Masked Man, Dharmasthala, R Ashok: ಕೊನೆಯಲ್ಲಿ ಮಾಸ್ಕ್‌ ಮ್ಯಾನ್‌ ಹುಚ್ಚ ಎಂದು ಹೇಳುವ ಬದಲು ಈಗಲೇ ತನಿಖೆ ಮಾಡಿ ; ವಿದೇಶದಿಂದ ಫಂಡಿಂಗ್‌ ಆಗಿದೆ, ಅವನು ಕ್ರಿಶ್ಚಿಯನ್ ಧರ್ಮದವನಾ ಹೇಳಿ.. 

15-08-25 02:27 pm       Bangalore Correspondent   ಕರ್ನಾಟಕ

ಧರ್ಮಸ್ಥಳದಲ್ಲಿ ನೆಲ ಅಗೆಯಲು ಹೇಳುತ್ತಿರುವ ಮುಸುಕುಧಾರಿಯ ಹೆಸರನ್ನು ಸರ್ಕಾರ ಬಹಿರಂಗಪಡಿಸಬೇಕು. ಎಸ್‌ಐಟಿಯನ್ನು ರದ್ದು ಮಾಡದೆ ಮುಂದುವರಿಸಬೇಕು. ಜೊತೆಗೆ ಇದರ ಹಿಂದೆ ಷಡ್ಯಂತ್ರ ಮಾಡುತ್ತಿರುವವರನ್ನು ಪತ್ತೆ ಮಾಡಲು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಬೆಂಗಳೂರು, ಆ.16 : ಧರ್ಮಸ್ಥಳದಲ್ಲಿ ನೆಲ ಅಗೆಯಲು ಹೇಳುತ್ತಿರುವ ಮುಸುಕುಧಾರಿಯ ಹೆಸರನ್ನು ಸರ್ಕಾರ ಬಹಿರಂಗಪಡಿಸಬೇಕು. ಎಸ್‌ಐಟಿಯನ್ನು ರದ್ದು ಮಾಡದೆ ಮುಂದುವರಿಸಬೇಕು. ಜೊತೆಗೆ ಇದರ ಹಿಂದೆ ಷಡ್ಯಂತ್ರ ಮಾಡುತ್ತಿರುವವರನ್ನು ಪತ್ತೆ ಮಾಡಲು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

"ಕೊನೆಯಲ್ಲಿ ಮಾಸ್ಕ್‌ ಮ್ಯಾನ್‌ ಹುಚ್ಚ ಎಂದು ಹೇಳುವ ಬದಲು, ಮೊದಲೇ ತನಿಖೆ ಮಾಡಿಸಿ. ಈವರೆಗೆ ಆತನ ಮಂಪರು ಪರೀಕ್ಷೆ ಮಾಡಿಲ್ಲ. ಈವರೆಗೆ ಒಂದು ಕೋಟಿ ರೂ.ಗೂ ಅಧಿಕ ಖರ್ಚಾಗಿದೆ. ಹಿಟಾಚಿ, ಜೆಸಿಬಿಗಳನ್ನು ಬಳಸುತ್ತಿದ್ದಾರೆ. ಆಧುನಿಕ ಶಸ್ತ್ರಗಳನ್ನು ಬಳಸುತ್ತಿದ್ದಾರೆ. ಇದು ಪ್ರಾಯೋಜಿತವಾದ ಕೆಲಸವಾಗಿದೆ. ಈ ಮುಸುಕುಧಾರಿ ಯಾರೆಂದು ಸರ್ಕಾರ ತಿಳಿಸಬೇಕು" ಎಂದು ಆರ್. ಅಶೋಕ ಆಗ್ರಹಿಸಿದರು.

ಧರ್ಮಸ್ಥಳದಲ್ಲಿ ನೂರಾರು ಅಸ್ತಿಪಂಜರ ಇದೆ ಎಂದು ದೂರು ನೀಡಿದಾಗ ಕಾಂಗ್ರೆಸ್‌ ಸರ್ಕಾರ ಕೂಡಲೇ ಎಸ್‌ಐಟಿ ರಚಿಸಿದೆ. ಎಸ್‌ಐಟಿ ಮಾಡಬೇಕೆಂದು ಕೋರ್ಟ್‌ ಹೇಳಿಲ್ಲ ಅಥವಾ ಅಧಿಕಾರಿ ಪ್ರಣವ್‌ ಮೊಹಂತಿ ಹೇಳಿಲ್ಲ. ಇದರ ಹಿಂದೆ ಇರುವ ಗ್ಯಾಂಗ್‌ ಯಾವುದು? ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತ ಇರುವ ಗ್ಯಾಂಗ್‌ ಯಾವುದು? ಇದಕ್ಕೆ ಪ್ರೇರಣೆ ನೀಡಿದವರು ಯಾರು? ಈ ರೀತಿ ನೆಲ ಅಗೆಯುವುದಕ್ಕೆ ಸಾರ್ವಜನಿಕ ಹಣ ಬಳಸಲಾಗಿದೆ. ಆದರೆ ಬೆಟ್ಟ ಅಗೆದು ಇಲಿ ಹಿಡಿಯುವಂತಹ ಕೆಲಸವಾಗಿದೆ. ಹುಲಿ ಬಂತು ಎಂದು ಹೆದರಿಸಿ ಕೊನೆಗೆ ಇಲಿಯೂ ಸಿಕ್ಕಿಲ್ಲ ಎಂದು ಅಶೋಕ್ ದೂರಿದರು.

ಮಾಸ್ಕ್‌ ಮ್ಯಾನ್‌ ಬಗ್ಗೆ ಪ್ರತಿ ಕ್ಷಣದ ಮಾಹಿತಿ ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆತನ ಹೆಸರು ಚಿನ್ನಯ್ಯ, ಕ್ರೈಸ್ತ ಧರ್ಮಕ್ಕೆ ಮತಾಂತರವಾದವನು ಎಂದು ಜನರು ಹೇಳುತ್ತಿದ್ದಾರೆ. ಪೊಲೀಸರು ಪ್ರತಿ ದಿನ ಆತನಿಗೆ ಮೇಕಪ್‌ ಮಾಡಿ, ಬಿರಿಯಾನಿ ತಿನ್ನಿಸಿ, ಸಂಪೂರ್ಣ ಭದ್ರತೆ ನೀಡಿ ಕರೆದೊಯ್ಯುತ್ತಿದ್ದಾರೆ ಎಂದು ಅಶೋಕ ಲೇವಡಿ ಮಾಡಿದರು.

"ಮಾಸ್ಕ್ ಮ್ಯಾನ್ ಇವೆಲ್ಲವನ್ನೂ ಎಂಜಾಯ್‌ ಮಾಡುತ್ತಿದ್ದಾರೆ. ಆತ ಹೇಳಿದ ಕಡೆಯಲ್ಲ ಪೊಲೀಸರು ನೆಲ ಅಗೆದರು. ನಂತರ ಒಂದೂವರೆ ಲಕ್ಷ ರೂ. ಖರ್ಚು ಮಾಡಿ ಡ್ರೋಣ್‌ ಹಾಗೂ ಇತರೆ ಯಂತ್ರಗಳನ್ನು ಬಳಸಿದರು. 20 ಅಡಿ ಆಳದಲ್ಲಿ ಯಾರಾದರೂ ಹೆಣ ಹೂಳುತ್ತಾರಾ? ಸರ್ಕಾರಕ್ಕೆ ಅಷ್ಟೂ ಸಾಮಾನ್ಯ ಪ್ರಜ್ಞೆ ಇಲ್ಲವೇ" ಎಂದು ಅಶೋಕ ಪ್ರಶ್ನಿಸಿದರು.

ಅಪರಾಧಿ ಚಟುವಟಿಕೆಗಳಿಗೆ ಅಪರಾಧಿಗಳಿಗೆ ಖಂಡಿತ ಶಿಕ್ಷೆಯಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಮುಖ್ಯಮಂತ್ರಿಗೇ ಶಿಕ್ಷೆಯಾಗಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಯಾರನ್ನೂ ಬಿಡುವುದಿಲ್ಲ. ಎಸ್‌ಐಟಿ ರದ್ದು ಮಾಡದೆ ಮುಂದುವರಿಸಬೇಕು. ತನಿಖೆ ಮಾಡಬೇಕು. ಹಾಗೆಯೇ ಯಾರ ಒತ್ತಡದ ಮೇಲೆ ಈ ಎಸ್‌ಐಟಿ ರಚಿಸಲಾಗಿದೆ ಎಂದು ತಿಳಿಸಬೇಕು. ಇದಕ್ಕೆ ವಿದೇಶದಿಂದ ಫಂಡಿಂಗ್‌ ಬಂದಿರುವ ಅನುಮಾನವಿದ್ದು, ಷಡ್ಯಂತ್ರ ಮಾಡಿರುವ ಗುಂಪನ್ನು ಪತ್ತೆ ಮಾಡಲು ಎನ್‌ಐಎಗೆ ತನಿಖೆಯನ್ನು ನೀಡಿ ಎಂದು ಅಶೋಕ ಒತ್ತಾಯಿಸಿದರು.

Opposition Leader R. Ashoka has demanded that the government reveal the identity of the masked man who has been insisting on digging operations in Dharmasthala. He urged that the Special Investigation Team (SIT) should not be dissolved and that the case should also be handed over to the National Investigation Agency (NIA) to uncover any conspiracy and identify those behind it.