ಸಿನಿಮಾ ಥಿಯೇಟರ್​​ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡಿಂಗ್ ; ಸಿಕ್ಕಿಬಿದ್ದ ಅಪ್ರಾಪ್ತ ಬಾಲಕ, ಕಾಮುಕನಿಗೆ ಬಿತ್ತು ಗೂಸಾ !  

06-01-26 12:57 pm       Bangalore Correspondent   ಕರ್ನಾಟಕ

ಬೆಂಗಳೂರಿನ ಚಿತ್ರಮಂದಿರವೊಂದರ ಮಹಿಳಾ ಟಾಯ್ಲೆಟ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಚಿತ್ರೀಕರಣ ನಡೆಸುತ್ತಿದ್ದ ಯುವಕ ಹಾಗೂ ಅಪ್ರಪ್ತ  ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು, ಜ 06 :  ಬೆಂಗಳೂರಿನ ಚಿತ್ರಮಂದಿರವೊಂದರ ಮಹಿಳಾ ಟಾಯ್ಲೆಟ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಚಿತ್ರೀಕರಣ ನಡೆಸುತ್ತಿದ್ದ ಯುವಕ ಹಾಗೂ ಅಪ್ರಪ್ತ  ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರಿನ ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್ ನಲ್ಲಿ ಈ ಘಟನೆ ನಡೆದಿದ್ದು, ಥಿಯೇಟರ್‌ ಬಾತ್‌ ರೂಮ್‌ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಟೆಕ್ಕಿ ದೂರಿನ ಮೇರೆಗೆ ವಿಡಿಯೋ ಮಾಡಿದ ಬಾಲಕನನ್ನು ಬಂಧಿಸಿದ್ದಾರೆ. 

ಮೂಲಗಳ ಪ್ರಕಾರ ಭಾನುವಾರ ಜನವರಿ 4ರಂದು ರಾತ್ರಿ 9:30ಕ್ಕೆ ಮಡಿವಾಳದ ಸಂಧ್ಯಾ ಚಿತ್ರಮಂದಿರಲ್ಲಿ ಈ ಘಟನೆ ನಡೆದಿದೆ. ಇಂಟರ್ವೆಲ್ ವೇಳೆ ವಾಶ್ ರೂಂಗೆ ಹೋದಾಗ ಮಹಿಳಾ ಟೆಕ್ಕಿ ಹಾಗೂ ಸ್ನೇಹಿತೆಯರ ಖಾಸಗಿ ವಿಡಿಯೋವನ್ನು ಬಾಲಕ ಚಿತ್ರೀಕರಣ ಮಾಡಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಕೂಡಲೇ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲ ದಿನಗಳಿಂದಲೂ ಆತನ ಸ್ನೇಹಿತ ಆರೋಪಿ ಕಮಲ್ ತನಗೆ ವಿಡಿಯೋ ಚಿತ್ರೀಕರಿಸಲು ಸೂಚಿಸಿರುವುದಾಗಿ ಪೊಲೀಸರ ಮುಂದೆ ಅಪ್ರಾಪ್ತ ಬಾಯ್ದಿಟ್ಟಿದ್ದಾನೆ. ಸದ್ಯ ಆರೋಪಿ ಬಾಲಕ, ಕಮಲ್ ಹಾಗೂ ಸಂಧ್ಯಾ ಥಿಯೇಟರ್ ಸಿಬ್ಬಂದಿ ವಿರುದ್ಧ ಎಫ್‌ಐಆ‌ರ್ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯ ಮೊಬೈಲ್ ಫೋನ್‌ನಲ್ಲಿ ಕೆಲ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ ಕೃತ್ಯ ಎಸಗುತ್ತಿದ್ದ ಬಗ್ಗೆ ಶಂಕೆಯಿದೆ. ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A shocking incident occurred at Sandhya Theatre in Madiwala, where a minor boy was caught secretly recording videos inside the women’s restroom. A woman techie filed a complaint after she and her friends noticed the boy filming during the movie interval on January 4 at around 9:30 PM.