಿನವಾಗಿದ್ದು, ಉಪನ್ಯಾಸಕರು ಜೂನ್ 25ರೊಳಗೆ ಮೌಲ್ಯಮಾಪನ ಮಾಡುವಂತೆ ಸೂಚಿಸಲಾಗಿದೆ. ಎರಡನೇ ಅಸೆಸ್ಮೆಂಟ್ಗೆ ಜೂನ್ 26 ಕೊನೆ ದಿನವಾಗಿದ್ದು, ಜುಲೈ 5ರ ಒಳಗೆ ಮೌಲ್ಯಮಾಪನ ನಡೆಸಲಾಗುತ್ತದೆ.
Online Exam to be Conducted for 1st PUC Students says Karnataka Education Department
17-04-25 05:01 pm
Bangalore Correspondent
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
ಒಂದನೇ ತರಗತಿಗೆ ಪ್ರವೇಶ ; ಈ ವರ್ಷಕ್ಕೆ ಮಾತ್ರ ಮಕ್ಕಳ...
16-04-25 09:07 pm
Bigg Boss Kannada, Rajath arrested: ರೀಲ್ಸ್ ಶೋ...
16-04-25 06:42 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
17-04-25 11:06 pm
Mangalore Correspondent
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
Mangalore Traffic diversion, Anti Waqf bill p...
16-04-25 08:22 pm
17-04-25 09:56 pm
Mangalore Correspondent
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am
Air Hostess, ICU, Sexual Harrasment: ICU ನಲ್ಲ...
15-04-25 10:24 pm
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm