ಬ್ರೇಕಿಂಗ್ ನ್ಯೂಸ್
02-07-25 02:21 pm HK News Desk ಕರ್ನಾಟಕ
ಧಾರವಾಡ, ಜು 02 : ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡ ಎಎಸ್ಪಿ ನಾರಾಯಣ ಭರಮನಿ ಸ್ವಯಂ ಘೋಷಿತ ರಾಜೀನಾಮೆಗೆ ಮುಂದಾಗಿದ್ದಾರೆ.
ಈಗಾಗಲೇ ನಾರಾಯಣ ವಿ ಭರಮನಿ ರಾಜೀನಾಮೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಮನವೊಲಿಸುವ ಕಾರ್ಯವು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾಗಿದೆ. ಈ ನಡುವೆ ಸಿಎಂ ವೇದಿಕೆ ಮೇಲೆ ಅವಮಾನ ಮಾಡಿದ್ದಕ್ಕೆ ಬೇಸರಗೊಂಡು ನಾರಾಯಣ ಅವರು ರಾಜೀನಾಮೆಗೆ ಮುಂದಾಗಿದ್ದ ಎಂಬ ಮಾತುಗಳು ಕೇಳಿಬಂದಿವೆ.
ಆ ದಿನ ವೇದಿಕೆಯಲ್ಲಿ ಏನಾಗಿತ್ತು?
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ವೇದಿಕೆಗೆ ಕರೆದು ಹೊಡೆಯಲು ಕೈ ಎತ್ತಿದ್ದು ವಿವಾದಕ್ಕೆ ಕಾರಣವಾಗಿತ್ತು. ವೇದಿಕೆ ಮೇಲೆ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗೆ "ಏಯ್.. ಯಾರಿಲ್ಲಿ ಎಸ್ಪಿ?" ಎಂದು ಕೂಗಿ ಕೈ ಎತ್ತಲು ಮುಂದಾದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸಿದ್ದರಾಮಯ್ಯ ಕೋಪಗೊಂಡಿದ್ದರು. ಸಿದ್ದರಾಮಯ್ಯ ಅವರ ಈ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತವಾಗಿತ್ತು.
ಯಾರಿದು ಅಧಿಕಾರಿ? ಹಿನ್ನೆಲೆ ಏನು?
ನಾರಾಯಣ 1994ರ ಬ್ಯಾಚ್ನ ಪೊಲೀಸ್ ಅಧಿಕಾರಿ. ಬೆಳಗಾವಿ ಜಿಲ್ಲೆಯಲ್ಲಿ ಅವರು ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿದ್ದಾರೆ. 2007ರಲ್ಲಿ ನಡೆದ ಕುಖ್ಯಾತ ರೌಡಿ ಪ್ರವೀಣ್ ಶಿಂತ್ರೆ ಎನ್ಕೌಂಟರ್ ಅನ್ನು ಅವರೇ ಮುನ್ನಡೆಸಿದ್ದರು. ನಾರಾಯಣ.ವಿ.ಭರಮನಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಗ್ರಾಮದವರು. ಅವರು ಜಮೀನ್ದಾರ ಕುಟುಂಬಕ್ಕೆ ಸೇರಿದವರು.
2007ರಲ್ಲಿ ಕುಖ್ಯಾತ ಸುಪಾರಿ ಕಿಲ್ಲರ್ ಪ್ರವೀಣ್ ಶಿಂತ್ರೆಯನ್ನು ಎನ್ಕೌಂಟರ್ ಮಾಡಿ ಕೊಂದರು. ಶಿಂತ್ರೆ ವಿರುದ್ಧ ಅತ್ಯಾಚಾರ, ಕೊಲೆ, ಜೀವ ಬೆದರಿಕೆ ಸೇರಿದಂತೆ 38 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಸದ್ಯಕ್ಕೆ ನಾರಾಯಣ ಅವರು ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಈ ಹಿಂದೆ ಬೀದರ್, ಗದಗ್, ಹುಬ್ಬಳ್ಳಿಯಲ್ಲೂ ಕೆಲಸ ಮಾಡಿದ್ದಾರೆ.
ಅಕ್ಟೋಬರ್ 2024ರಲ್ಲಿ ಧಾರವಾಡದ ನರೇಂದ್ರ ಕ್ರಾಸ್ನಲ್ಲಿ ಖಾಸಗಿ ಬಸ್ನಲ್ಲಿ ದಾಖಲೆಗಳಿಲ್ಲದೆ ಚಿನ್ನಾಭರಣ ಸಾಗಿಸುತ್ತಿದ್ದಾಗ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಸುಮಾರು 11 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಭರಮನಿ ಭಾಗಿಯಾಗಿದ್ದರು. 2022ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಂತರರಾಜ್ಯ ಕಳ್ಳರಾದ ಪ್ರಕಾಶ ಪಾಟೀಲ ಮತ್ತು ಮಹೇಶ ಕಾಳಗಿನಕೊಪ್ಪ ಅವರನ್ನು ಬಂಧಿಸುವಲ್ಲಿ ಭರಮನಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ನಡೆದ ಹೋರಾಟಗಳನ್ನು ನಿಯಂತ್ರಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಅವರ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು ಸರಿಯಲ್ಲ ಎಂದು ಹಲವರು ಟೀಕಿಸಿದ್ದಾರೆ. "ಅಧಿಕಾರಿಗಳನ್ನು ಸಾರ್ವಜನಿಕವಾಗಿ ಈ ರೀತಿಯಲ್ಲಿ ಅವಹೇಳನ ಮಾಡುವುದು ಸರಿಯಲ್ಲ" ಎಂದು ಹಲವರು ಹೇಳಿದ್ದಾರೆ.
Deputy Superintendent of Police (ASP) Narayan V. Bharamani has reportedly submitted his resignation following an incident earlier this year where he was allegedly humiliated by Karnataka Chief Minister Siddaramaiah during a public event in Belagavi.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm