ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕರಿಸಿದ ಟಗರು, ರಾಜ್ಯ ರಾಜಕೀಯದಲ್ಲಿ ಸಂಚಲನ, ಖರ್ಗೆ ಮನೆಗೆ ಸಿಎಂ ಆಪ್ತ ಸಚಿವರ ದೌಡು, ಹೈಕಮಾಂಡಿಗೇ ಠಕ್ಕರ್ ! 

10-07-25 09:53 pm       Bangalore Correspondent   ಕರ್ನಾಟಕ

ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ. ಸಿಎಂ ಬದಲಾವಣೆ ಎನ್ನುವುದೆಲ್ಲ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಸಿಎಂ ಸಿದ್ದರಾಮಯ್ಯ ಕಡ್ಡಿ ಮುರಿದಂತೆ ದೆಹಲಿ ಅಂಗಳದಲ್ಲೇ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಜುಲೈ 10 : ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ. ಸಿಎಂ ಬದಲಾವಣೆ ಎನ್ನುವುದೆಲ್ಲ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಸಿಎಂ ಸಿದ್ದರಾಮಯ್ಯ ಕಡ್ಡಿ ಮುರಿದಂತೆ ದೆಹಲಿ ಅಂಗಳದಲ್ಲೇ ಹೇಳಿಕೆ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ಜೋರಾಗಿರುವಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ರಾಹುಲ್ ಗಾಂಧಿ ಭೇಟಿಗೆ ತೆರಳಿದ್ದಾರೆ ಎಂದು ಹೇಳಲಾಗಿದ್ದರೂ, ಅದಕ್ಕೂ ಮೊದಲೇ ಸಿಎಂ ಸಿದ್ದರಾಮಯ್ಯ ತಾನೇ ಇನ್ನೂ ಮೂರು ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳಿರುವುದು ನಾನಾ ರೀತಿಯ ಅರ್ಥಗಳನ್ನು ಹೊರಡಿಸಿದೆ.‌

Rahul Gandhi on Maharashtra elections | Maharashtra polls were rigged, we  will not allow same to happen in Bihar, says Rahul Gandhi - Telegraph India

ದೆಹಲಿ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಜುಲೈ 2ರಂದು ಡಿಕೆ ಶಿವಕುಮಾರ್ ಸಮ್ಮುಖದಲ್ಲಿಯೇ ನಾನೇ ಸಿಎಂ ಎಂದು ಹೇಳಿದ್ದೇನೆ. ಡಿಕೆಶಿ ಅವರೂ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇವೆ. ಸರ್ಕಾರಕ್ಕೆ ಎರಡೂವರೆ ವರ್ಷವಾಗಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯವೇಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. 

ಕಾಂಗ್ರೆಸ್ ನ ಕೆಲವು ಶಾಸಕರೇ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅಭಿಪ್ರಾಯ ತಿಳಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆಯೇ ಹೊರತು, ಇದು ಪಕ್ಷದ ತೀರ್ಮಾನವಲ್ಲ. ಅಧಿಕಾರ ಹಸ್ತಾಂತರದ ಊಹೆಗೆ ಯಾವುದೇ ಅರ್ಥವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Will be CM for 5 years: Siddaramaiah dismisses leadership change

No cabinet reshuffle on cards': DK Shivakumar dismisses rumours over  Karnataka government | Latest News India - Hindustan Times

ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ನಾನೇ ಸಿಎಂ ಎಂದು ಹೂಂಕಾರ ಹಾಕಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಎದ್ದಿದೆ. ಹೈಕಮಾಂಡ್ ನಾಯಕರಿಗೆ ದೆಹಲಿ ಅಂಗಳದಿಂದಲೇ ಸಿದ್ದರಾಮಯ್ಯ ಠಕ್ಕರ್ ನೀಡಿದ್ದಾರೆ ಎಂದು ಅವರ ಹೇಳಿಕೆಯನ್ನು ವಿಶ್ಲೇಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಸಚಿವರು ದೌಡಾಯಿಸಿದ್ದಾರೆ. ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಅವರು ಖರ್ಗೆಯವರನ್ನು ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಕೂಡ ಕರೆಸಿಕೊಂಡಿದ್ದಾರೆ. ಈ ವೇಳೆ‌ ಡೆಲ್ಲಿಯಲ್ಲಿ ಏನಾಗುತ್ತಿದೆ? ದಯವಿಟ್ಟು ಹೇಳಿ ಎಂದು ಖರ್ಗೆ ಅವರಿಗೆ ದುಂಬಾಲು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. 

Mallikarjun Kharge hits back at PM Modi's 'gave away Katchatheevu island'  remark :'Your desperation is palpable' | Mint

Talk on new Chief Minister for Karnataka irrelevant, claims Health Minister Dinesh  Gundu Rao - The Hindu

ED raids at Congress MLA Zameer Ahmed Khan's properties

Parameshwara to continue as KPCC head, but asked to quit Home Ministry -  The Hindu

ದಿಢೀರಾಗಿ ತನ್ನ ಭೇಟಿಗೆ ಬಂದ ಸಚಿವರ ಜೊತೆಗೆ ಸೌಜನ್ಯದಲ್ಲೇ  ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು ಯಾವುದೇ ಗುಟ್ಟು ಬಿಡುಕೊಡದೆ ವಾಪಾಸ್ ಕಳಿಸಿದ್ದಾರೆ. ಖರ್ಗೆ ಭೇಟಿ ಬಳಿಕ ಸಚಿವರು ಮೌನಕ್ಕೆ ಶರಣಾಗಿದ್ದಾರೆ. ನಾಯಕತ್ವದ ಬಗ್ಗೆ ಯಾವುದೇ ಹೇಳಿಕೆ‌ ‌ನೀಡದಂತೆ ಖರ್ಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಖರ್ಗೆ ಭೇಟಿಗೆ ಬಂದಿದ್ದವರು ಬಹುತೇಕ ಸಿಎಂ ಆಪ್ತ ಸಚಿವರೇ ಆಗಿರುವುದರಿಂದ ದೆಹಲಿ ಅಂಗಳದಲ್ಲಿ ರಾಂಗ್ ಮೆಸೇಜ್ ಬಂದಿದೆ ಎನ್ನುವ ಅರ್ಥ ಮಾಡಿಕೊಳ್ಳುವಂತಾಗಿದೆ. 

There is no question of leadership change in Karnataka: Minister Satish  Jarkiholi

File sedition case against anti-constitution remarks: HC Mahadevappa

ಆನಂತರ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ ಮಹಾದೇವಪ್ಪ ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಶಿವಾನಂದ ವೃತ್ತದಲ್ಲಿರುವ ಸಚಿವ ಹೆಚ್‌ಸಿ ಮಹಾದೇವಪ್ಪ ನಿವಾಸದಲ್ಲಿ 25 ನಿಮಿಷಗಳ ಕಾಲ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಇದಾದ ಬಳಿಕ ಉಭಯ ನಾಯಕರು ಒಂದೇ ಕಾರಿನಲ್ಲಿ ತೆರಳಿದ್ದಾರೆ. ಒಟ್ಟು ಬೆಳವಣಿಗೆ ನೋಡಿದರೆ ಸಿಎಂ ಸ್ಥಾನ ನಾ ಕೊಡೆ, ನೀ ಬಿಡೆ ಎನ್ನುವ ರೀತಿಯಾಗಿದೆ ಎನ್ನುವುದು ಖರೆಯಾಗಿದೆ.‌

ಸಿದ್ದರಾಮಯ್ಯ ದೆಹಲಿಗೆ ತೆರಳಿರುವಾಗಲೇ ಇಂಡಿಯಾ ಟುಡೇ ವಾಹಿನಿ‌ ಸಂಪಾದಕ ರಾಜದೀಪ್ ಸರ್ದೇಸಾಯಿ ಮಹತ್ವದ ಸಂದರ್ಶನ ನಡೆಸಿದ್ದು ಹಲವಾರು ಪ್ರಶ್ನೆಗಳಿಗೆ ಸಿದ್ದು ಕಡ್ಡಿ ಮುರಿದಂತೆ ಉತ್ತರಿಸಿದ್ದಾರೆ. ‌2028ರ ಚುನಾವಣೆಯನ್ನೂ ನಾನೇ ನೇತೃತ್ವ ವಹಿಸುತ್ತೇನೆ ಎನ್ನೋದನ್ನೂ ಹೇಳಿ ವಿರೋಧಿ ಪಾಳಯಕ್ಕೆ ಬಿಸಿ ಮುಟ್ಟಿಸಿದ್ದಾರೆ. ಇತ್ತ ರಾಜ್ಯದಲ್ಲಿ ಕೆಲವು ಸ್ವಾಮೀಜಿಗಳು ಸೇರಿದಂತೆ ಒಕ್ಕಲಿಗ ಶಾಸಕರು ಡಿಕೆಶಿ ಸಿಎಂ ಆಗೋದು ಗ್ಯಾರಂಟಿ ಎಂದು ಹೇಳಿ ತೊಡೆ ತಟ್ಟತೊಡಗಿದ್ದಾರೆ.‌

In a bold and defiant declaration from Delhi, Karnataka Chief Minister Siddaramaiah has firmly stated that he will remain the Chief Minister for the full five-year term, dismissing ongoing speculations about leadership change as mere media fiction. “There is no change in leadership. I will continue as CM,” he asserted.