ಬ್ರೇಕಿಂಗ್ ನ್ಯೂಸ್
09-03-21 09:33 pm Headline Karnataka News Network ಕರ್ನಾಟಕ
ಕೊಡಗು, ಮಾರ್ಚ್ 9: ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಹಂತಕ ಹುಲಿಯ ಹಾವಳಿ ಮಿತಿ ಮೀರಿದ್ದು, ಬೆಳಂಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ತಾತನ ಜೊತೆ ಹೊಗಿದ್ದ ಮಗು ಚಿರತೆ ಪಾಲಾದ ಘಟನೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಸದ್ಯ ಈ ವ್ಯಾಘ್ರನ ಉಪಟಳವನ್ನ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.
ಗ್ರಾಮದ ಚಕ್ಕೇರ ಸನ್ನಿ ಸುಬ್ಬಯ್ಯ ಎಂಬುವವರ ತೋಟದಲ್ಲಿ ಕೆಲಸಕ್ಕಿದ್ದ ಕಾರ್ಮಿಕರ ಕುಟುಂಬ ಹುಲಿ ಭಯದಿಂದ ಕಳೆದೊಂದು ವಾರದಿಂದ ತೋಟದತ್ತ ಮುಖ ಮಾಡಿರಲಿಲ್ಲ. ಆದರೆ ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ಮೋಟಾರ್ ಆನ್ ಮಾಡುವಂತೆ 8 ವರ್ಷದ ಬಾಲಕ ರಂಗ ಸ್ವಾಮಿಯನ್ನ ಕಳುಹಿಸಿದ್ದಾರೆ. ಆತ ತೆರಳಿ ಎಷ್ಟು ಹೊತ್ತಾದರೂ ಮರಳಿಲ್ಲ. ಹಾಗಾಗಿ ಆತನನ್ನ ಹುಡುಕುತ್ತಾ ತಾತ ಕೆಂಚ ಅಲ್ಲಿಗೆ ತೆರಳಿದ್ದಾರೆ. ಆದರೆ, ತಾತ ಕೂಡ ಮರಳುವುದಿಲ್ಲ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ತಾತ ಮತ್ತು ಮಗುವನ್ನು ಹುಡುಕುತ್ತಾ ತೋಟಕ್ಕೆ ತೆರಳಿದ್ದಾರೆ. ಆದರೆ ಅವರಿಗೆ ತೋಟದಲ್ಲಿ ಕಂಡಿದ್ದು, ಮಗು ರಂಗಸ್ವಾಮಿ ಮೆದುಳು ಹೊರಬಂದು ಅಪ್ಪಚ್ಚಿಯಾಗಿ ಹೆಣವಾಗಿ ಹೋಗಿರುವುದು ಮತ್ತು ತಾತ ಕೆಂಚ ತೀವ್ರವಾಗಿ ಗಾಯಗೊಂಡು ನರಳುತ್ತಾ ಬಿದ್ದಿದ್ದ ದೃಶ್ಯ. ಕಳೆದ ರಾತ್ರಿಯಷ್ಟೇ ಇದೆ ಗ್ರಾಮದಲ್ಲಿ ಎರಡು ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಈಗ ಈ ವ್ಯಾಘ್ರಕ್ಕೆ ಸುಲಭವಾಗಿ ಸಿಕ್ಕಿದ್ದು ಇದೇ ಬಾಲಕ ರಂಗಸ್ವಾಮಿ ಮತ್ತು ತಾತ ಕೆಂಚ.
ಯಾವಾಗ ಈ ಘಟನೆ ನಡೆಯಿತೋ ಇಡೀ ಬೆಳ್ಳೂರು ಗ್ರಾಮ ರೊಚ್ಚಿಗೆದ್ದಿತ್ತು. 15 ದಿನಗಳ ಹಿಂದಷ್ಟೇ ಓರ್ವ ಬಾಲಕ ಹಾಗೂ ಮತ್ತೋರ್ವ ಮಹಿಳೆಯನ್ನ ಇದೇ ಹುಲಿ ಕೊಂದು ಹೋಗಿತ್ತು. ಜೊತೆಗೆ 13 ಹಸುಗಳನ್ನೂ ಬಲಿ ಪಡೆದಿತ್ತು. ಈ ಅರಣ್ಯ ಇಲಾಖೆ ಮಾತ್ರ ಹುಲಿ ಸೆರೆ ಹಿಡಿಯದೆ ಕಾಲ ಹರಣ ಮಾಡ್ತಾ ಇದೆ ಎಂದು ಆರೋಪಿಸಿದ ಗ್ರಾಮಸ್ಥರು ಗೋಣಿಕೊಪ್ಪ-ಕೇರಳ ಮುಖ್ಯ ರಸ್ತೆಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಹುಲಿಗೆ ನೀವೇ ಗುಂಡಿಕ್ಕಿ ಇಲ್ಲಾ, ನಾವು ಗ್ರಾಮಸ್ಥರೇ ಗುಂಡಿಕ್ಕುತ್ತೇವೆ ಎಂದು ಆಗ್ರಹಿಸಿದ್ದು, ಗ್ರಾಮಸ್ಥರ ಆಗ್ರಹಕ್ಕೆ ಮಣಿದಿರುವ ಅರಣ್ಯ ಇಲಾಖೆ ಕೊನೆಗೂ ಹುಲಿಯನ್ನು ಕೊಲ್ಲುತ್ತೇವೆ ಎಂದು ಕಾರ್ಯಾಚರಣೆಗೆ ಇಳಿದಿದೆ.
In a tragic incident an 8 year old youth was killed after a tiger attacked him in Madikeri.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm