Bagalkot, Monkey Visits Animal Hospital: ಬಾಗಲಕೋಟೆ ; ಕುಂಡೆ ನೋವು ಸಹಿಸಲಾರದೇ ಪಶು ಆಸ್ಪತ್ರೆಗೆ ಬಂದ ಮಂಗ, ಡಾಕ್ಟರ್ ಗೆ ಕೈ ತೋರಿಸಿ ನೋವಿಗೆ ಚಿಕಿತ್ಸೆ ಪಡೆದು ಹೋದ ! 

22-05-25 12:41 pm       HK News Desk   ಕರ್ನಾಟಕ

ಮಂಗಗಳು ಮನುಷ್ಯರಷ್ಟೇ ಬುದ್ಧಿವಂತ ಜೀವಿಗಳು ಎಂಬುದು ಎಲ್ಲರಿಗೂ ತಿಳಿದಿದೆ. ಮಾತನಾಡಲು ಬರುವುದಿಲ್ಲ ಅಷ್ಟೇ ಆದರೆ, ಮನಷ್ಯನಂತೆ ಯೋಚಿಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವಿದೆ. ಅಲ್ಲದೆ, ಮನುಷ್ಯನೊಂದಿಗೆ ತನ್ನದೇ ಶೈಲಿಯಲ್ಲಿ ಸಂವಹನ ನಡೆಸುವ ಕಲೆಯನ್ನು ಸಹ ಮಂಗಗಳು ಹೊಂದಿವೆ.

ಬಾಗಲಕೋಟೆ, ಮೇ 22 : ಮಂಗಗಳು ಮನುಷ್ಯರಷ್ಟೇ ಬುದ್ಧಿವಂತ ಜೀವಿಗಳು ಎಂಬುದು ಎಲ್ಲರಿಗೂ ತಿಳಿದಿದೆ. ಮಾತನಾಡಲು ಬರುವುದಿಲ್ಲ ಅಷ್ಟೇ ಆದರೆ, ಮನಷ್ಯನಂತೆ ಯೋಚಿಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವಿದೆ. ಅಲ್ಲದೆ, ಮನುಷ್ಯನೊಂದಿಗೆ ತನ್ನದೇ ಶೈಲಿಯಲ್ಲಿ ಸಂವಹನ ನಡೆಸುವ ಕಲೆಯನ್ನು ಸಹ ಮಂಗಗಳು ಹೊಂದಿವೆ.

ಇದು ಆಗಾಗ ಸಾಬೀತು ಕೂಡ ಆಗಿದ್ದು, ಇದೀಗ ಮತ್ತೊಮ್ಮೆ ಸಾಬೀತಾಗಿದೆ.

ಅಂದಹಾಗೆ, ಮನುಷ್ಯನಿಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆಸ್ಪತ್ರೆಗೆ ಹೋಗುತ್ತಾನೆ. ಆದರೆ, ಮೂಕ ಪ್ರಾಣಿಗಳಿಗೆ ಸಮಸ್ಯೆಯಾದರೆ ಎಲ್ಲಿಗೆ ಹೋಗಬೇಕು? ಪಶುವೈದ್ಯಕೀಯ ಆಸ್ಪತ್ರೆಗಳಿದ್ದರು ಕೂಡ ಪ್ರಾಣಿಗಳಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ. ಸಾಕು ಪ್ರಾಣಿಗಳಾದರೆ, ಅದರ ಮಾಲೀಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ, ಸ್ವತಂತ್ರವಾಗಿ ಅಡ್ಡಾಡಿಕೊಂಡಿರುವ ಜೀವಿಗಳು ಎಲ್ಲಿಗೆ ಹೋಗಬೇಕು? ಆದರೆ, ಇಲ್ಲೊಂದು ಕೋತಿ ತಾನಾಗೇ ಪಶು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದೆ.

ಹೌದು, ಕುಂಡೆ ನೋವು ಸಹಿಸಲಾರದೇ ಮಂಗವೊಂದು ತಾನಾಗೆ ಪಶು ಆಸ್ಪತ್ರೆಗೆ ಆಗಮಿಸಿದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ.

ಗೂಡೂರಿನ ಎಸ್ ಸಿ ಪಶು ಆಸ್ಪತ್ರೆಗೆ ಬಂದ ಮಂಗವೊಂದು, ಪಶು ವೈದ್ಯರಿಗೆ ತನ್ನ ಕುಂಡೆ ಕಡೆ ಕೈ ತೋರಿಸಿ, ತನ್ನ ಸಮಸ್ಯೆಯನ್ನು ಹೇಳಿಕೊಂಡಿದೆ. ತನಗಾದ ವೇದನೆಯನ್ನು ಕೈ ಸನ್ನೆ ಮೂಲಕ ಕಪಿರಾಯ ತೋರಿಸಿದ್ದಾನೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ಪಶುವೈದ್ಯ ಜಿ.ಜಿ. ಬಿಲ್ಲೋರ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯನ್ನು ಪಡೆದ ಮಂಗ ನಂತರ ಅಲ್ಲಿಂದ ಹೊರಟು ಹೋಯಿತು. ಈ ದೃಶ್ಯವನ್ನು ಕಂಡ ಸ್ಥಳೀಯರು ಹುಬ್ಬೇರಿಸಿದ್ದು, ಕೋತಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ.

Bagalkot, Monkey Visits Animal Hospital Due to bum Pain, Shows Hand to Doctor and Gets Treated.