ಬ್ರೇಕಿಂಗ್ ನ್ಯೂಸ್
02-07-25 07:55 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 2 : ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿರುವಾಗಲೇ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು ಭಾರೀ ಕುತೂಹಲ ಮೂಡಿತ್ತು. ಇದರ ಬೆನ್ನಲ್ಲೇ ಹಿರಿಯ ಶಾಸಕ ಬಿ.ಆರ್ ಪಾಟೀಲ್, ಸಿದ್ದರಾಮಯ್ಯ ಲಾಟರಿ ಹೊಡೆದುಬಿಟ್ಟ. ಗ್ರಹಚಾರ ಚೆನ್ನಾಗಿತ್ತು, ಅದಕ್ಕೆ ಸಿಎಂ ಆಗಿ ಬಿಟ್ಟ ಎಂದು ಹೇಳಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಇಷ್ಟಾಗುತ್ತಲೇ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ವರ್ಷ ನಾನೇ ಸಿಎಂ ಆಗಿರ್ತೀನಿ. ನಿಮಗೇಕೆ ಅನುಮಾನ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ.
ನೀವು 5 ವರ್ಷ ಸಿಎಂ ಆಗಿರ್ತೀರಾ? ಬಿಜೆಪಿಯವರು ಸೆಪ್ಟೆಂಬರಲ್ಲಿ ಬದಲಾವಣೆ ಆಗತ್ತೆ ಅಂತಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಹೌದು, ನಿಮಗೇಕೆ ಆ ಅನುಮಾನ? ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸತ್ಯ ಹೇಳುವುದು ಗೊತ್ತೇ ಇಲ್ಲ ಅವರಿಗೆ. ಅವರು ನಂಬುತ್ತಾರಾ ಬಿಡುತ್ತಾರಾ ಗೊತ್ತಿಲ್ಲ. ನಾವು ಎಲ್ಲ ಒಟ್ಟಾಗಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೀನಿ. 5 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಕಲ್ಲು ಬಂಡೆ ತರಹ ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ಬಿಜೆಪಿಯವರು ಹಗಲು ಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. ಯಾವುದಾದರೂ ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ಕೇಳಿದರು.
ಡಿ.ಕೆ ಶಿವಕುಮಾರ್ ಅವರನ್ನು ಬೆಂಬಲಿಸುವ ಶಾಸಕರು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನನ್ನಂತೆಯೇ ನೂರಾರು ಜನರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾನು ಒಬ್ಬಂಟಿಯಲ್ಲ, ಪಕ್ಷದ ಲಕ್ಷಾಂತರ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನಾವು ಮೊದಲು ಅವರ ಬಗ್ಗೆ ಯೋಚಿಸಬೇಕು ಎಂದರು.
ವರ್ಷದ ಕೊನೆಯ ವೇಳೆಗೆ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸುವುದರಿಂದ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದ ವಿಚಾರ ಉಲ್ಲೇಖಿಸಿ ನಾನಾ ರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಕಾಂಗ್ರೆಸ್ ಶಾಸಕರೇ ಅನುಮಾನದ ಮಾತುಗಳನ್ನು ಆಡುತ್ತಿರುವುದರಿಂದ ಮಾಧ್ಯಮದಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ, ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ಕೈ ಬಲಪಡಿಸುವುದಷ್ಟೇ ನಮ್ಮ ಉದ್ದೇಶ. ಪಕ್ಷದಲ್ಲಿ ಶಿಸ್ತು ತರುವುದು ಮತ್ತು ಸಂಘಟನೆ ವಿಚಾರದಲ್ಲಿ ಶಾಸಕರ ಜೊತೆಗೆ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ವನ್ ಟು ವನ್ ಮಾತುಕತೆ ನಡೆಸುತ್ತಿದ್ದಾರೆ. ಅದರರ್ಥ ನಾಯಕತ್ವ ಬದಲಾವಣೆ ಅಲ್ಲ. ನಾಯಕತ್ವ ವಿಚಾರದಲ್ಲಿ ಮಾತನಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ, ಕರ್ನಾಟಕದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸತತ ಮೂರನೇ ದಿನವೂ ಪಕ್ಷದ ಶಾಸಕರೊಂದಿಗೆ ಸಭೆಗಳನ್ನು ಮುಂದುವರೆಸಿದ್ದು ಕಾಂಗ್ರೆಸಿನಲ್ಲಿ ಆಗುತ್ತಿರುವ ಒಟ್ಟು ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
Amid rising speculation about a possible change in leadership within the Karnataka Congress, Chief Minister Siddaramaiah has issued a strong and clear statement asserting that he will remain Chief Minister for the full five-year term. His comments come in response to recent remarks by Congress President Mallikarjun Kharge and senior leader B.R. Patil, which had intensified political chatter in the state.
02-07-25 11:02 pm
Bangalore Correspondent
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
Bengaluru Rural Name: ಬೆಂಗಳೂರು ಗ್ರಾಮಾಂತರ ಜಿಲ್...
02-07-25 10:05 pm
CM Siddaramaiah: ಐದು ವರ್ಷ ನಾನೇ ಸಿಎಂ ಆಗಿರ್ತೀನಿ...
02-07-25 07:55 pm
Belagavi, ASP Narayan Bharamani, Dharwad: ಅಂದ...
02-07-25 02:21 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
02-07-25 08:05 pm
Mangalore Correspondent
Puttur Bjp, Krishna Rao, Pregnant: ಬಿಜೆಪಿ ಮುಖ...
02-07-25 11:39 am
ಹಾಸನದಲ್ಲಿ ಹೃದಯಾಘಾತ ಹೆಚ್ಚಳ ಬಗ್ಗೆ ವರದಿ ಕೇಳಿದ್ದೇ...
30-06-25 10:59 pm
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
02-07-25 10:15 pm
Bangalore Correspondent
Massive Scam, Mangalore City Corporation, Fak...
02-07-25 12:24 pm
Mulki Abdul Latif Murder Case, Accused Arrest...
01-07-25 04:36 pm
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm