ಬ್ರೇಕಿಂಗ್ ನ್ಯೂಸ್
21-04-21 01:28 pm Headline Karnataka News Network ಕರ್ನಾಟಕ
ಬೆಂಗಳೂರು, ಎ.21: ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಾಕ್ಡೌನ್ ಅನಿವಾರ್ಯ. ಲಾಕ್ಡೌನ್ ಮಾಡಿದರೆ, ಜನರು ಏನೂ ಮುಳುಗಿ ಹೋಗುವುದಿಲ್ಲ. ಸರಕಾರ ಆರ್ಥಿಕ ನಷ್ಟದ ಮಾನದಂಡ ಮುಂದಿಟ್ಟುಕೊಂಡು ಲಾಕ್ಡೌನ್ ಮಾಡುತ್ತಿಲ್ಲ. ಇದರಿಂದ ಅಪಾಯವನ್ನು ಸರಕಾರ ಆಹ್ವಾನಿಸಿಕೊಳ್ಳುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಎಚ್ಡಿಕೆ, ಕಳೆದ ಬಾರಿ ಸೋಂಕಿನ ಆರಂಭದಲ್ಲಿಯೇ ಲಾಕ್ಡೌನ್ ಘೋಷಿಸಲಾಗಿತ್ತು. ಅದರಿಂದ ಸ್ವಲ್ಪಮಟ್ಟಿಗೆ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಈ ಬಗ್ಗೆ ಮಾರ್ಚ್ 15ರಂದೇ ನಾನು ಟ್ವೀಟ್ ಮಾಡಿ ಹೇಳಿದ್ದೆ. ಆದರೆ ಸರಕಾರ ಆರ್ಥಿಕತೆಗೆ ಹೊಡೆತ ಬೀಳುವ ಕಾರಣಕ್ಕೆ ಲಾಕ್ಡೌನ್ ಮಾಡಲು ಮುಂದಾಗುತ್ತಿಲ್ಲ. ಕಳೆದ ವರ್ಷ ಲಾಕ್ಡೌನ್ ಮಾಡಿದ ಸರಕಾರ ಅಥವಾ ಜನರು ಮುಳುಗಿ ಹೋಗಲಿಲ್ಲ. ರಾತ್ರಿ ಕರ್ಫ್ಯೂ ಹೇರುವ ಮೂಲಕ ಯಾವುದೇ ರೀತಿಯಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ. ರಾಜ್ಯ ಸರಕಾರ ದಿವಾಳಿಯಾಗಿಲ್ಲ. ಆರ್ಥಿಕ ಸ್ಥಿತಿಯ ಕಾರಣಕ್ಕೆ ಲಾಕ್ಡೌನ್ ಮಾಡದೇ ದೂರ ಉಳಿಯಬಾರದು. ದೊಡ್ಡ ನಗರಗಳಲ್ಲಿ ತಕ್ಷಣವೇ ಲಾಕ್ಡೌನ್ ಘೋಷಣೆ ಮಾಡಬೇಕು. ಮಹಾರಾಷ್ಟ್ರ ಸೇರಿದಂತೆ ಸೋಂಕು ಹೆಚ್ಚಿರುವ ರಾಜ್ಯಗಳಿಂದ ಜನರು ಬರದಂತೆ ತಡೆಯಬೇಕು ಎಂದು ಹೇಳಿದ್ದಾರೆ.
ತಜ್ಞರ ವರದಿಯನ್ನು ನಿರ್ಲಕ್ಷಿಸಿದ್ದು ತಪ್ಪು
ರಾಜ್ಯ ಸರಕಾರವೇ ರಚಿಸಿರುವ ತಜ್ಞರ ಸಮಿತಿ ನವೆಂಬರ್ ತಿಂಗಳಿನಲ್ಲೇ ಕೊರೊನೊ ಸೋಂಕು ತೀವ್ರವಾಗಿ ಹರಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ, ರಾಜ್ಯ ಸರಕಾರ ಆ ವರದಿಯನ್ನು ನಿರ್ಲಕ್ಷಿಸಿರುವುದು ದೊಡ್ಡ ಅಪರಾಧ ಎಂದು ವಿರೋಧ ಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸರ್ವಪಕ್ಷ ಸಭೆಯನ್ನು ರಾಜ್ಯಪಾಲರು ಕರೆದಿರುವುದಕ್ಕೆ ಆರಂಭದಲ್ಲೇ ಅಪಸ್ವರ ಎತ್ತಿದ ಸಿದ್ದರಾಮಯ್ಯ, ರಾಜ್ಯಪಾಲರು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದೇ ಸಂವಿಧಾನಬಾಹಿರ. ರಾಜ್ಯದ ಆಡಳಿತದಲ್ಲಿ ರಾಜ್ಯಪಾಲರಿಗೆ ಹಸ್ತಕ್ಷೇಪ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಹಾಗಾಗಿ ಈ ಸಭೆ ಕರೆದಿರುವುದಕ್ಕೆ ನನ್ನ ಸಂವಿಧಾನಾತ್ಮಕ ತಕರಾರು ಇದೆ ಎಂದು ಹೇಳಿದರು.
ಈ ಸಭೆಯ ಅಭಿಪ್ರಾಯಗಳ ಆಧಾರದಲ್ಲಿ ರಾಜ್ಯಪಾಲರು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಂಪುಟ ಸದಸ್ಯರೇ ತೀರ್ಮಾನ ತೆಗೆದುಕೊಳ್ಳಬೇಕು. ಈ ಬಗ್ಗೆ ಯಡಿಯೂರಪ್ಪ ಅವರು ಅಡ್ವೊಕೇಟ್ ಜನರಲ್ ಬಳಿ ಚರ್ಚಿಸಿದ್ದಾರೆಯೋ ತಿಳಿಯದು. ಆದರೂ, ರಾಜ್ಯಪಾಲರ ಹುದ್ದೆಗೆ ಗೌರವ ಕೊಟ್ಟು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹೇಳಿದ್ದೇನೆ ಎಂದರು ಸಿದ್ದರಾಮಯ್ಯ.
No one will sink if the Government orders for lockdown slams JDS HD Kumaraswamy in Bengaluru.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm