ಬ್ರೇಕಿಂಗ್ ನ್ಯೂಸ್
15-06-25 09:29 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 15 : ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರು ಸಂಸದರು ಹಾಗೂ 32 ಶಾಸಕರ ಸಾಧನೆ ಕುರಿತಾಗಿ ‘ಸಿವಿಕ್’ ಎನ್ನುವ ಸಂಸ್ಥೆ ವರದಿ ಬಿಡುಗಡೆ ಮಾಡಿದ್ದು, ಶಾಸಕರ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದನ್ನು ಬೊಟ್ಟು ಮಾಡಿದೆ.
ಎರಡು ವರ್ಷದಲ್ಲಿ ಆದಾಯ ಹೆಚ್ಚಳ ಆಗಿರೋದರಲ್ಲಿ ಬೆಂಗಳೂರಿನ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ ಅವರು (ಶೇ. 1,3399) ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಶಾಸಕ ಮುನಿರತ್ನ (ಶೇ 959), ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ (ಶೇ 318) ಮತ್ತು ಬಿಜೆಪಿಯ ಆರ್.ಅಶೋಕ್ (ಶೇ 104) ನಂತರದ ಸ್ಥಾನ ಪಡೆದಿದ್ದಾರೆ.
'ನಮ್ಮ ನೇತಾ ನಮ್ಮ ರಿವ್ಯೂ’ ಭಾಗವಾಗಿ ಈ ವರದಿ ಬಿಡುಗಡೆಯಾಗಿದೆ. ಜೂನ್ 24 ರಂದು ಬೆಂಗಳೂರಿನ ನಾಲ್ವರು ಸಂಸದರು 18ನೇ ಲೋಕಸಭೆ ಸದಸ್ಯರಾಗಿ ಒಂದು ವರ್ಷ ಪೂರೈಸಿದರು. 32 ಮಂದಿ ಶಾಸಕರು ಮೇ 20ರಂದು ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದು ಈ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರ ವರ್ಷದ ಸಾಧನೆ ಕುರಿತು ವರದಿ ಬಿಡುಗಡೆ ಮಾಡಲಾಗಿದೆ.
ನಾಗರಿಕ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಆರು ತಿಂಗಳಲ್ಲಿ ಸಂಗ್ರಹಿಸಿದ ವರದಿ ಕಾರ್ಡ್ ಇದಾಗಿದ್ದು, ಹಾಜರಾತಿ, ಅಧಿವೇಶನ ಭಾಗವಹಿಸುವಿಕೆ, ಸಂಸದರ ನಿಧಿ ಬಳಕೆ, ಕ್ರಿಮಿನಲ್ ದಾಖಲೆಗಳು ಮತ್ತು ವೈಯಕ್ತಿಕ ಆಸ್ತಿ ಬೆಳವಣಿಗೆಯನ್ನು ಪರಿಶೀಲನೆ ನಡೆಸಿವೆ.
2023ರ ಹೊತ್ತಿಗೆ ಮುನಿರತ್ನ ಮೇಲೆ ಲೈಂಗಿಕ ಕಿರುಕುಳದ ಆರೋಪ ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಡಿಸೆಂಬರ್ 2024 ರಲ್ಲಿ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಆರೋಪಗಳೂ ಕೇಳಿ ಬಂದಿವೆ, ಇದರಿಂದಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಾಸಕರು ಇವರಾಗಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದರಲ್ಲಿ ಪಿ.ಸಿ. ಮೋಹನ್ ಮೊದಲ ಸ್ಥಾನ ಪಡೆದಿದ್ದರೆ, ತೇಜಸ್ವಿ ಸೂರ್ಯ ಕಡಿಮೆ ಹಾಜರಾತಿಯನ್ನು ಹೊಂದಿದ್ದಾರೆ. ಸಂಸತ್ತಿನ ಚರ್ಚೆಗಳಲ್ಲಿ ತೇಜಸ್ವಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿದ್ದಾರೆಂದು ತಿಳಿಸಲಾಗಿದೆ. ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದರಲ್ಲಿ ತೇಜಸ್ವಿ ಸೂರ್ಯ ಮೊದಲ ಸ್ಥಾನ ಪಡೆದಿದ್ದಾರೆ. ಸಂಸದರ ನಿಧಿ ಬಳಕೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ ಶಾಸಕರಿಗೆ ಸಂಬಂಧಿಸಿ ಸಾಧನೆ ನೋಡಿದರೆ ಶಾಸಕರ ನಿಧಿಯನ್ನು ಬಳಸುವಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ನಾಲ್ವರು ಶಾಸಕರು ಮಾತ್ರ ಸಂಪೂರ್ಣ ಬಳಸಿಕೊಂಡಿದ್ದಾರೆ. 6 ಶಾಸಕರು ಶೇ 90ಕ್ಕಿಂತ ಅಧಿಕ ನಿಧಿ ಬಳಕೆ ಮಾಡಿದ್ದಾರೆ. ಪ್ರದೇಶಾಭಿವೃದ್ಧಿ ಯೋಜನೆಯಡಿ 4 ಕೋಟಿ ರೂ. ನಿಧಿಯನ್ನು ಕೇವಲ ನಾಲ್ವರು ಶಾಸಕರು ಸಂಪೂರ್ಣ ಬಳಸಿಕೊಂಡಿದ್ದಾರೆ. 40.79 ಕೋಟಿ ರೂಪಾಯಿ ಖರ್ಚಾಗದೆ ಉಳಿದಿದ್ದು, 4.84 ಕೋಟಿ ರದ್ದಾಗುವ ಹಂತದಲ್ಲಿದೆ. ಮಹದೇವಪುರ ಶಾಸಕಿ ಎಸ್.ಮಂಜುಳಾ ತನ್ನ ನಿಧಿಯನ್ನು ಹಂಚಿಕೆಯೇ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
A recent report by the civic organization CIVIC has revealed a staggering rise in the personal incomes of several Bengaluru MLAs over the past two years. The report, released as part of the initiative “Namma Neta Namma Review,” evaluates the performance of four Bengaluru MPs and 32 MLAs.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm