ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ ಡಿಕೆಶಿ ಕರೆದು ಸತ್ಕರಿಸಿದ ವರಿಷ್ಠರು, ಸಿದ್ದರಾಮಯ್ಯ ಅನುಪಸ್ಥಿತಿ ಬಗ್ಗೆ ಕುತೂಹಲ ! 

15-12-25 02:23 pm       Bangalore Correspondent   ಕರ್ನಾಟಕ

ಅಧಿಕಾರ ಹಂಚಿಕೆ ವಿಚಾರದಲ್ಲಿ ತಿಕ್ಕಾಟ ನಡೆದಿರುವಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ದ ನಾಯಕರಿಗೆ ದೆಹಲಿಯಲ್ಲಿ ಔತಣ ಕೂಟ ಏರ್ಪಡಿಸಿದ್ದು ಇದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಭಾಗವಹಿಸಿದ್ದರೆ, ಸಿಎಂ ಸಿದ್ದರಾಮಯ್ಯ ದೂರ ಉಳಿದಿರುವುದು ವಿಭಿನ್ನ ಸಂದೇಶ ನೀಡಿದೆ. 

ಬೆಂಗಳೂರು, ಡಿ.15 : ಅಧಿಕಾರ ಹಂಚಿಕೆ ವಿಚಾರದಲ್ಲಿ ತಿಕ್ಕಾಟ ನಡೆದಿರುವಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಯ್ದ ನಾಯಕರಿಗೆ ದೆಹಲಿಯಲ್ಲಿ ಔತಣ ಕೂಟ ಏರ್ಪಡಿಸಿದ್ದು ಇದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಭಾಗವಹಿಸಿದ್ದರೆ, ಸಿಎಂ ಸಿದ್ದರಾಮಯ್ಯ ದೂರ ಉಳಿದಿರುವುದು ವಿಭಿನ್ನ ಸಂದೇಶ ನೀಡಿದೆ. 

ದೆಹಲಿಯಲ್ಲಿ ಭಾನುವಾರ ನಡೆದ ವೋಟ್ ಚೋರಿ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ಪ್ರಮುಖರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೋಜನ ವ್ಯವಸ್ಥೆ ಮಾಡಿದ್ದರು. ಅದರಲ್ಲಿ ಆಯ್ದ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಭೋಜನ ಕೂಟದಲ್ಲಿ ಡಿಕೆಶಿ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಈ ಭೋಜನಕೂಟ ನಡೆಸಿರುವುದು ರಾಜಕೀಯ ಕುತೂಹಲ ಮೂಡಿಸಿದೆ. 

ಕರ್ನಾಟಕ ಭವನದಲ್ಲಿ ರಾಜ್ಯದ ಹಲವು ಶಾಸಕರು, ಸಚಿವರನ್ನು ಡಿಸಿಎಂ ಡಿಕೆಶಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಔತಣ ಕೂಟದಲ್ಲಿ ಭಾಗವಹಿಸಿದ್ದು ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌‍ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್‌ ತಮ್ಮ ಪರವಾದ ವಾದವನ್ನು ವರಿಷ್ಠರಿಗೆ ತಲುಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಅಧಿಕಾರ ಹಂಚಿಕೆ ಸಂಬಂಧಿಸಿ ಬಾರಿ ಚರ್ಚೆಗಳಾಗಿದ್ದವು. ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದರಿಂದ ಹೈಕಮಾಂಡ್‌ ನಾಯಕರು ಮಧ್ಯ ಪ್ರವೇಶಿಸಿ ಬಿಸಿ ತಣ್ಣಗಾಗಿಸಿದ್ದರು. ಅದರಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವೆ ಎರಡು ಉಪಹಾರ ಕೂಟಗಳು ನಡೆದಿದ್ದು ಮನಸ್ತಾಪಕ್ಕೆ ತಾತ್ಕಾಲಿಕ ಕದನ ವಿರಾಮ ಬಿದ್ದಿತ್ತು. ಇದೀಗ ಪ್ರತಿಭಟನೆ ನೆಪದಲ್ಲಿ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮಟ್ಟದಲ್ಲಿ ಆಯೋಜಿಸಿದ ಔತಣ ಕೂಟದಲ್ಲಿ ಭಾಗವಹಿಸದೆ ಮರಳಿದ್ದು ನಾನಾ ರೀತಿಯ ಊಹಾಪೋಹಗಳನ್ನು ಸೃಷ್ಟಿಸಿದೆ. ಕೇವಲ ಡಿಕೆಶಿ ಅವರನ್ನು ಔತಣ ಕೂಟಕ್ಕೆ ಕರೆದು ಬುದ್ಧಿ ಹೇಳಿದ್ದಾರೆಯೇ ಅಥವಾ ಸಿದ್ದರಾಮಯ್ಯಗೆ ಗೇಟ್ ಪಾಸ್ ನೀಡುವ ದಿನಾಂಕ ಮುಂದೂಡಿಕೆ ಮಾಡಿದ್ದಾರೆಯೇ ಎಂಬ ಸಂಶಯ ಬಂದಿದೆ. 

ಇತ್ತ ದೆಹಲಿ ಪ್ರತಿಭಟನೆಯನ್ನೂ ಡಿಕೆ ಶಿವಕುಮಾರ್ ತಮ್ಮ ಬಲ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆಂಬ ಮಾತೂ ಕೇಳಿಬಂದಿದೆ. ವರಿಷ್ಠರ ಸಮ್ಮುಖದಲ್ಲಿ ತನ್ನ ಪರ ಹೆಚ್ಚಿನ ಶಾಸಕರು, ಇತರ ಮುಖ‌ಂಡರು ಸಭೆಯಲ್ಲಿ ಇರುವಂತೆ ನೋಡಿಕೊಂಡಿದ್ದು ದೆಹಲಿ ನಾಯಕರಿಗೆ ತಮ್ಮ ಪರ ಸಂದೇಶ ಹೋಗುವಂತೆ ಮಾಡಿದ್ದಾರೆಂಬ ಮಾತೂ ಇದೆ. ಆದರೆ ಇದೇ ವೇಳೆ, ದೆಹಲಿ ನಾಯಕರು ಔತಣ ಕೂಟಕ್ಕೆ ಕೇವಲ ಡಿಸಿಎಂ ಡಿಕೆಶಿ ಅವರನ್ನು ಮಾತ್ರ ಕರೆಸಿಕೊಂಡು ಸಿದ್ದರಾಮಯ್ಯ ಅವರನ್ನು ಹೊರಗುಳಿಸಿದ್ದೂ ತಂತ್ರಗಾರಿಕೆಯ ನಡೆ‌ ಎನ್ನಲಾಗುತ್ತಿದೆ.

At a time when tensions over power-sharing within the Karnataka Congress continue to simmer beneath the surface, a selective dinner meeting hosted by the party high command in Delhi has triggered fresh political speculation. While Deputy Chief Minister D.K. Shivakumar attended the gathering, Chief Minister Siddaramaiah’s absence has raised eyebrows across political circles.