ಬ್ರೇಕಿಂಗ್ ನ್ಯೂಸ್
14-03-21 01:14 pm Mangaluru Crime correspondent ಕರ್ನಾಟಕ
ಮಂಗಳೂರು, ಮಾ.14: ಆರೋಪಿಗಳ ಕಾರನ್ನು ಮಾರಾಟ ಮಾಡಿ, ಹಣ ಹಂಚಿಕೊಂಡ ಪ್ರಕರಣ ಹೊರಬಿದ್ದ ಬಳಿಕ ಮಂಗಳೂರು ಪೊಲೀಸರ ಮೇಲೆ ನಂಬಿಕೆಯೇ ಹೊರಟು ಹೋಗಿದೆ. ಸಿಸಿಬಿ ಪೊಲೀಸರ ಮೇಲಂತೂ ಆಬಳಿಕ ಸರಣಿಯಾಗಿ ಆರೋಪಗಳು ಕೇಳಿಬಂದಿವೆ. ಹಣ ಕಳಕೊಂಡವರು ಸ್ವತಃ ಡಿಸಿಪಿ, ಕಮಿಷನರ್ ಮುಂದೆ ಬಂದು ದೂರು ಹೇಳಿಕೊಳ್ಳುತ್ತಿದ್ದಾರೆ. ಇದಲ್ಲದೆ, 20ಕ್ಕಿಂತಲೂ ಹೆಚ್ಚು ಮಂದಿ ನೇರವಾಗಿ ರಾಜ್ಯ ಪೊಲೀಸ್ ವರಿಷ್ಠರಿಗೆ (ಡಿಜಿಪಿ) ಈ ಬಗ್ಗೆ ದೂರು ನೀಡಿದ್ದಾರೆ.
ಸಿಸಿಬಿ ಪೊಲೀಸರ ಮೇಲಿನ ಗುರುತರ ಆರೋಪಗಳು ಸದ್ದು ಮಾಡಿರುವಾಗಲೇ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣದಲ್ಲಿ ನಾರ್ಕೋಟಿಕ್ ಮತ್ತು ಇಕನಾಮಿಕ್ ಕ್ರೈಮ್ ಠಾಣೆ ಪೊಲೀಸರು ತನಿಖೆಯ ನಾಟಕವಾಡಿ, ಆರೋಪಿಗಳನ್ನು ರಕ್ಷಣೆ ಮಾಡಿರುವ ಆರೋಪ ಕೇಳಿಬಂದಿದೆ. ತನಿಖೆಯ ನಾಟಕವಾಡುತ್ತಾ ಒಂದು ವರ್ಷದಿಂದ ದೂರುದಾರರನ್ನು ಸತಾಯಿಸಿದ್ದಲ್ಲದೆ, ಆರೋಪಿಗಳ ರಕ್ಷಣೆಗೆ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.
ಆಕೆಯ ಹೆಸರು ಅಂಜಲಿ. (ಅವರ ಕೋರಿಕೆಯಂತೆ ಹೆಸರು ಬದಲಿಸಿದೆ) ಸುದೀರ್ಘ ಕಾಲದ ವಂಚನೆಯ ಬಳಿಕ ಆಕೆ ಪಾಂಡೇಶ್ವರದ ಇಕನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಗೆ ತೆರಳಿದ್ದರು. ಅದರಂತೆ, 2020ರ ಮಾರ್ಚ್ 6ರಂದು ಎಫ್ಐಆರ್ ದಾಖಲಾಗಿತ್ತು. ಕಂಕನಾಡಿಯಲ್ಲಿ ಬಿರಿಯಾನಿ ಪ್ಯಾರಡೈಸ್ ರೆಸ್ಟೋರೆಂಟ್ ಹೊಂದಿರುವ ಮಹಮ್ಮದ್ ಸಂಶೀರ್ ಮತ್ತು ಆತನ ಮಗ ನಿಹಾಲ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ದಾಖಲಾಗಿ, ಒಂದು ವರ್ಷ ಕಳೆದರೂ, ನಾರ್ಕೋಟಿಕ್ ಠಾಣೆಯ ಪೊಲೀಸರು ತನಿಖೆಯ ನಾಟಕವಾಡಿದ್ದು ಬಿಟ್ಟರೆ ಅವರನ್ನು ಬಂಧಿಸಿ, ಚಾರ್ಜ್ ಶೀಟ್ ಹಾಕಿಲ್ಲ. ಬದಲಿಗೆ, ಸಂತ್ರಸ್ತರನ್ನು ಠಾಣೆಯಿಂದ ಠಾಣೆಗೆ ಓಡಾಡುವಂತೆ ಮಾಡಿದ್ದಾರಂತೆ.
ಮನೆ ಮಗನಂತಿದ್ದ ನಿಹಾಲ್ ದುಷ್ಟನಾಗಿದ್ದ
ಮಹಿಳೆ ಮೂಲತಃ ಎನ್ಆರ್ ಐ ಆಗಿದ್ದವರು. ಗಲ್ಫ್ ನಲ್ಲಿ ಬಿಸಿನೆಸ್ ಇದ್ದುದರಿಂದ ಬೇಕಾದಷ್ಟು ಹಣ, ಆಸ್ತಿ ಇತ್ತು. ಆರಂಭದಲ್ಲಿ ಮಗನ ಮೂಲಕ ಗೆಳೆತನ ಸಂಪಾದಿಸಿದ ನಿಹಾಲ್ ಅಹ್ಮದ್, ಅಪ್ಪನ ಬಿರಿಯಾನಿ ಪ್ಯಾರಡೈಸ್ ನಿಂದ ದಿನವೂ ಬಿರಿಯಾನಿ ತಂದು ಕೊಡುತ್ತಿದ್ದ. ಹೀಗೆ ಪರಿಚಯ ಆದವನು ಮಹಿಳೆಯ ಸಿರಿವಂತಿಕೆ, ಕುಟುಂಬದ ಐಷಾರಾಮಿ ಜೀವನವನ್ನು ಹತ್ತಿರದಿಂದ ನೋಡುತ್ತಾನೆ. ಇದೇ ವೇಳೆ, ಒಮ್ಮೆ ಗಲ್ಫ್ ಹೊರಟಿದ್ದ ಮಹಿಳೆ ತನ್ನ ಬಳಿಯಿದ್ದ ಬಿಎಂಡಬ್ಲ್ಯು ಎಕ್ಸ್ 3 ಕಾರನ್ನು ಮಾರಾಟ ಮಾಡುವ ಬಗ್ಗೆ ಹೇಳುತ್ತಾರೆ. ಈ ವಿಚಾರ ತಿಳಿದ ನಿಹಾಲ್, ಕೂಡಲೇ ತಾನೇ ಅದನ್ನು ಮಾರಾಟ ಮಾಡುತ್ತೇನೆ. ಸೈನ್ ಅಥಾರಿಟಿ ನಂಗೆ ಕೊಟ್ಟು ಬಿಡಿ. ಅದಕ್ಕಾಗಿ ಅಗ್ರೀಮೆಂಟ್ ಮಾಡಿಸಿ. ನಿಮ್ಗೆ ಒಂದು ವರ್ಷದಲ್ಲಿ ಹಣ ಹಾಕ್ತೀನಿ ಎಂದಿದ್ದ. ಮನೆ ಮಗನಂತಿದ್ದ ನಿಹಾಲ್ ಮಾತನ್ನು ನಂಬಿದ ಮಹಿಳೆ, 48 ಲಕ್ಷ ರೂ.ಗೆ ಕಾರು ಮಾರಾಟ ಮಾಡುವ ಬಗ್ಗೆ ಅಗ್ರೀಮೆಂಟ್ ಮಾಡಿಸಿದ್ದರು. 2013-14ರಲ್ಲಿ ಈ ಪ್ರಸಂಗ ಆಗಿತ್ತು.
ನಿಹಾಲ್ ಅಹ್ಮದ್ ವರ್ಷ ಕಳೆದರೂ, ಹಣ ಮರಳಿಸದ ಕಾರಣ ಮಹಿಳೆ ಹಣ ಹಿಂತಿರುಗಿಸುವಂತೆ ಕೇಳಿದ್ದಾರೆ. ಆದರೆ, ನಿಹಾಲ್ ಮತ್ತೆ ನಾಟಕವಾಡಿದ್ದು, ಆ ಹಣವನ್ನು ಬೆಂಗಳೂರಿನಲ್ಲಿ ಬೇರೆ ಒಂದು ಲ್ಯಾಂಡಿಗೆ ಇನ್ವೆಸ್ಟ್ ಮಾಡಿದ್ದೇನೆ. ಅದನ್ನು ಮರಳಿಸಲು ಒಂದಷ್ಟು ಡೆವಲಪ್ ಮೆಂಟಿಗೆ ಹಣ ಬೇಕು ಎಂದಿದ್ದಾನೆ. ನಿಮ್ಮಲ್ಲಿ ಬೇರೆ ಹಣ ಇದ್ದರೆ, ಹಾಕಿ. ಡಬಲ್ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ, ಲ್ಯಾಂಡ್ ಡೆವಲಪ್ ಮೆಂಟ್ ಮಾಡಲು ಹಣ ಹೂಡಿಕೆ ಮಾಡಿದರೆ, ಬೆಂಗಳೂರಿನಲ್ಲಿ ಕೋಟಿ ಬೆಲೆಯ ಫ್ಲಾಟ್ ಮತ್ತು ನೀವು ನೀಡಿದ ಪೂರ್ತಿ ಹಣವನ್ನು ಮರಳಿಸುತ್ತೇವೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ.
ಮರುಳು ಮಾತು ನಂಬಿ ಆಸ್ತಿ ಮಾರಿದ್ದರು !
ನಿಹಾಲ್ ಅಹ್ಮದನ ಮರುಳು ಮಾತನ್ನು ನಂಬಿದ ಮಹಿಳೆ, ಪಚ್ಚನಾಡಿಯಲ್ಲಿದ್ದ 75 ಲಕ್ಷ ಬೆಲೆಯ 25 ಸೆಂಟ್ ಭೂಮಿ, ಕಂಕನಾಡಿಯ ವಿಂಟೇಜ್ ಅಪಾರ್ಟ್ಮೆಂಟಿನಲ್ಲಿದ್ದ 48 ಲಕ್ಷದ ಒಂದು ಮನೆ ಮತ್ತು ಬಿಜೈನ ಈಡನ್ ಪ್ಯಾರಡೈಸ್ ನಲ್ಲಿದ್ದ 26 ಲಕ್ಷದ ಫ್ಲಾಟನ್ನು ಮಾರಾಟ ಮಾಡುತ್ತಾರೆ. ಅದಕ್ಕೆ, ಕೂಡಲೇ ಖರೀದಿದಾರರನ್ನೂ ನಿಹಾಲ್ ತಂದಿದ್ದ. ಇದೇ ವೇಳೆ, ಕೊಟ್ಟಾರದಲ್ಲಿದ್ದ 1.20 ಕೋಟಿ ಮೌಲ್ಯದ ಏಳು ಸೆಂಟ್ ಲ್ಯಾಂಡ್ ಮತ್ತು ಮನೆಯನ್ನೂ ಮಾರಾಟ ಮಾಡುತ್ತಾರೆ. ನಾಲ್ಕು ಕಡೆಯೂ ಜಾಗ, ಮನೆ ಮಾರಾಟ ಮಾಡಿ, ಅದರ ಹಣವನ್ನು ಬೆಂಗಳೂರಿನ ಲ್ಯಾಂಡ್ ಡೆವಲಪ್ ಮಾಡೋಕೆ ಅಂತ ಒಟ್ಟು 3.20 ಕೋಟಿ ಹಣವನ್ನು ನಿಹಾಲ್ ಮತ್ತು ಆತನ ತಂದೆ ಶಂಸೀರ್ ಸೇರಿ ಪಡೆದುಕೊಂಡಿದ್ದಾರೆ. ಹೀಗೆ ಹಣವನ್ನು ಆರ್ ಟಿಜಿಎಸ್ ಮತ್ತು ನೆಫ್ಟ್ ಮೂಲಕ ನೀಡಿದ್ದು ಎಲ್ಲದಕ್ಕೂ ಮಹಿಳೆ ಡಾಕ್ಯುಮೆಂಟ್ ಹೊಂದಿದ್ದಾರೆ.
2015ರಲ್ಲಿ ಮಾರಾಟ ಪ್ರಕ್ರಿಯೆ ನಡೆದು, ಹಣ ಪಡೆದುಕೊಂಡಿದ್ದ ನಿಹಾಲ್ ಮತ್ತು ಆತನ ತಂದೆ ಬಳಿಕ ಮಹಿಳೆಯ ಸಂಪರ್ಕವನ್ನು ಕಡಿದುಕೊಳ್ಳುತ್ತಾರೆ. ಆನಂತ್ರ ಫೋನಲ್ಲಿ ಹಣವನ್ನು ಕೇಳಿದಾಗ, ಬೆಂಗಳೂರಿನ ಜಮೀನಲ್ಲಿ ದೊಡ್ಡ ಅಪಾರ್ಟ್ಮೆಂಟ್ ರೆಡಿಯಾಗಿದ್ದು ಸೇಲ್ ಆದಕೂಡಲೇ ಹಣ ಹಿಂತಿರುಗಿಸುತ್ತೇವೆ ಎಂದು ನಂಬಿಸಿದ್ದಾರೆ. ಬೆಂಗಳೂರಿನ ಅಪಾರ್ಟ್ಮೆಂಟ್ ರೆಡಿಯಾಗುತ್ತಿರುವ ಬಗ್ಗೆ ಮೇನಾರ್ ಚೌರಾಸಿಯಾ ಹೆಸರಲ್ಲಿದ್ದ ಬ್ರೋಷರನ್ನು ತಂದು ತೋರಿಸಿದ್ದಾರೆ. ಜೊತೆಗೆ, ಅಲ್ಲಿನ ಲ್ಯಾಂಡಲ್ಲಿ ಫ್ಲಾಟ್, ಸೈಟ್ ರೆಡಿಯಾಗುತ್ತಿರುವ ಬಗ್ಗೆ ನಕ್ಷೆ ತೋರಿಸಿದ್ದು, ಮಹಿಳೆ ಮತ್ತು ಆಕೆಯ ಮಗ ಅದನ್ನೇ ಸತ್ಯವೆಂದು ನಂಬಿದ್ದರು. ಆದರೆ, 2019ರ ಹೊತ್ತಿಗೆ ನಿಹಾಲ್ ಗೆ ಫೋನ್ ಮಾಡಿ ಸಾಕಾಗಿದ್ದ ಮಹಿಳೆಗೆ, ಆತ ವಂಚಿಸುತ್ತಿರುವುದು ಅರಿವಿಗೆ ಬಂದಿದೆ. ಫೋನ್ ಮಾಡಿದ್ರೂ, ಸೂಕ್ತ ಉತ್ತರ ನೀಡದೆ ನಾನು ಹೈದರಾಬಾದ್, ಮುಂಬೈನಲ್ಲಿದ್ದೇನೆ ಎನ್ನುತ್ತಿದ್ದ.
ಕಳೆದ ಕೊರೊನಾ ಲಾಕ್ಡೌನ್ ಆಗುವುದಕ್ಕಿಂತ ಮೊದಲು ಮರಳಿ ಮಂಗಳೂರಿಗೆ ಮರಳಿದ್ದ ಮಹಿಳೆಗೆ ತಾನು ನಲ್ವತ್ತು ವರ್ಷಗಳ ಕಾಲ ದುಡಿದು ಮಾಡಿಟ್ಟ ಹಣ, ಆಸ್ತಿ ಎಲ್ಲವೂ ಕಳಕೊಂಡಿದ್ದು ಅರಿವಿಗೆ ಬಂತು. ಮೂರೂವರೆ ಕೋಟಿಯ ಆಸ್ತಿ ಹೋಯ್ತು. ಲಾಕ್ಡೌನ್ ಆಗಿ ಗಲ್ಫ್ ನಲ್ಲಿದ್ದ ಬಿಸಿನೆಸ್ಸೂ ಹೋಯ್ತು ಅನ್ನುವ ಚಿಂತೆಯಲ್ಲಿ ಮಂಗಳೂರಿನ ಡಿಸಿಪಿ ಆಗಿದ್ದ ವಿನಯ ಗಾಂವ್ಕರ್ ಬಳಿ ತೆರಳಿ, ವಿಷ್ಯವನ್ನು ಹೇಳುತ್ತಾರೆ. ಕೂಡಲೇ, ನಾರ್ಕೋಟಿಕ್ ಠಾಣೆಯಲ್ಲಿ ಕೇಸು ದಾಖಲಿಸಲು ಗಾಂವ್ಕರ್ ಸೂಚನೆ ನೀಡಿದ್ದರು. ಡಿಸಿಪಿಯ ಸೂಚನೆಯಂತೆ ಎಫ್ಐಆರ್ ದಾಖಲಾಗಿತ್ತು. ಆದರೆ, ಆನಂತರ ಆಗಿದ್ದು ಮಾತ್ರ ಬೇರೆ.
ಬಹುಕೋಟಿ ವಂಚನೆಗೆ ಒಂದೇ ಎಫ್ಐಆರ್ !
ಮಹಿಳೆ ದೂರು ನೀಡಿದ್ದು ಗೊತ್ತಾದ ಕೂಡಲೇ ಅದೇ ನಿಹಾಲ್ ಅಹ್ಮದ್ ನಿಂದ ವಂಚನೆಗೊಳಗಾದ ಐದಕ್ಕೂ ಹೆಚ್ಚು ಕುಟುಂಬಗಳು ಅದೇ ಠಾಣೆಯಲ್ಲಿ ದೂರು ನೀಡಿವೆ. ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಮಾತ್ರ, ಬೇರೆ ಬೇರೆ ಕಡೆಯಿಂದ ಬಂದ ದೂರುಗಳನ್ನು ಪಡೆದು ಒಂದೇ ಎಫ್ಐಆರ್ ಮಾಡಿದ್ದರು. ಪ್ರತ್ಯೇಕ ಎಫ್ಐಆರ್ ಮಾಡದೆ, ಆರೋಪಿಗಳಿಗೆ ಒಳಿತಾಗುವ ಕೆಲಸ ಮಾಡಿದ್ದರು. ಅಷ್ಟೇ ಆಗಿದ್ದರೆ ಚಿಂತೆ ಇಲ್ಲ. ಆರೋಪಿಯನ್ನು ಠಾಣೆಗೆ ಕರೆತಂದು ದೂರು ಕೊಟ್ಟ ಸಂತ್ರಸ್ತರ ಎದುರಲ್ಲೇ ಆತನಿಗೆ ರಾಜಮರ್ಯಾದೆ ಕೊಟ್ಟಿರುವ ಬಗ್ಗೆ ಮಹಿಳೆ ಮತ್ತು ಆಕೆಯ ಮಗ ಆರೋಪ ಮಾಡಿದ್ದಾರೆ.
ಅಲ್ಲೀವರೆಗೂ ಸಿರಿವಂತಿಕೆಯಲ್ಲೇ ಕಾಲ ಕಳೆದಿದ್ದ ಮಹಿಳೆ ಮತ್ತು ಕುಟುಂಬ ಕೊರೊನಾ ಲಾಕ್ಡೌನ್ ಬಳಿಕ ಅಕ್ಷರಶಃ ಬೀದಿಗೆ ಬಂದಿದೆ. ಒಂದೆಡೆ ಇದ್ದ ಸ್ವಂತ ಮನೆಯೂ ಇಲ್ಲ. ಬಿಎಂಡಬ್ಲ್ಯು ಕಾರಿನಲ್ಲಿ ತಿರುಗಾಡಿದ್ದ ಕುಟುಂಬಕ್ಕೆ ಈಗ ಕಾರೂ ಇಲ್ಲ. ಮಗ ಸಣ್ಣ ಸ್ಕೂಟರಲ್ಲಿ ಓಡಾಡುವ ಪರಿಸ್ಥಿತಿ. ಮಹಿಳೆಯ ಬಿಸಿನೆಸ್ ಬರ್ಬಾದ್ ಆಗಿದ್ದರೆ, ಮರಳಿ ಗಲ್ಫ್ ಹೋಗಿ ಸೆಟಪ್ ಮಾಡಲು ಕೈಯಲ್ಲಿ ಹಣ ಇಲ್ಲದಾಗಿದೆ. ಸದ್ಯ, ಬಾಡಿಗೆ ಮನೆಯಲ್ಲಿರುವ ಕುಟುಂಬಕ್ಕೆ ತಿಂಗಳ ಬಾಡಿಗೆ ತುಂಬುವುದೇ ಕಷ್ಟವಾಗಿದೆ. ಮಗ ಮತ್ತು ಮಗಳ ಸಣ್ಣ ದುಡಿಮೆಯಲ್ಲಿ ಸಿಗುತ್ತಿರುವ ದುಡ್ಡಿನಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ ಎನ್ನುತ್ತಿದ್ದಾರೆ.
ಠಾಣೆಯಿಂದ ಠಾಣೆಗೆ ಓಡಾಡಿಸಿದ್ದ ಇನ್ ಸ್ಪೆಕ್ಟರ್ !
ಈ ನಡುವೆ, ಇನ್ ಸ್ಪೆಕ್ಟರ್ ರಾಮಕೃಷ್ಣ ಬಳಿ ತೆರಳಿದ್ದಾಗ, ಕೇಸ್ ಪಣಂಬೂರು ಠಾಣೆಯಲ್ಲಿದೆ ಅಂತ ಅಲ್ಲಿಗೆ ಕಳಿಸಿದ್ದರಂತೆ. ಆನಂತರ ಉರ್ವಾ ಠಾಣೆಗೂ ಕಳಿಸಿದ್ದರಂತೆ. ಪೊಲೀಸ್ ಕೇಸಿನ ಎಬಿಸಿಡಿಯೇ ಗೊತ್ತಿಲ್ಲದ ಮಹಿಳೆ, ಉರ್ವಾ, ಪಣಂಬೂರು ಎಂದು ತಿರುಗಾಡಿದ್ದೇ ಬಂತು. ಅಲ್ಲಿನ ಪೊಲೀಸರಲ್ಲಿ ಕೇಳಿದಾಗ, ನಗುತ್ತಿದ್ದರಂತೆ. ಇದರ ಮಧ್ಯೆಯೇ ಹಣ ಕೇಳುವುದಕ್ಕಾಗಿ ತಾಯಿ, ಮಗಳು ಇತ್ತೀಚೆಗೆ ಬಿರಿಯಾನಿ ಪ್ಯಾರಡೈಸ್ ಮಾಲೀಕ ಮಹಮ್ಮದ್ ಶಂಸೀರ್ ಬಳಿ ತೆರಳಿದ್ದರಂತೆ. ನಿಮ್ಮ ಹಣವೂ ಕೊಡಲ್ಲ. ಏನೂ ಕೊಡಲ್ಲ. ನನಗೆ ಹಣವೇ ಕೊಟ್ಟಿಲ್ಲ. ಇನ್ನೊಮ್ಮೆ ಬಂದರೆ, ಕೈ ಕಾಲು ಕಡಿದು ಹಾಕುತ್ತೇನೆ ಎಂದು ಬೆದರಿಸಿದ್ದನಂತೆ.
ಇಷ್ಟೆಲ್ಲದರ ಮಧ್ಯೆ ಈ ಹಿಂದಿನ ಸಿಸಿಬಿಯ ತಂಡ, ಶಂಸೀರ್ ಮತ್ತು ನಿಹಾಲ್ ನನ್ನು ವಶಕ್ಕೆ ಪಡೆದು ಹಣಕ್ಕಾಗಿ ಪೀಡಿಸಿದೆ ಎನ್ನುವ ಗಂಭೀರ ಆರೋಪವೂ ಇಲಾಖೆಯ ಒಳಗಿಂದ ಕೇಳಿಬರುತ್ತಿದೆ. ನಿಹಾಲ್ ಅಹ್ಮದ್ ಮತ್ತು ಆತನ ತಂದೆಯಿಂದ ವಂಚನೆಗೊಳಗಾದವರು ಬಹಳಷ್ಟು ಮಂದಿಯಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ. ಇಂಥ ಬಹುಕೋಟಿ ವಂಚಕರ ಬಗ್ಗೆ ಮಂಗಳೂರು ಪೊಲೀಸರು ಮಾತ್ರ ಸುಮ್ಮನಿದ್ದು, ಆರೋಪಿಗಳ ರಕ್ಷಣೆಗೆ ನಿಂತಿರುವುದು ಪೊಲೀಸರ ನೈತಿಕತೆಯನ್ನೇ ಪ್ರಶ್ನೆ ಮಾಡುವಂತಿದೆ.
To be Continued...
Also Read:
New Biryani Paradise restaurant, Kankanady, Mangalore owners Nihal Ahmed and father Mohammed Samsheer have cheated innocents in crores of rupees. Nihal Ahmed is said to be a mastermind in cheating and duping people of selling luxury cars, the sale of flats and properties.
19-03-25 12:44 pm
Bangalore Correspondent
ಸೌಜನ್ಯಾ ಪ್ರಕರಣ ; ನ್ಯಾಯಕ್ಕಾಗಿ ಆಗ್ರಹಿಸಿ ಧರ್ಮಸ್ಥ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
19-03-25 02:10 pm
HK News Desk
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am