ಬ್ರೇಕಿಂಗ್ ನ್ಯೂಸ್
18-12-25 02:09 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.18 : ನಮ್ಮಲ್ಲಿ ಕೆಲವೊಮ್ಮೆ ಮಾನವೀಯ ಗುಣಗಳೇ ಮರೆಯಾಗುತ್ತಿವೆಯೇನೋ ಅನ್ನುವ ಸ್ಥಿತಿ ಮತ್ತೆ ಮತ್ತೆ ಮರುಕಳಿಸುತ್ತಿವೆ. ಬೆಂಗಳೂರಿನಲ್ಲಿ ನಸುಕಿನಲ್ಲಿ ಪತಿ- ಪತ್ನಿ ತೆರಳುತ್ತಿದ್ದ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಪತಿ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೂ, ಮಹಿಳೆ ಯಾರಾದ್ರೂ ಸಹಾಯಕ್ಕೆ ಬನ್ನಿ ಎಂದು ಕೈ ಬಾಯಿ ಬಡಿದು ಬೇಡಿಕೊಳ್ಳುತ್ತಿದ್ದರೂ ಕಾರು, ಬೈಕ್ ಗಳಲ್ಲಿ ಹೋಗುತ್ತಿದ್ದವರು ಸಹಾಯಕ್ಕೇ ಬರಲಿಲ್ಲ. ಇದರ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು ಬೆಂಗಳೂರು ನಗರದ ಜನರನ್ನೇ ಅಣಕಿಸುತ್ತಿದೆ.
ಬೆಂಗಳೂರಿನ ಬಾಲಾಜಿ ನಗರದಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿದ್ದ 34 ವರ್ಷದ ವೆಂಕಟರಮಣನ್ ಡಿ.13ರ ನಸುಕಿನಲ್ಲಿ ಎದೆ ನೋವಿನಿಂದ ಅಸ್ವಸ್ಥರಾಗಿದ್ದರು. ತುರ್ತಾಗಿ ಅಂಬ್ಯುಲೆನ್ಸ್ ಸಿಗದೇ ಇದ್ದುದರಿಂದ ಪತ್ನಿ ರೂಪಾ, ಪತಿಯನ್ನು ದ್ವಿಚಕ್ರ ವಾಹನದಲ್ಲಿಯೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ದುರದೃಷ್ಟ ಅಂದ್ರೆ, ಅಲ್ಲಿ ನಸುಕಿನ ವೇಳೆ ವೈದ್ಯರು ಲಭ್ಯರಿಲ್ಲದ ಕಾರಣ ಬೇರೊಂದು ಆಸ್ಪತ್ರೆಗೆ ಸಾಗಿಸಲು ಸೂಚಿಸಿದ್ದರು.


ಆದರೂ ಆಂಬುಲೆನ್ಸ್ ಸಿಗದೆ ಮಹಿಳೆ ಗಂಡನನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಅಲ್ಲಿ ವೈದ್ಯರು ಪರೀಕ್ಷಿಸಿ ಲಘು ಹೃದಯಾಘಾತವಾಗಿದೆ, ತುರ್ತಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಆಂಬುಲೆನ್ಸ್ ಆಗಲೀ, ಬೇರೆ ಟ್ಯಾಕ್ಸಿಯನ್ನಾಗಲೀ ಮಾಡಿಕೊಡಲಿಲ್ಲ. ತುರ್ತು ತೆರಳಲೇ ಬೇಕಿದ್ದರಿಂದ ಬೇರೆ ದಾರಿಯಿಲ್ಲದೆ, ಮಹಿಳೆ ತನ್ನ ಪತಿಯನ್ನು ಮತ್ತೆ ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ವೆಂಕಟರಮಣನ್ ಕುಸಿದು ಬಿದ್ದಿದ್ದು, ವಾಹನವೂ ಅಡ್ಡ ಬಿದ್ದು ಅಪಘಾತಕ್ಕೀಡಾಗಿತ್ತು. ಪತಿ- ಪತ್ನಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದರು.
ಆದರೂ ಸಾವರಿಸಿಕೊಂಡು ಎದ್ದ ಮಹಿಳೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರು, ಬೈಕ್ ಸವಾರರಲ್ಲಿ ಕೈಮುಗಿಯುತ್ತಾ ಸಹಾಯ ಮಾಡುವಂತೆ ಬೇಡಿಕೊಂಡಿದ್ದಾರೆ. ಮಹಿಳೆ ಕೈ ಬಾಯಿ ಬಡಿದುಕೊಂಡು ಅಂಗಲಾಚುತ್ತಿದ್ದರೂ ಯಾರೊಬ್ಬರೂ ವಾಹನ ನಿಲ್ಲಿಸಲಿಲ್ಲ, ಸಹಾಯಕ್ಕೂ ಬರಲಿಲ್ಲ. ಕಾರು, ದ್ವಿಚಕ್ರ ವಾಹನ ಸವಾರರು ಏನೂ ಅನ್ನಿಸಿಯೇ ಇಲ್ಲ ಎನ್ನುವಂತೆ ತೆರಳುತ್ತಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಕಂಡುಬಂದಿದೆ. ಅಷ್ಟೊತ್ತಿಗೆ ರೂಪಾ ಸಹೋದರಿ ಸ್ಥಳಕ್ಕೆ ತಲುಪಿದ್ದರು. ಆದರೆ, ಅಷ್ಟರಲ್ಲಿ ರಸ್ತೆಯಲ್ಲಿ ಬಿದ್ದುಕೊಂಡೇ ಇದ್ದ ವೆಂಕಟರಮಣನ್ ಪ್ರಾಣ ಹೋಗಿತ್ತು.
ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದರೂ ಮಹಿಳೆ ಬಾಯಿ ಬಡಿದುಕೊಳ್ಳುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರದೇ ಇರುವುದು ಮನುಷ್ಯರಲ್ಲಿ ಮಾನವೀಯ ಗುಣಗಳೇ ಇಲ್ಲವಾಯಿತಾ ಎನ್ನುವ ಪ್ರಶ್ನೆ ಮೂಡಿಸಿದೆ. ಆನಂತರ, ಒಬ್ಬ ಕ್ಯಾಬ್ ಚಾಲಕ ಕಡೆಗೂ ವಾಹನ ನಿಲ್ಲಿಸಿ ವೆಂಕಟರಮಣನ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದರು.
ಪತ್ನಿ ರೂಪಾ, ಐದು ವರ್ಷದ ಮಗ, 18 ತಿಂಗಳ ಮಗಳು ಮತ್ತು ತಾಯಿಯನ್ನು ವೆಂಕಟರಮಣ್ ಅಗಲಿದ್ದಾರೆ. ತುರ್ತಾಗಿ ಚಿಕಿತ್ಸೆ ದೊರಕುತ್ತಿದ್ದರೆ ಆ ವ್ಯಕ್ತಿ ಬದುಕಿ ಬಿಡುತ್ತಿದ್ದರೋ ಏನೋ.. ಆದರೆ ಮಹಿಳೆಯೊಬ್ಬರು ರಸ್ತೆ ಮೇಲೆ ನಿಂತು ಅಷ್ಟೊಂದು ಬಡಿದಾಡಿದ್ರೂ ಜನರು ತಮಗೇನೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದು ಬೆಂಗಳೂರಿನ ಜನರೇ ತಲೆ ತಗ್ಗಿಸುವಂತಾಗಿದೆ.
Heart wrenching scenes from Bengaluru. Commuters refuse to stop as a woman begs for help after her bike crashed while rushing her husband to the hospital after a heart attack. Several mins later a cab driver stopped, but by the time he was taken to the hospital he was dead. pic.twitter.com/PRisZTVb91
— Deepak Bopanna (@dpkBopanna) December 17, 2025
A heart-wrenching incident from Bengaluru has sparked outrage and soul-searching over the fading sense of humanity in urban life. A 34-year-old motor mechanic, Venkataramanan, collapsed on the road after suffering a heart attack, while his wife desperately pleaded for help from passing motorists — only to be ignored. The entire episode, captured on CCTV, has gone viral and drawn sharp criticism of the city’s public apathy.
18-12-25 02:26 pm
HK News Desk
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
ಕೊಪ್ಪಳ ; ಬೈಕ್ - ಬೊಲೆರೋ ಡಿಕ್ಕಿ , ಮೂವರು ಯುವಕರ...
18-12-25 12:37 pm
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm