ಬ್ರೇಕಿಂಗ್ ನ್ಯೂಸ್
04-10-25 09:18 pm HK News Desk ಕರ್ನಾಟಕ
ಬೆಳಗಾವಿ/ಸಿಂಧುದುರ್ಗ, ಅ 04 : ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೆಂಗುರ್ಲಾ ತಾಲೂಕಿನ ಶಿರೋಡಾದ ವೇಳಾಗರ ಬೀಚಿನಲ್ಲಿ ಸಮುದ್ರದ ತೆರೆಗಳ ಅಬ್ಬರಕ್ಕೆ ಸಿಲುಕಿ ಬೆಳಗಾವಿ ಜಿಲ್ಲೆಯ ನಾಲ್ವರು ಸೇರಿ ಏಳು ಮಂದಿ ಜಲಸಮಾಧಿಯಾಗಿದ್ದಾರೆ.
ಮೃತಪಟ್ಟವರಲ್ಲಿ ನಾಲ್ವರು ಖಾನಾಪುರ ತಾಲೂಕಿನ ಲೋಂಡಾ ಗ್ರಾಮದವರು, ಒಬ್ಬರು ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದವರು. ಮತ್ತಿಬ್ಬರು ಮಹಾರಾಷ್ಟ್ರದವರು ಎಂದು ತಿಳಿದು ಬಂದಿದೆ. ಇವರ ಜೊತೆಗೆ ನಾಪತ್ತೆಯಾಗಿದ್ದ ನಾಲ್ವರು ಸುರಕ್ಷಿತವಾಗಿ ಮರಳಿರುವ ಮಾಹಿತಿ ಲಭ್ಯವಾಗಿದೆ.
ಮೃತಪಟ್ಟವರ ವಿವರ ಹೀಗಿದೆ :
ಲೋಂಡಾದ ಇರ್ಫಾನ್ ಇಸಾಕ್ ಕಿತ್ತೂರ (35), ಇರ್ಫಾನ್ ಪತ್ನಿ ಫರಿನಾ ಕಿತ್ತೂರ (31), ಇವರ ಪುತ್ರ ಇಬಾದ್ ಇರ್ಫಾನ್ ಕಿತ್ತೂರ (12) ಹಾಗೂ ಇರ್ಫಾನ್ ಅವರ ತಮ್ಮನ ಮಗ ಇಕ್ವಾನ್ ಇಮ್ರಾನ್ ಕಿತ್ತೂರ್ (15), ಅಳ್ನಾವರ ಮೂಲದ ನಮೀರಾ ಅಕ್ತರ್ (16), ಮಹಾರಾಷ್ಟ್ರದ ಪರಯಾನ್ ಮನಿಯರ್ (20) ಹಾಗೂ ಜಾಕೀರ್ ಮನಿಯರ್ (13) ಮೃತಪಟ್ಟವರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ದಡದ ಬಳಿ ನಾಲ್ವರು ಪತ್ತೆ :
ಸಮುದ್ರದಲ್ಲಿ ಕಾಣೆಯಾಗಿದ್ದ ಇಮ್ರಾನ್ ಇಸಾಕ್ ಕಿತ್ತೂರ (37), ಜಬಿನ್ ಇಮ್ರಾನ್ ಕಿತ್ತೂರ (32), ಇಜಾನ್ ಇಮ್ರಾನ್ ಕಿತ್ತೂರ (10) ಹಾಗೂ ಇಸ್ರಾ ಇಮ್ರಾನ್ ಕಿತ್ತೂರ (17) ಅವರು ಶನಿವಾರ ನಸುಕಿನ ಜಾವ ಸಮುದ್ರ ದಂಡೆಯ ಮೇಲೆ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರಿಗೆ ಸಿಂಧದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಂಡಾ ಗ್ರಾಮದ ಒಂದೇ ಕುಟುಂಬದ 8 ಜನ ಸಂಬಂಧಿಗಳು ಶುಕ್ರವಾರ ದಸರಾ ರಜೆ ಹಿನ್ನೆಲೆಯಲ್ಲಿ ಶಿರೋಡಾದ ವೇಳಾಗರ ಬೀಚಿಗೆ ತೆರಳಿದ್ದರು. ಸಂಜೆ 4ರ ಸುಮಾರಿಗೆ ಎಲ್ಲರೂ ಸಮುದ್ರದ ನೀರಿನೊಳಗೆ ಆಟವಾಡುತ್ತ ಹೋದರು. ಇದ್ದಕ್ಕಿದ್ದಂತೆ ದೊಡ್ಡ ತೆರೆಗಳು ಅಪ್ಪಳಿಸಿ ಇವರನ್ನು ಒಳಕ್ಕೆ ಎಳೆದುಕೊಂಡು ಹೋಗಿದ್ದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರದ ಸಾವಂತವಾಡಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಲೋಂಡಾಗೆ ಸಾಗಿಸಲಾಗುತ್ತದೆ ಎಂದು ಖಾನಾಪುರ ಪೊಲೀಸರು ತಿಳಿಸಿದ್ದಾರೆ.
A holiday turned into a nightmare when massive waves at Velagar beach in Sindhudurg district, Maharashtra, claimed the lives of seven people, including five from Karnataka. Among the deceased were four members of a family from Londa village, Belagavi, and one from Alnavar, along with two from Maharashtra.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm