ಬ್ರೇಕಿಂಗ್ ನ್ಯೂಸ್
20-05-25 10:49 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 20 : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ ಇತರ ಆರೋಪಿಗಳ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ಮೊದಲು ದೋಷಾರೋಪ ಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಹೆಸರಿಸಲಾಗಿತ್ತು. ಈಗ 10 ಮಂದಿ ಹೆಚ್ಚುವರಿ ಸಾಕ್ಷಿದಾರರ ಹೇಳಿಕೆ ದಾಖಲಿಸಲಾಗಿದೆ. ಜತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪೋಟೋಗಳ ಎಫ್ಎಸ್ಎಲ್ ವರದಿ ಹಾಗೂ ದೂರವಾಣಿ ಕರೆಗಳ ವಿವರ ಸೇರಿ ವಿವಿಧ ದಾಖಲೆಗಳನ್ನೊಳಗೊಂಡ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ನಟ ದರ್ಶನ್ ಕೋರ್ಟ್ಗೆ ಹಾಜರು
ಈ ನಧಿಡುವೆ, ಆರೋಪಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 16 ಮಂದಿ ಆರೋಪಿಗಳು ಮಂಗಳವಾರ ಸಿಸಿಎಚ್ 57ನೇ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿದ್ದರು. ಆರೋಪಿ ಪವನ್ ಗೈರಾಗಿದ್ದರು. ಹಾಜರಾತಿ ದಾಖಲಿಸಿಕೊಂಡು ನ್ಯಾಯಾಲಯ ಜುಲೈ 10ಕ್ಕೆ ವಿಚಾರಣೆ ಮುಂದೂಡಿತು.
ಸಿಆರ್ಪಿಸಿ 207 ರ ಅನ್ವಯ ಪೊಲೀಸರು, ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿಆರೋಪಿಗಳಿಗೆ ನೀಡಬೇಕು. ಆದರೆ, ಈ ಪ್ರಕರಣದಲ್ಲಿಹೆಚ್ಚುವರಿ ದೋಷಾರೋಪ ಪಟ್ಟಿ ನೀಡಿಲ್ಲ ಎಂದು ವಿವರಿಸಿದರು. ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಪೊಲೀಸರು ನೀಡಿದರು. ಆರೋಪಿ ನಟಿ ಪವಿತ್ರಾಗೌಡ ಕೆಲಸದ ಸಲುವಾಗಿ ಹೊರರಾಜ್ಯಕ್ಕೆ ತೆರಳಲು ಕೋರಿದ್ದ ಅನುಮತಿ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, 15 ದಿನ ಹೊರರಾಜ್ಯಕ್ಕೆ ಹೋಗಲು ಅನುಮತಿಸಿತು. ಅಷ್ಟೇ ಅಲ್ಲದೆ, ಪ್ರಕರಣದ 11ನೇ ಆರೋಪಿ ನಾಗರಾಜು ಬೇರೊಂದು ಪ್ರಕರಣದ ವಿಚಾರಣೆ ಸಲುವಾಗಿ ಹೊಸಪೇಟೆಗೆ ತೆರಳಲು ಅವಕಾಶ ನೀಡಿತು.
ದರ್ಶನ್ - ಪವಿತ್ರಾ ಮುಖಾಮುಖಿ!
ಹಲವು ತಿಂಗಳ ಬಳಿಕ ನಟ ದರ್ಶನ್ ಹಾಗೂ ಆಪ್ತ ಗೆಳತಿ ಪವಿತ್ರಾಗೌಡ ಮಂಗಳವಾರ ನ್ಯಾಯಾಲಯದಲ್ಲಿ ಮುಖಾಮುಖಿಯಾದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಟ್ಟಿಗೆ ಜೈಲು ಸೇರಿದ್ದ ಇಬ್ಬರೂ ಆರೋಪಿಗಳು ಜಾಮೀನು ಪಡೆದಿದ್ದರು. ನಟ ಧನ್ವೀರ್ ಹಾಗೂ ಅಂಗರಕ್ಷಕರ ಜತೆ ನಟ ದರ್ಶನ್ ನ್ಯಾಯಾಲಯಕ್ಕೆ ಆಗಮಿಸಿದ್ದರು. ಪವಿತ್ರಾಗೌಡ ತಮ್ಮ ವಕೀಲರ ಜತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯಾಯಾಲಯದ ಕಲಾಪ ಮುಗಿದ ಬಳಿಕ ಲಿಫ್ಟ್ನಲ್ಲಿ ಇಬ್ಬರೂ ಒಟ್ಟಿಗೆ ಜತೆಯಾಗಿ ಬಂದರು. ಈ ವೇಳೆ ಮುಖಾಮುಖಿಯಾಗಿದ್ದು ಸಣ್ಣ ನಗುವಿನಲ್ಲಿಯೇ ಉಭಯಕುಶಲೋಪರಿ ನಡೆಯಿತು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪವಿತ್ರಾಗೌಡ, ಹಠ ಮಾಡಿ ದರ್ಶನ್ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದ್ದು, ದರ್ಶನ್ ಅವರು ಪವಿತ್ರಾ ಮೊಬೈಲ್ ಪಡೆದು ನಂಬರ್ ನಮೂದಿಸಿ ಕೊಟ್ಟರು ಎನ್ನಲಾಗಿದೆ.
Sandalwood actor Darshan, accused in the Renukaswamy murder case, and Pavithra Gowda met each other while appearing before court on Tuesday.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am