ಬ್ರೇಕಿಂಗ್ ನ್ಯೂಸ್
14-12-25 03:19 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.14: ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಪತ್ರ ಬರೆದಿದ್ದ ಕಿರಣ್ ಹೆಬ್ಬಾರ್ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗರಂ ಆಗಿದ್ದರು. ಈ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಇದೀಗ ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
"ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು ಸಾಮಾನ್ಯ ಜನರಿಗ ಧಮ್ಕಿ ಹಾಕಿದ್ದಾರೆ" ಎಂದು ಆರೋಪಿಸಿರುವ ಬಿಜೆಪಿ, ರೌಡಿಯಂತೆ ವರ್ತಿಸುವುದನ್ನು ಬಿಡುವಂತೆ ಉಪಮುಖ್ಯಮಂತ್ರಿಗಳಿಗೆ ಸಲಹೆ ನೀಡಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ ಘಟಕ, "ಸಾರ್ವಜನಿಕರೆದುರು ತಮ್ಮ ಚರಿತ್ರೆಯನ್ನು ಬಯಲು ಮಾಡಿಕೊಳ್ಳದಿರಿ" ಎಂದು ವ್ಯಂಗ್ಯವಾಡಿದೆ.
"ನಾನ್ಯಾರು ಗೊತ್ತಾ ಎಂದು ಕೇಳುತ್ತಿರುವ ಡಿಕೆ ಶಿವಕುಮಾರ್ ಅವರೇ, ನೀವು ಈಗ ರಾಜ್ಯದ ಡಿಸಿಎಂ ಆ ದಿನಗಳ ಕೊತ್ವಾಲ್ ಶಿಷ್ಯ ಅಲ್ಲ ಎಂಬುದನ್ನು ಮರೆಯದಿರಿ. ಜನಸಾಮಾನ್ಯರೊಬ್ಬರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪತ್ರ ಬರೆದರೆ, ನಾನು ಯಾರು ಗೊತ್ತಾ? ಜೈಲಿಗೆ ಹೋಗಿ ಬಂದವನು ಎನ್ನುವ ಮೂಲಕ ತಮ್ಮ ಚರಿತ್ರೆಯನ್ನು ತಾವೇ ಬಯಲು ಮಾಡಿಕೊಳ್ಳುತ್ತಿದ್ದಾರೆ" ಎಂದು ಬಿಜೆಪಿ ಡಿಸಿಎಂ ಕಾಲೆಳೆದಿದೆ.
ಮುಂದುವರೆದು, "ಅಂದಹಾಗೆ ನೀವು ಜೈಲಿಗೆ ಹೋಗಿದ್ದು ಯಾವುದೇ ಒಳ್ಳೆ ಕಾರ್ಯ ಮಾಡಿ ಅಲ್ಲ ಭ್ರಷ್ಟಾಚಾರ ಮತ್ತು ಅವ್ಯವಹಾರ ಆರೋಪದಡಿ ಎಂಬುದನ್ನ ನೆನಪಿಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣದ ಬಿಲ್ ಜಾರಿಗೆ ತರುತ್ತಿರುವುದು ಇದೇ ಕಾರಣಕ್ಕೆ. ಡಿಕೆ ಶಿವಕುಮಾರ್ ಅವರೇ, ನಿಮ್ಮನ್ನು ನೀವು ಪಾಳೆಗಾರ ಎಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ!" ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಶನಿವಾರ (ಡಿ.13) ನಡೆರದ ಸಭೆಯಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್, ಕಿರಣ್ ಹೆಬ್ಬಾರ್ ಅವರು ಬರೆದಿದ್ದ ಪತ್ರದ ಧಾಟಿಗೆ ಅಸಮಧಾನ ವ್ಯಕ್ತಪಡಿಸಿದ್ದರು. "ನಾನು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹಸಚಿವರಿಗೂ ಹೆದರದೇ ಜೈಲಿಗೆ ಹೋಗಿ ಬಂದವನು. ಹೀಗಾಗಿ ಇಂತಹ ಎಚ್ಚರಿಕೆಗಳೆಲ್ಲ ನನ್ನ ಮುಂದೆ ನಡೆಯುವುದಿಲ್ಲ" ಎಂದು ಉಪಮುಖ್ಯಮಂತ್ರಿಗಳು ಗುಡುಗಿದ್ದರು.
ನಾನ್ಯಾರು ಗೊತ್ತಾ ಎಂದು ಕೇಳುತ್ತಿರುವ @DKShivakumar ಅವರೇ, ನೀವು ಈಗ ರಾಜ್ಯದ ಡಿಸಿಎಂ ಆ ದಿನಗಳ ಕೊತ್ವಾಲ್ ಶಿಷ್ಯ ಅಲ್ಲ ಎಂಬುದನ್ನು ಮರೆಯದಿರಿ.
— BJP Karnataka (@BJP4Karnataka) December 13, 2025
ಜನಸಾಮಾನ್ಯರೊಬ್ಬರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪತ್ರ ಬರೆದರೆ, ನಾನು ಯಾರು ಗೊತ್ತಾ? ಜೈಲಿಗೆ ಹೋಗಿ ಬಂದವನು ಎನ್ನುವ ಮೂಲಕ ತಮ್ಮ ಚರಿತ್ರೆಯನ್ನು ತಾವೇ ಬಯಲು… pic.twitter.com/TSlkuUq98B
A sharp political war of words has erupted in Karnataka after Deputy Chief Minister D.K. Shivakumar’s remarks at a public consultation meeting triggered outrage across party lines, with the opposition BJP accusing him of threatening citizens and behaving like a “strongman” rather than a constitutional authority.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
19-04-26 02:58 pm
HK News Staffer
15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡು ಮುಂಬೈ,...
19-04-26 02:24 pm
ಅಂಬ್ಲಮೊಗರು ; ಸ್ನೇಹಿತರೊಂದಿಗೆ ಕೆರೆ ನೀರಲ್ಲಿ ಆಟವಾ...
19-04-26 10:20 am
ಹೇಯ್ ಮಟನ್ ಸರಿಯಾಗಿ ಬೆಂದಿಲ್ಲ ಎಂದು ಸ್ನೇಹಿತನ ಮುಂದ...
18-04-26 10:37 pm
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm