ಬ್ರೇಕಿಂಗ್ ನ್ಯೂಸ್
02-05-21 10:59 am Bangalore Correspondent ಕರ್ನಾಟಕ
ಬೆಂಗಳೂರು, ಮೇ 2: ಕಳೆದ ಐದಾರು ದಿನಗಳಿಂದ ಚಾಲ್ತಿಯಲ್ಲಿರುವ ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ನಲ್ಲಿ ಮತ್ತೊಂದು ಬದಲಾವಣೆಯನ್ನು ಮಾಡಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಕೊರೊನಾ ಹಾವಳಿಯ ನಂತರ ಹೊರಡಿಸುವ ಮಾರ್ಗಸೂಚಿಯ ಮೇಲೆ ನಿಂತುಕೊಳ್ಳುವಲ್ಲಿ ಸತತವಾಗಿ ವಿಫಲರಾಗುತ್ತಿರುವ ಯಡಿಯೂರಪ್ಪನವರ ಸರಕಾರದ ವಿರುದ್ದ ಜನಸಾಮಾನ್ಯರ ಲೇವಡಿ ಮುಂದುವರಿಯುತ್ತಲೇ ಇದೆ.
ಹೊಸ ಸೋಂಕಿತರ ಸಂಖ್ಯೆ ಒಂದೇ ಸಮನೆ ಜಾಸ್ತಿಯಾಗುತ್ತಿರುವ ಈ ಸಮಯದಲ್ಲಿ, ಸಾರ್ವಜನಿಕರ ಸಹಕಾರ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಲಾಕ್ ಡೌನ್ ಮೊದಲ ದಿನದಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬರುವುದು ಕಮ್ಮಿಯಿತ್ತು, ಬರಬರುತ್ತಾ ಅದು ನಿಯಂತ್ರಣ ತಪ್ಪುತ್ತಿದೆ.
ಯಾಕೋ ಏನೋ, ಕೊರೊನಾ ನಿರ್ವಹಣೆಯನ್ನು ಕೈಚೆಲ್ಲಿದಂತೆ ಕಾಣುತ್ತಿರುವ ಯಡಿಯೂರಪ್ಪನವರಿಗೆ ಸೂಕ್ತ ಐಎಎಸ್/ಐಪಿಎಸ್ ಅಧಿಕಾರಿಗಳ ಸಮಯೋಚಿತ ಸಲಹೆಗಳ ಕೊರತೆ ಕಾಡುತ್ತಿದೆಯಾ ಎನ್ನುವ ಪ್ರಶ್ನೆ ಏಳಲಾರಂಭಿಸಿದೆ. ಇದು ಹೌದೇ ಆದಲ್ಲಿ, ಇಂತಹ ಗಂಭೀರ ಆರೋಗ್ಯ ತುರ್ತು ಪರಿಸ್ಥಿತ ವೇಳೆ ಸಿಎಂ ಇದನ್ನು ಸರಿದಾರಿಗೆ ತರಬೇಕಾಗಿದೆ.
ಗಾರ್ಮೆಂಟ್ಸ್ ವಲಯದಿಂದ ತೀವ್ರ ಒತ್ತಡ ಬಂದ ನಂತರ ಇದರಲ್ಲಿ ಬದಲಾವಣೆ;
ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಬರಬಾರದು ಎನ್ನುವ ಕಾರಣಕ್ಕಾಗಿ ಕೈಗಾರಿಕೆ ಯಥಾಸ್ಥಿತಿ ಮುಂದುವರಿಸಲು ಸರಕಾರ ಅನುಮೋದನೆ ನೀಡಿತು. ಆದರೆ, ಇದರಲ್ಲಿ ಗಾರ್ಮೆಂಟ್ಸ್ ವಲಯವನ್ನು ಕೈಬಿಟ್ಟಿತು. ಗಾರ್ಮೆಂಟ್ಸ್ ವಲಯದಿಂದ ತೀವ್ರ ಒತ್ತಡ ಬಂದ ನಂತರ ಇದರಲ್ಲಿ ಬದಲಾವಣೆಯನ್ನು ಮಾಡಿ ಶೇ. 50 ನೌಕರರು ಕೆಲಸ ಮಾಡಲು ಅನುಮತಿ ನೀಡಿತು. ಇದು ಮಾರ್ಗಸೂಚಿಯ ಮೊದಲನೇ ಬದಲಾವಣೆ.
ಎರಡನೇ ಬದಲಾವಣೆ ಹಾಲು ಮಾರಾಟದ ಸಮಯದ ಅವಧಿ;
ಎರಡನೇ ಬದಲಾವಣೆ ಹಾಲು ಮಾರಾಟದ ಸಮಯದ ಅವಧಿಯಲ್ಲಿ. ಲಾಕ್ ಡೌನ್ ಆರಂಭವಾದಗ ಬೆಳಗ್ಗೆ ಆರರಿಂದ ಹತ್ತರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಜನಸಾಮಾನ್ಯರಿಗೆ ಇದರಿಂದ ತೊಂದರೆ ಎನ್ನುವುದಕ್ಕಿಂತ ಹಾಲು ಉತ್ಪನ್ನಗಳು ತುಂಬಾ ವೇಸ್ಟ್ ಆಗುತ್ತಿರುವುದರಿಂದ ಸಮಯದಲ್ಲಿ ಸರಕಾರ ಬದಲಾವಣೆ ಮಾಡಿತು. ಈಗ, ಬೆಳಗ್ಗೆ ಆರರಿಂದ ರಾತ್ರಿ ಎಂಟರವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ದಿನಸಿ ಅಂಗಡಿಗಳ ಸಮಯದಲ್ಲಿ ಬದಲಾವಣೆ ಮಾಡಿದ ಸರಕಾರ;
ಮೂರನೇ ಬದಲಾವಣೆ ಎಂದರೆ ದಿನಸಿ ಅಂಗಡಿಗಳ ಸಮಯದಲ್ಲಿ. ಬೆಳಗ್ಗೆ ಆರರಿಂದ ಹತ್ತರವರೆಗೆ ಇದ್ದ ಸಮಯವನ್ನು ಈಗ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೆ ಎಪಿಎಂಸಿ ಅಂಗಡಿಗಳೂ ಹನ್ನೆರಡು ಗಂಟೆಯವರೆಗೆ ಓಪನ್ ಮಾಡಬಹುದಾಗಿದೆ.
ತಳ್ಳುಗಾಡಿ ಮೂಲಕ ಹಣ್ಣು ತರಕಾರಿ ಮಾರಲು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಅನುಮತಿ;
ನಾಲ್ಕನೇ ಬದಲಾವಣೆ ಎಂದರೆ ಜನದಟ್ಟಣೆ ತಪ್ಪಿಸುವ ಸಲುವಾಗಿ ಎಲ್ಲಾ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಇದರ ಬದಲು, ತಳ್ಳುಗಾಡಿ ಮೂಲಕ ಹಣ್ಣು ತರಕಾರಿ ಮಾರಲು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಅನುಮತಿ ನೀಡಲಾಗಿದೆ.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm