KN Rajanna resigns: ಸಹಕಾರ ಸಚಿವ ಕೆ.ಎನ್‌ ರಾಜಣ್ಣ ದಿಢೀರ್ ರಾಜೀನಾಮೆ ; 'ರಾಹುಲ್ ಮತಗಳ್ಳತನ' ವಿರುದ್ಧ ರಾಂಗ್ ಆಗಿದ್ದಕ್ಕೆ ತಲೆದಂಡ ಕೇಳಿದ ಹೈಕಮಾಂಡ್ !

11-08-25 03:29 pm       Bangalore Correspondent   ಕರ್ನಾಟಕ

ರಾಜ್ಯದ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಣೆ ಮಾಡಿದ್ದು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ರಾಜಣ್ಣ ಈ ನಿರ್ಧಾರ ಮಾಡಿದ್ಧಾರೆ ಎನ್ನಲಾಗಿದೆ.

ಬೆಂಗಳೂರು ಆ.11 : ರಾಜ್ಯದ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಣೆ ಮಾಡಿದ್ದು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ರಾಜಣ್ಣ ಈ ನಿರ್ಧಾರ ಮಾಡಿದ್ಧಾರೆ ಎನ್ನಲಾಗಿದೆ.

ಕೆಲವು ದಿನಗಳಿಂದ ಪಕ್ಷ, ಹೈಕಮಾಂಡ್ ಹಾಗೂ ರಾಜಕೀಯ ವಿಷಯಗಳಿಂದ ದೂರವಿದ್ದ ಕೆ.ಎನ್‌ ರಾಜಣ್ಣ ಅವರು ಇತ್ತೀಚೆಗೆ ಪಕ್ಷ ಹಾಗೂ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾತನಾಡಿದ್ದರು. ರಾಹುಲ್ ಗಾಂಧಿ ಮತಗಳ್ಳತನ ಬಗ್ಗೆ ಬಹಿರಂಗ ಆರೋಪ ಮಾಡಿದ್ದಕ್ಕೆ, ಕಳೆದ ಬಾರಿ ನಾವು ಇರುವಾಗಲೇ ವೋಟರ್ ಲಿಸ್ಟ್ ಮಾಡಿದ್ದಲ್ವೇ.. ನಾವೇ ನೋಡಿಕೊಳ್ಳಬೇಕಿತ್ತು ಎಂದು ಹೇಳಿ ಕೇಂದ್ರ ನಾಯಕರಿಗೆ ಮುಜುಗರ ತಂದಿದ್ದರು. ಜತೆಗೆ ಡಿ.ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಒಳಮುನಿಸು ಇತ್ತು. ಇದು ಕೂಡ ರಾಜೀನಾಮೆ ನೀಡಲು ಕಾರಣ ಎನ್ನಲಾಗುತ್ತಿದೆ. 

ರಾಜಣ್ಣ ಅವರ ದಿಢೀರ್‌ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದ್ದು, ಕಾಂಗ್ರೆಸ್‌ ಹಿರಿಯ ನಾಯಕ, ಗೃಹ ಸಚಿವರ ಆಪ್ತರ ವಿರುದ್ಧವೇ ಹೈಕಮಾಂಡ್ ಈ ರೀತಿ ಕ್ರಮ ಕೈಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬೆಂಬಲಿಗರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ನೀಡುತ್ತಿದ್ದ ಹೇಳಿಕೆಗಳ ಸಂದರ್ಭ ರಾಜಣ್ಣ ಸಿದ್ದರಾಮಯ್ಯ ಪರ ಬಲವಾಗಿಯೇ ಹೇಳಿಕೆ ನೀಡುತ್ತಿದ್ದರಲ್ಲದೆ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಂದುವರಿಯಲಿದ್ದಾರೆ ಎಂದು ಹೇಳುತ್ತಲೇ ಇದ್ದರು. ಹೀಗಾಗಿ ಡಿಕೆಶಿಗೆ ತೊಡರುಗಾಲಾಗಿದ್ದರು. 

 ಇತ್ತೀಚೆಗೆ ಮತಗಳವು ವಿಷಯದಲ್ಲಿ ರಾಹುಲ್‌ ಗಾಂಧಿ ಮಾತನಾಡಿದಾಗ ಅದನ್ನು ವಿರೋಧಿಸಿ ಹೇಳಿಕೆ ನೀಡಿದ್ದರು. ಮಹದೇವಪುರದಲ್ಲಿ ಚುನಾವಣಾ ಅಕ್ರಮ ನಡೆದಾಗ ಕಾಂಗ್ರೆಸ್‌ ಸರ್ಕಾರವೇ ಆಡಳಿತದಲ್ಲಿತ್ತು. ನಮ್ಮದೇ ಲೋಪದಿಂದ ಅಕ್ರಮ ನಡೆದಿತ್ತು ಎಂದು ಅವರು ಹೇಳಿಕೆ ನೀಡಿದ್ದು ಸಂಚಲನ ಮೂಡಿಸಿತ್ತು. ಈ ವಿಷಯದಿಂದ ಮುಜುಗರಕ್ಕೊಳಗಾಗಿ ಹೈಕಮಾಂಡ್‌ ರಾಜಣ್ಣ ರಾಜೀನಾಮೆಗೆ ಸೂಚಿಸಿತ್ತು ಎಂದು ಹೇಳಲಾಗಿದೆ.

Karnataka Cooperation minister KN Rajanna — a known supporter of chief minister (CM) Siddaramaiah — submitted his resignation to Chief Minister Siddaramaiah following a controversy with remarks that drew sharp response from deputy CM DK Shivakumar's supporters.