ಬ್ರೇಕಿಂಗ್ ನ್ಯೂಸ್
10-06-25 06:10 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 10 : ರಾಜ್ಯ ಸರ್ಕಾರವು ಮೇಲ್ಮನೆಗೆ ನಾಮನಿರ್ದೇಶನ ಮಾಡಲು ನಾಲ್ವರ ಹೆಸರನ್ನು ಅಂತಿಮಗೊಳಿಸಿದ್ದರೂ, ತೆರೆಮರೆಯಲ್ಲಿ ಇದರಲ್ಲಿ ಬದಲಾವಣೆ ಮಾಡಲು ಕಸರತ್ತು ನಡೆದಿದೆ. ಹೀಗಾಗಿ ಈ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸದೆ ಸರ್ಕಾರ ಮತ್ತು ಕೆಪಿಸಿಸಿ ಅಂಗಳದಲ್ಲಿಯೇ ಉಳಿಸಿಕೊಂಡು ಆಕಾಂಕ್ಷಿಗಳು ಎಡತಾಕಲು ಅವಕಾಶ ನೀಡಲಾಗಿದೆ.
ಮೇಲ್ಮನೆ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿದ ಹೊರತಾಗಿಯೂ, ಮುಖ್ಯಮಂತ್ರಿ ಕಚೇರಿಯಲ್ಲಿಯೇ ಸಿಲುಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವು ಹೆಸರುಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಆಕ್ಷೇಪ ಇರುವುದರಿಂದ ಡಿಕೆಶಿ ಒಪ್ಪಿಗೆ ಸಿಕ್ಕದೆ ಪಟ್ಟಿ ಅಂತಿಮಗೊಂಡಿಲ್ಲ ಎನ್ನಲಾಗಿದೆ. ಜೆಡಿಎಸ್ ನಿಂದ ಕಾಂಗ್ರೆಸ್ ಬಂದಿದ್ದ ರಮೇಶ್ ಬಾಬು, ಮಾಜಿ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅನಿವಾಸಿ ಭಾರತೀಯ ಘಟಕದ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಮತ್ತು ದಲಿತ ಮುಖಂಡ ಡಿ.ಜಿ. ಸಾಗರ್ ಅವರ ಹೆಸರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಪಕ್ಷ ಮತ್ತು ಸರ್ಕಾರದ ಕಡೆಯಿಂದ ಅನುಮೋದನೆ ನೀಡಲಾಗಿತ್ತು.
ಜನತಾದಳ (ಜಾತ್ಯತೀತ) ಹಿನ್ನೆಲೆ ಹೊಂದಿರುವ ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಮಾಡಲು ಪಕ್ಷದಲ್ಲಿ ಕೆಲವು ನಾಯಕರ ಆಕ್ಷೇಪಣೆ ಇದೆ ಎಂದು ಮೂಲಗಳು ಹೇಳುತ್ತಿವೆ. ಹೀಗಾಗಿ ಪಟ್ಟಿಗೆ ಬ್ರೇಕ್ ಸಿಕ್ಕಿದೆ ಎನ್ನುವ ಮಾಹಿತಿ ಇದೆ. ಬಾಬು ಈ ಹಿಂದೆ ಜೆಡಿಎಸ್ ನಾಮನಿರ್ದೇಶನದ ಮೇಲೆ ಎಂಎಲ್ಸಿ ಆಗಿದ್ದವರು. 2020 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇವರ ಹೆಸರನ್ನು ಬದಲಾಯಿಸುವ ಬಗ್ಗೆ ಕೆಲವು ನಾಯಕರು ಒತ್ತಡ ಹಾಕಿದ್ದಾರೆ. ಈ ಹೆಸರಗಳಲ್ಲಿಯೂ ಸಿದ್ದರಾಮಯ್ಯ ಬಣ, ಡಿಕೆಶಿ ಬಣ ಎಂಬ ಗುಂಪು ಇರುವುದರಿಂದ ಈ ಬಗ್ಗೆಯೂ ಪಕ್ಷದೊಳಗೆ ಚರ್ಚೆ ನಡೆದಿದೆ.
ನಾಲ್ಕು ಸ್ಥಾನಗಳಲ್ಲಿ, ಮೂರು ಎಂಎಲ್ಸಿಗಳ ಅವಧಿ ಆರು ವರ್ಷಗಳ ವರೆಗೆ ಮತ್ತು ಉಳಿದ ಒಂದು ಸ್ಥಾನ (ಸಿಪಿ ಯೋಗೇಶ್ವರ ರಾಜೀನಾಮೆ ನೀಡಿದ ನಂತರ ಖಾಲಿಯಾಗಿದೆ) ಒಂದು ವರ್ಷದ ಅವಧಿಗೆ ಖಾಲಿ ಇದೆ. ಯಾರಿಗೆ ಯಾವುದನ್ನು ನೀಡಬೇಕೆಂಬ ಬಗ್ಗೆಯೂ ಗೊಂದಲವಿದೆ. ಒಂದು ವರ್ಷದ ಅವಧಿಯ ಎಂಎಲ್ಸಿ ಸ್ಥಾನವನ್ನು ತೆಗೆದುಕೊಳ್ಳಲು ಯಾರೂ ಸಿದ್ಧರಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿದ್ದು, ಅಂತಿಮಗೊಂಡ ಹೆಸರುಗಳನ್ನು ಬದಲಾಯಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಕೆಲವರು ತಮ್ಮ ಹೆಸರುಗಳನ್ನು ಪರಿಗಣಿಸುವಂತೆ ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಾಲ್ಕು ಸ್ಥಾನ ಭರ್ತಿಯಾದರೆ, ಕಾಂಗ್ರೆಸ್ ಪರಿಷತ್ತಿನಲ್ಲಿ ಸರಳ ಬಹುಮತ ಪಡೆಯುವ ನಿರೀಕ್ಷೆಯಿದೆ.
Four Names Finalized for MLC Nominations Including Dinesh Amin Mattu, Ramesh Babu.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm