ಬ್ರೇಕಿಂಗ್ ನ್ಯೂಸ್
10-06-25 06:49 pm HK News Desk ಕರ್ನಾಟಕ
ಕಾರವಾರ, ಜೂ.10 : ಒಳ್ಳು ಒನಕೆಯ ನುಂಗಿ, ಕಲ್ಲು ಗೂಟವ ನುಂಗಿ.. ಕೋಡಗನ ಕೋಳಿ ನುಂಗಿತ್ತಾ... ಅನ್ನುವ ತತ್ವಪದವನ್ನು ನೀವೆಲ್ಲ ಕೇಳಿರುತ್ತೀರಿ. ಅದೇ ರೀತಿ ಇಲ್ಲಿ ಕೋಡಗನ ಬದಲು ಹಾವು ವಿಚಿತ್ರವಾಗಿ ವರ್ತಿಸಿ, ಈ ಪದ್ಯ ನೆನಪಿಸಿದೆ. ಯಾಕಂದ್ರೆ, ಇಲ್ಲೊಂದು ನಾಗರಹಾವು ಹರಿತ ಚಾಕುವನ್ನು ನುಂಗಿ ಒದ್ದಾಡಿ ಸುದ್ದಿಯಾಗಿದೆ.
ಇಲಿ, ಕೋಳಿ, ಮೊಟ್ಟೆ, ಕಪ್ಪೆಯನ್ನು ಹಾವುಗಳು ನುಂಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ತನ್ನ ಆಹಾರ ಅನ್ಕೊಂಡು ನಾಗರ ಹಾವು ಚಾಕುವನ್ನೇ ನುಂಗಿದ್ದು ಆನಂತರ ವಿಲ ವಿಲ ಒದ್ದಾಡಿದ ಪ್ರಸಂಗ ಕುಮಟಾದಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕರ ಅಡುಗೆ ಮನೆಯಲ್ಲಿದ್ದ ಚಾಕು ಮನೆಯ ಹೊರಗಡೆ ಬಿದ್ದಿತ್ತು. ಆದರೆ ಅಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ಮನೆಯವರು ಸ್ಥಳಕ್ಕೆ ಹೋಗಲು ಹೆದರಿದ್ದರು. ಕೆಲ ಹೊತ್ತಲ್ಲಿ ಅಲ್ಲಿದ್ದ ಚಾಕು ಕಣ್ಮರೆಯಾಗಿತ್ತು. ಹಾವು ಮಾತ್ರ ಏನೋ ತಿಂದು ಮಲಗಿರುವಂತೆ ಬಿದ್ದುಕೊಂಡಿತ್ತು. ಹಾವು ಅಲ್ಲಿಂದ ಕದಲದೇ ಇದ್ದುದರಿಂದ ಮತ್ತು ಚಾಕು ಕೂಡ ಇಲ್ಲದಿರುವುದನ್ನು ನೋಡಿ ಅನುಮಾನದಲ್ಲಿ ಉರಗ ತಜ್ಞ ಪವನ್ ನಾಯ್ಕ ಅವರನ್ನು ಕರೆಸಿದ್ದರು.
ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಹಾವು ಚಾಕು ನುಂಗಿ ಒದ್ದಾಡುತ್ತಿರುವುದು ಖಚಿತವಾಗಿದೆ. ಚಾಕುವಿನ ತುದಿ ಗಂಟಲಿನಲ್ಲಿ ಸಿಲುಕಿದ್ದು, ಅದನ್ನು ಹೊರಹಾಕಲು ಹಾವು ಒಡ್ಡಾಡುತ್ತಿರುವುದು ಕಂಡುಬಂದಿದೆ. ಚಾಕುವನ್ನು ಹೊರತೆಗೆಯದಿದ್ದರೆ ಹಾವು ಸಾಯುತ್ತದೆ ಎಂದು ಪವನ್ ಕೂಡಲೇ ಅದನ್ನು ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಅವರ ಮನೆಗೆ ಕೊಂಡೊಯ್ದು ಅರ್ಧ ಗಂಟೆಗೂ ಆಪರೇಶನ್ ಮಾಡಿಸಿದ್ದಾರೆ. ಕೊನೆಗೆ, ಚಾಕುವನ್ನು ಹಾವಿನ ಹೊಟ್ಟೆಯಿಂದ ಹೊರ ತೆಗೆದು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Kumta Snake Swallows Knife in Bizarre Incident at Kumta, Rescued After Emergency Operation.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm