ಬ್ರೇಕಿಂಗ್ ನ್ಯೂಸ್
01-08-25 11:47 am Bangalore Correspondent ಕರ್ನಾಟಕ
ಬೆಂಗಳೂರು, ಆ.1 : ಹೆಸರಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಲ್ಲಿ (ಕೆಆರ್ ಐಡಿಎಲ್) ಡಿ ದರ್ಜೆಯ ನೌಕರ, ಅರ್ಥಾತ್ ಕಚೇರಿಯಲ್ಲಿ ಕೆಳ ಹಂತದ ಗುಮಾಸ್ತ ಹುದ್ದೆಯಲ್ಲಿದ್ದವ. 15 ಸಾವಿರ ವೇತನಕ್ಕೆ ಹೊರುಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾತ. ಆದರೆ ಲೋಕಾಯುಕ್ತ ದಾಳಿ ನಡೆಸಿದಾಗ, ಈ ವ್ಯಕ್ತಿಯ ಆಸ್ತಿ ಕಂಡು ಬೆಚ್ಚಿ ಬಿದ್ದಿದ್ದಾರೆ. ಕಳಕಪ್ಪ ನಿಡಗುಂದಿ ಎಂಬ ಈ ವ್ಯಕ್ತಿಯಲ್ಲಿ 100 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕೆಆರ್ ಐಡಿಎಲ್ ಗೆ ಸೇರಿದ ಆರಂಭದಲ್ಲಿ ಕಳಕಪ್ಪ ನಿಡಗುಂದಿ 200 ರೂ. ಪಡೆಯುತ್ತಿದ್ದ ಹೊರ ಗುತ್ತಿಗೆ ನೌಕರ. ಅದರಂತೆ, 17 ವರ್ಷಗಳಲ್ಲಿ ಕೊನೆಯ ಬಾರಿಗೆ ಇವನ ಖಾತೆಗೆ ಜಮೆಯಾಗಿದ್ದು ತಿಂಗಳಿಗೆ 15 ಸಾವಿರ ಕೂಲಿ! ಆದರೆ, ದಾಳಿ ವೇಳೆ ಭಾರೀ ಪ್ರಮಾಣದ ಆಸ್ತಿ ಪತ್ತೆಯಾಗಿದ್ದು ಲೋಕಾಯುಕ್ತ ಅಧಿಕಾರಿಗಳನ್ನೇ ದಂಗುಬಡಿಸಿದೆ.
ಕಳಕಪ್ಪ ಮನೆಯಲ್ಲಿದ್ದ ಆಸ್ತಿ ದಾಖಲೆಗಳ ಪರಿಶೀಲನೆ ನಂತರ ಕೆಆರ್ ಐಡಿಎಲ್ ನಿಗಮದ ಎಡಬ್ಲ್ಯೂಇ ಮತ್ತು ಡಬ್ಲ್ಯೂಇ ಕಚೇರಿಗಳಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್, ಇನ್ಸ್ಪೆಕ್ಟರ್ ಗಳಾದ ಸುನೀಲ್, ಚಂದ್ರಪ್ಪ, ವಿಜಯಕುಮಾರ್, ನಾಗರತ್ನ, ಶೈಲಜಾ ಹಾಗೂ ಸಿಬ್ಬಂದಿ ಇದ್ದರು.
ಕೆಆರ್ ಐಡಿಎಲ್ ನಲ್ಲಿ 2022ರಿಂದ 2024 ರ ನಡುವೆ ಕೈಗೆತ್ತಿಕೊಂಡ ವಿವಿಧ ಕಾಮಗಾರಿಗಳಲ್ಲಿ 72 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಅಕ್ರಮ ಕುರಿತಾಗಿ ಕೆಆರ್ ಐಡಿಎಲ್ ಅಧಿಕಾರಿಗಳು, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಕೆಆರ್ ಐಡಿಎಲ್ ಕಚೇರಿಯಲ್ಲಿದ್ದ ಹಿಂದಿನ ಇಇ ಜೆಡ್.ಎಂ. ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಅವರಿಬ್ಬರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿತ್ತು. ದೂರು ಕೇಳಿಬಂದ ಬೆನ್ನಲ್ಲೇ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿತ್ತು.
ಆದರೆ ಜೆಡ್.ಎಂ.ಚಿಂಚೋಳಿಕರ್ ತನ್ನ ಮೇಲಿನ ಅಮಾನತು ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಲ್ಲದೆ, ಮಾತೃ ಇಲಾಖೆಯ ಸೇವೆಗೆ ಮರಳಿ, ದಾವಣಗೆರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವಿಚಾರ ತೀವ್ರ ಆಕ್ಷೇಪಕ್ಕೆ ಗುರಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಆದೇಶ ಮಾಡಿತ್ತು. ದೂರಿನಂತೆ ಕೊಪ್ಪಳ ಜಿಲ್ಲಾ ಲೋಕಾಯುಕ್ತ ವಿಭಾಗದಿಂದ ಈಗ ಕಳಕಪ್ಪ ನಿಡಗುಂದಿ ಮನೆ, ಇನ್ನಿತರ ಆಸ್ತಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
24 ಮನೆಗಳ ಮಾಲೀಕ ಈ ಗುಮಾಸ್ತ !
ಕೊಪ್ಪಳ ಹಾಗೂ ಭಾಗ್ಯನಗರ ಪ್ರದೇಶದಲ್ಲಿ ಕಳಕಪ್ಪ ನಿಡಗುಂದಿಗೆ ಸೇರಿದ 24 ಮನೆಗಳಿರುವುದನ್ನು ಲೋಕಾಯುಕ್ತ ಪತ್ತೆ ಮಾಡಿದೆ. ಬಂಡಿ, ಹಿಟ್ನಾಳ್, ಹುಲಿಗಿ, ಯಲಬುರ್ಗಾದಲ್ಲಿ ಪತ್ನಿ, ತಮ್ಮ ಹಾಗೂ ಬಾಮೈದನ ಹೆಸರಿನಲ್ಲಿ 40 ಎಕರೆ ಜಮೀನಿದೆ. ಇದಲ್ಲದೆ 5 ಕಡೆ ನಿವೇಶನ, ಎರಡು ಕಾರು, ಎರಡು ಬೈಕ್, 350 ಗ್ರಾಂ ಬಂಗಾರ, ಒಂದೂವರೆ ಕೆ.ಜಿ ಬೆಳ್ಳಿ ಪತ್ತೆಯಾಗಿದೆ. ಆಸ್ತಿ ಮಾಡಿರುವುದಕ್ಕೆ ಸಂಬಂಧಿಸಿ ಹತ್ತಾರು ಬೇನಾಮಿ ದಾಖಲೆಗಳು ಲಭ್ಯವಾಗಿವೆ. ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ ಮೂರು ಮಹಡಿಗಳ ಮನೆಗಳಿದ್ದು ಐಷಾರಾಮಿ ಬಂಗಲೆಯಂತಿವೆ.
ಕಳಕಪ್ಪ ನಿಡಗುಂದಿ ಮೂಲತಃ ಯಲಬುರ್ಗಾ ತಾಲೂಕಿನ ಬಂಡಿಹಾಳ ಗ್ರಾಮದ ನಿವಾಸಿ. ಕಡು ಬಡತನದಲ್ಲಿದ್ದ ನಿಡಗುಂದಿ ಈಗ ಕೋಟ್ಯಧಿಪತಿ. ಕೆಆರ್ ಐಡಿಎಲ್ ನಿಗಮದ ಕಚೇರಿಗೆ ಬರುತ್ತಿದ್ದ ಎಲ್ಲ ಅಧಿಕಾರಿಗಳು ಈ ವ್ಯಕ್ತಿ ಹೇಳಿದ ಕೆಲಸಗಳನ್ನು ಮಾತ್ರ ಮಾಡುತ್ತಿದ್ದರು. ಹಿಂದೆ ಇಲ್ಲಿ ಅಧಿಕಾರಿಗಳಾಗಿದ್ದ ಜಿ.ಎಂ.ಕೊರಬು ಹಾಗೂ ಕೊಪ್ಪಳದ ಚಿಂಚೋಳಿಕರ್ ಅವರು ಕಳಕಪ್ಪ ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ಈತನ ಭ್ರಷ್ಟ ಆಸ್ತಿಗೆ ಇವರೇ ಬೆನ್ನೆಲುಬಾಗಿದ್ದರು ಎಂಬ ಆರೋಪ ಬಲವಾಗಿದೆ.
In a startling revelation, a low-level contract employee at the Karnataka Rural Infrastructure Development Limited (KRIDL) has been found to own assets worth over ₹100 crore. The Lokayukta officials, who conducted the raid, were left shocked at the scale of unaccounted wealth amassed by the individual.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 11:22 am
HK News Desk
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
14-10-25 11:19 am
Mangalore Correspondent
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm