ಬ್ರೇಕಿಂಗ್ ನ್ಯೂಸ್
27-05-25 12:36 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 27 : ಟ್ರಾಫಿಕ್ ಪೊಲೀಸರು ಬೈಕ್ ಸವಾರನನ್ನು ದಿಢೀರ್ ಅಡ್ಡಗಟ್ಟಿದ್ದರಿಂದ ಹಿಂಬದಿ ಸೀಟಿನಲ್ಲಿ ಮಹಿಳೆ ಹಿಡಿದುಕೊಂಡಿದ್ದ ಮೂರು ವರ್ಷದ ಮಗುವೊಂದು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದ್ದು, ಸಾರ್ವಜನಿಕರು ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮೂವರು ಪೊಲೀಸ್ ಸಿಬಂದಿಯನ್ನು ಅಮಾನತುಗೊಳಿಸಿ ಆದೇಶ ಮಾಡಿದೆ.
ಮದ್ದೂರು ತಾಲೂಕು ಗೊರವನಹಳ್ಳಿಯ ವಾಣಿ- ಮಹೇಶ್ ದಂಪತಿ ಪುತ್ರಿ ರಿತೀಕ್ಷಾ(3) ಮೃತಪಟ್ಟ ಮಗು. ಮಗುವಿಗೆ ನಾಯಿ ಕಚ್ಚಿದ್ದರಿಂದ ಮಗುವಿನ ದೊಡ್ಡಪ್ಪ ಭಾಸ್ಕರ್ ಗೌಡ ತನ್ನ ಬೈಕಿನಲ್ಲಿ ಆಸ್ಪತ್ರೆಗೆ ಕರೆತರುತ್ತಿದ್ದರು. ಹಿಂಬದಿಯಲ್ಲಿ ಮಗವಿನ ತಾಯಿ ವಾಣಿ ಮಗುವನ್ನು ತೊಡೆದ ಮೇಲೆ ಕುಳ್ಳಿರಿಸಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಮದ್ದೂರು ಬಳಿಯ ಸ್ವರ್ಣಸಂದ್ರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಭಾಸ್ಕರ್ ಗೌಡ ಅವರನ್ನು ತಡೆದು ನಿಲ್ಲಿಸಿದ್ದಾರೆ. ಆಗ, ಮಗುವಿಗೆ ನಾಯಿ ಕಚ್ಚಿದೆ, ಹೀಗಾಗಿ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ಹೆಲ್ಮೆಟ್ ತಂದಿಲ್ಲ ಮನವಿ ಮಾಡಿದರು. ಈ ವೇಳೆ, ಅಲ್ಲಿದ್ದ ಎಎಸ್ಐ ಮಹೇಶ್ ಅವರನ್ನು ಮುಂದೆ ಹೋಗಲು ಬಿಟ್ಟಿದ್ದಾರೆ.
ಬೈಕ್ ಮುಂದೆ ಸಾಗುತ್ತಿದ್ದಂತೆ ಮತ್ತೊಬ್ಬ ಪೊಲೀಸ್ ಕಾನ್ಸ್ ಟೇಬಲ್ ಭಾಸ್ಕರ ಗೌಡ ಬೈಕನ್ನು ತಡೆದಿದ್ದಾರೆ. ಇದರಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿದ್ದು, ಹಿಂದಿನಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿಯಾಗಿದೆ. ಸ್ವಲ್ಪ ಡಿಕ್ಕಿಯಾಗುತ್ತಲೇ ಬೈಕ್ ಸವಾರ ಭಾಸ್ಕರ ಗೌಡ, ಹಿಂಬದಿ ಕುಳಿತಿದ್ದ ವಾಣಿ ಮತ್ತು ಅವರ ಕೈಯಲ್ಲಿದ್ದ ಮಗು ರಸ್ತೆಗೆ ಬಿದ್ದಿದೆ. ಮಗುವಿನ ತಲೆಗೆ ರಸ್ತೆ ಬಡಿದಿದ್ದು, ತೀವ್ರ ಗಾಯಗೊಂಡಿತ್ತು. ಕೂಡಲೇ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆದರೆ ಪೊಲೀಸ್ ಪೇದೆ ಹ್ಯಾಂಡಲ್ ಹಿಡಿದೆಳೆದಿದ್ದರಿಂದ ಬೈಕ್ ಆಯತಪ್ಪಿ ಬಿದ್ದಿದೆ ಎಂದು ಸವಾರ ಆರೋಪಿಸಿದ್ದು, ಸಾರ್ವಜನಿಕರ ಆಕ್ರೋಶ ಪೊಲೀಸರ ವಿರುದ್ಧ ತಿರುಗಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ರಸ್ತೆ ಮಧ್ಯೆ ತಡೆದು ನಿಲ್ಲಿಸುವುದು, ದಂಡ ಕೀಳುವ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಮೂವರು ಎಎಸ್ಐಗಳಾದ ಜಯರಾಮು, ನಾಗರಾಜು ಮತ್ತು ಗುರುದೇವ್ ಎಂಬವರನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತುಗೊಳಿಸಿದ್ದಾರೆ. ಪೊಲೀಸರ ದಿಢೀರ್ ತಪಾಸಣೆಯಿಂದಾಗಿಯೇ ಇಂತಹ ಘಟನೆಗಳಾಗುತ್ತಿದ್ದು, ಇದಕ್ಕೆ ರಸ್ತೆ ಮಧ್ಯೆ ದಂಡ ಕೀಳುವ ಟ್ರಾಫಿಕ್ ಪೊಲೀಸರೇ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
A three-year-old child died after falling off a motorbike that was allegedly stopped by police to enforce fines in Karnataka’s Mandya district. The child, Ritheeksha, was reportedly being taken to a hospital in Mandya by her parents from their village when police officers reportedly blocked the bike, causing it to lose control.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am