Heart Attack, Belagavi, Bidar: ಹೃದಯಾಘಾತ ; ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದಾಗಲೇ ಬೆಳಗಾವಿ ಯೋಧ ಕುಸಿದು ಬಿದ್ದು ಸಾವು ! ಬೀದರಿನಲ್ಲಿ ಅತಿಥಿ ಉಪನ್ಯಾಸಕ ಎದೆ ನೋವು ಎನ್ನುತ್ತಲೇ ಮೃತ್ಯು ! 

11-07-25 04:22 pm       HK News Desk   ಕರ್ನಾಟಕ

ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯೋಧನೊಬ್ಬ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಯೋಧ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗಲೇ ಕುಸಿದು ಬೀಳುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.‌ 

ಬೆಳಗಾವಿ, ಜುಲೈ 11 : ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯೋಧನೊಬ್ಬ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಯೋಧ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗಲೇ ಕುಸಿದು ಬೀಳುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.‌ 

ಬೆಳಗಾವಿ ತಾಲೂಕಿನ ಅನಗೋಳ ನಿವಾಸಿ ಇಬ್ರಾಹಿಂ ದೇವಲಾಪುರ (35) ಮೃತ ಯೋಧ. ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ರಾಹಿಂ ರಜೆಯಲ್ಲಿ ಊರಿಗೆ ಬಂದಿದ್ದು ರಸ್ತೆಯಲ್ಲಿ ಹೋಗುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 

ಇಬ್ರಾಹಿಂ ಅವರು ತಲೆಸುತ್ತು ಬಂದ ರೀತಿ ಎಲ್ಲರೂ ನೋಡುತ್ತಿದ್ದಾಗಲೇ ರಸ್ತೆ ಪಕ್ಕ ನಿಂತಿದ್ದ ಯುವಕನ ಕೈ ಹಿಡಿಯುತ್ತ ನೆಲಕ್ಕೆ ಉರುಳಿದ್ದಾರೆ.‌ ಕೂಡಲೇ ಅಲ್ಲಿದ್ದ ಜನರು ಸೇರಿದ್ದು ಆರೈಕೆ ಮಾಡಿದ್ದಾರೆ. ಇಬ್ರಾಹಿಂ ಕುಸಿದು ರಸ್ತೆಗೆ ಬಿದ್ದಿದ್ದು ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದಾರೆ. ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಎಚ್ಚರವಾಗದ ಕಾರಣ ಬೀಮ್ಸ್ ಆಸ್ಪತ್ರೆಗೆ ‌ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಇಬ್ರಾಹಿಂ ಉಸಿರು ನಿಲ್ಲಿಸಿದ್ದರು. ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೀದರ್ ; ಅತಿಥಿ ಉಪನ್ಯಾಸಕ ಕುಸಿದು ಬಿದ್ದು ಸಾವು 

ಬೀದರ್‌ನಲ್ಲಿ ಅತಿಥಿ ಉಪನ್ಯಾಸಕರೊಬ್ಬರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಹುಲಸೂರು ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ.ರವಿಕುಮಾರ್(42) ಸಾವನ್ನಪ್ಪಿದವರು. ಬಸವ ಕಲ್ಯಾಣದಿಂದ ಹುಲಸೂರಿಗೆ ಕರ್ತವ್ಯಕ್ಕೆಂದು ತೆರಳುತ್ತಿದ್ದಾಗ ಎದೆ ನೋವು ಕಾಣಿಸಿತ್ತು.‌

ಇದೇ ವೇಳೆ, ಇದ್ದಕ್ಕಿದ್ದಂತೆ ಎದೆ-ಸೊಂಟ ನೋವು ಹೆಚ್ಚಾಗಿದೆ ಎಂದು ಸಹೋದ್ಯೋಗಿಗೆ ಕರೆ ಮಾಡಿ ತಿಳಿಸಿದ್ದರು. ಕಾಲೇಜಿಗೆ ಬರುವುದು ಬೇಡ ಕೂಡಲೇ ವೈದ್ಯರ ಬಳಿ ತೆರಳಲು ಸಲಹೆ ನೀಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿದ್ದಾಗಲೇ ಸಾವು ಕಂಡಿದ್ದಾರೆ. 6 ವರ್ಷಗಳಿಂದ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾಗಿ ರವಿ ಕೆಲಸ ಮಾಡಿದ್ದರು.

In two separate but equally tragic incidents in Karnataka, a serving Indian Army soldier and a college guest lecturer died after suffering sudden heart attacks, leaving their communities in shock.