ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ; ಮೀಟಿಂಗ್​ಗಳು ರದ್ದು, ಬಾಂಬ್ ಸ್ಕ್ವಾಡ್​ ದೌಡು ! 

16-12-25 12:57 pm       HK News Desk   ಕರ್ನಾಟಕ

ರಾಜ್ಯದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಕೆಲವು ಕಚೇರಿಗಳಿಗೆ ಸಾಲು ಸಾಲು ಬಾಂಬ್ ಬೆದರಿಕೆ ಇಮೇಲ್​ಗಳು ಬರ್ತಿದೆ. ಸೋಮವಾರ ಮಂಗಳೂರಿನ ಆರ್‌ಟಿಓ ಕಚೇರಿಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದ್ದು ಇದರ ಬೆನ್ನಲ್ಲೇ ಇದೀಗ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಬಂದಿದೆ.

ತುಮಕೂರು, ಡಿ.16 : ರಾಜ್ಯದ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಕೆಲವು ಕಚೇರಿಗಳಿಗೆ ಸಾಲು ಸಾಲು ಬಾಂಬ್ ಬೆದರಿಕೆ ಇಮೇಲ್​ಗಳು ಬರ್ತಿದೆ. ಸೋಮವಾರ ಮಂಗಳೂರಿನ ಆರ್‌ಟಿಓ ಕಚೇರಿಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದ್ದು ಇದರ ಬೆನ್ನಲ್ಲೇ ಇದೀಗ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಬಂದಿದೆ. ಮೇಲ್ ನೋಡಿ ಸಿಬ್ಬಂದಿಗಳು ಶಾಕ್ ಆಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್,‌ ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ಪೊಲೀಸರಿಂದ ಜಿಲ್ಲಾಧಿಕಾರಿಗಳ ಕೊಠಡಿ, ಆಪ್ತ ಸಹಾಯಕರ ಕಚೇರಿ ಸೇರಿದಂತೆ ಡಿಸಿ ಕಚೇರಿ ಸುತ್ತಮುತ್ತ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗ್ತಿದೆ. ಮೈನ್ ಗೇಟ್ ನಲ್ಲಿ ಪೊಲೀಸರು ಒಬ್ಬೊಬ್ಬರನ್ನೇ ಪರಿಶೀಲಿಸುತ್ತಿದ್ದಾರೆ. ತುಮಕೂರು ಸಬ್ ಡಿವಿಷನ್ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ:

ತುಮಕೂರು ಜಿಲ್ಲಾಧಿಕಾರಿ ಮೇಲ್​ಗೆ ಬೆಳಗ್ಗೆ 6.59ಕ್ಕೆ ಇಮೇಲ್ ಬಂದಿದ್ದು, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಡಿವೈಎಸ್ಪಿ ಚಂದ್ರಶೇಖರ್, ಇನ್ಸ್​​ಪೆಕ್ಟರ್ ಅವಿನಾಶ್, ಸಬ್ ಇನ್ಸ್​​ಪೆಕ್ಟರ್ ಚೇತನ್ ಮತ್ತು ತಂಡದಿಂದ ಪರಿಶೀಲನೆ ನಡೆಸಲಾಗ್ತಿದೆ. ಸ್ಥಳದಲ್ಲಿ 100ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.

ಬಾಂಬ್ ಸ್ಕ್ವಾಡ್,‌ ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ತಹಶಿಲ್ದಾರ್ ಕಚೇರಿ, ಉಪತಹಶಿಲ್ದಾರ್ ಕಚೇರಿಯಲ್ಲಿ ಪರಿಶೀಲನೆ ನಡೆದಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಸಭೆಗಳನ್ನ ರದ್ದುಗೊಳಿಸಲಾಗಿದೆ.

Following a bomb threat email sent earlier to the Mangaluru RTO office, the Tumakuru Deputy Commissioner’s office received a similar threat on Monday morning, causing panic among staff. The email, received at 6:59 AM, warned of explosives planted inside the DC office premises. Deputy Commissioner Shubha Kalyan immediately alerted the police, prompting swift action.