ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂತ್ರಿಯಾಗುವ ಆಸೆಯಿದೆ ; ಸಲೀಂ ಅಹ್ಮದ್ 

01-01-26 05:18 pm       HK News Desk   ಕರ್ನಾಟಕ

ಜನವರಿ 15ರ ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ನಾನು ಸಹ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ. ‌

ಹುಬ್ಬಳ್ಳಿ, ಜ.1 : ಜನವರಿ 15ರ ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ನಾನು ಸಹ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ. ‌

ಬಿಜೆಪಿಯವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಅವರಿಗೆ ಪರ್ಮನೆಂಟ್ ವಿರೋಧ ಪಕ್ಷದಲ್ಲೇ ಕೂರಿಸುತ್ತೇವೆ. ಆದ್ರೆ ಸಂಪುಟ ಸರ್ಜರಿ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ.‌ 50 ಶೇ. ಮಂತ್ರಿಗಳಿಗೆ ಮುಂದುವರೆಸಲು ಅನಿಸಿಕೆ ವ್ಯಕ್ತವಾಗಿದೆ‌. ಸಂಪುಟ ಪುನಾರಚನೆಯಿಂದ ಹೊಸಬರಿಗೆ ಅವಕಾಶ ಸಿಗುತ್ತೆ ಅನ್ನೋ ಅನಿಸಿಕೆ ಹೇಳಿದ್ದೇವೆ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ ಸಲೀಮ್ ಅಹ್ಮದ್ ಹೇಳಿದ್ದಾರೆ. ‌

ಸರ್ಕಾರದ ಬಗ್ಗೆ ಮಾತನಾಡದಂತೆ ಮಲ್ಲಿಕಾರ್ಜುನ ಸಾಹೇಬ್ರು ಕಟ್ಟಪ್ಪಣೆ ಮಾಡಿದ್ದಾರೆ.‌ ಲಕ್ಷ್ಮಣ ರೇಖೆ ಹಾಕಿದ್ದನ್ನು ನಾನು ದಾಟಲ್ಲ.‌ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇದೆ.‌ ಖರ್ಗೆ ಹೈಕಮಾಂಡ್ ನಾಯಕರ ಜೊತೆ ಮಾತಾಡ್ತೇನೆ ಅಂದಿದ್ರು.‌ ಒಂದು ನಿರ್ಧಾರಕ್ಕೆ ಬರುತ್ತಾರೆ. ಬಿಜೆಪಿಯವರು ಬಹಳಷ್ಟು ಟೀಕೆ ಮಾಡಿದ್ರು. ಆದರೆ ಮೋದಿಯ ಹಾಗೆ ಸಾರ್ವಧಿಕಾರ ನಮ್ಮದಲ್ಲ.‌ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಎಲ್ಲರೂ ಸೇರಿ ತೀರ್ಮಾನ ಮಾಡ್ತಾರೆ ಎಂದರು.‌

ಸಚಿವ ಸ್ಥಾನದ ಆಯ್ಕೆ ವೇಳೆ ನನಗೆ ಹಿಂದೆ ಅವಕಾಶ ಸಿಗ್ಲಿಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ಸಿಗಬಹುದು. ಕಿತ್ತೂರ ಕರ್ನಾಟಕ ಭಾಗದಲ್ಲಿ 22 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಆದ್ಯತೆ ಸಿಕ್ಕಿಲ್ಲ. ಜನರ ಕೂಗು ಸಚಿವ ಸ್ಥಾನ ಸಿಗಬೇಕು ಅನ್ನೋದು ಇದೆ.‌ ಮಂತ್ರಿಯಾಗುವ ಆಕಾಂಕ್ಷೆಯಲ್ಲಿ ನಾನಿದ್ದೇನೆ ಎಂದು ಸಲಿಂ ಅಹ್ಮದ್ ಹೇಳಿದರು.

Karnataka Legislative Council Chief Whip Salim Ahmed stated in Hubballi that the state cabinet expansion is likely after January 15 and confirmed his own aspiration for a ministerial berth. He said the Congress high command will decide on the reshuffle, adding that around 50% of the current ministers may be retained to give opportunities to new faces.