ಬ್ರೇಕಿಂಗ್ ನ್ಯೂಸ್
20-05-25 03:30 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 20 : ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದ್ದು ಎಲ್ಲಿ ನೋಡಿದರೂ ನೀರೇ ನೀರು ಎನ್ನುವಂತಾಗಿದೆ. ಒಂದೇ ಮಳೆಗೆ ಬೆಂದಕಾಳೂರಿನ ಜನರು ತತ್ತರಿಸಿದ್ದು ಬೆಂದು ಹೋಗಿದ್ದಾರೆ.
ಭಾರೀ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿ ಅಂದಾಜು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. 20 ಕೆರೆಗಳು ಉಕ್ಕಿ ಹರಿದು ಆಸುಪಾಸಿನ ಬಡಾವಣೆಗಳನ್ನು ಜಲಾವೃತವಾಗಿಸಿವೆ. ಮಧುವನ ಅಪಾರ್ಟ್ಮೆಂಟ್, ಡಾಲರ್ಸ್ ಕಾಲೋನಿ, ಬಿಟಿಎಂ ಲೇಔಟ್ನಲ್ಲಿ ಮಳೆ ನೀರು ತುಂಬಿಕೊಂಡಿದೆ. ಮಳೆಯಿಂದಾಗಿ 63 ವರ್ಷದ ಮನಮೋಹನ್ ಕಾಮತ್, ಭದ್ರತಾ ಸಿಬ್ಬಂದಿ ಮಗ 12 ವರ್ಷದ ದಿನೇಶ್ ಸೇರಿ ಮೂವರು ಮೃತ ಮೃತಪಟ್ಟಿದ್ದಾರೆ.
ವರುಣನ ಆರ್ಭಟಕ್ಕೆ ಸಾಯಿ ಲೇಔಟ್ನ ಜನರು ಹೈರಾಣಾಗಿ ಹೋಗಿದ್ದಾರೆ. ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಶ್ವಾನಗಳು, ಹಸುಗಳು ಮಳೆ ನೀರಿನಲ್ಲಿ ಪರದಾಡುವ ಸ್ಥಿತಿ ಉಂಟಾಗಿದೆ. ಬಿಬಿಎಂಪಿ ಸಿಬ್ಬಂದಿ ಬೋಟ್ನಲ್ಲಿ ತೆರಳಿ ಮನೆಯಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುವುದರ ಜೊತೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ.
ನಂದಗೋಕುಲ ಲೇಔಟ್ನಲ್ಲೂ ಮಳೆ ಹೊಡೆತಕ್ಕೆ ಜನರು ಕುಸಿದು ಹೋಗಿದ್ದಾರೆ. ನಾಗವಾರ ಎಲಿಮೆಂಟ್ಸ್ ಮಾಲ್ ಎದುರು ನೀರು ನಿಂತು ಕೆರೆಯಂತಾಗಿದ್ದು ಜನರು ಓಡಾಡಲು ಪರದಾಡುತ್ತಿದ್ದಾರೆ. ಅಲ್ಲದೆ ನಗರದ ಪ್ರತಿಷ್ಠಿತ ಹೆಚ್ಎಸ್ಆರ್ ಲೇಔಟ್ನಲ್ಲೂ ಜಲಪ್ರವಾಹ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ಕಟ್ಟಡಗಳ ನೆಲ ಅಂತಸ್ತಿಗೆ ಮಳೆ ನೀರು ನುಗ್ಗಿದ್ದು, ನೆಲಮಹಡಿಯಲ್ಲಿರುವ ಕುಟುಂಬಗಳ ಸಂಕಷ್ಟಕ್ಕೀಡಾಗಿದ್ದಾರೆ. ಮೂರು ಜನರೇಟರ್, ಎರಡು ಬೈಕ್, ಇನ್ನಿತರ ಪ್ರಮುಖ ದಾಖಲೆಗಳು ನೀರುಪಾಲಾಗಿವೆ.
ದೀಪಿಕಾ ಲೇಔಟ್ನಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದ್ದು ಜನರು ನಲುಗಿ ಹೋಗಿದ್ದಾರೆ. ಮನೆ ವಸ್ತುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದು, ರಕ್ಷಣೆಗೆ ಜನ ಸುಸ್ತಾಗಿ ಹೋಗಿದ್ದಾರೆ. ಮಳೆಯಿಂದಾಗಿ ಹೆಣ್ಣೂರು ಕೂಡ ಜಲಾವೃತಗೊಂಡಿದೆ. ಮನೆ, ರಸ್ತೆ ಮಾತ್ರವಲ್ಲದೆ ಅನಾಥಾಶ್ರಮ ಕೂಡ ಜಲಾವೃತ ಆಗಿದೆ. ಅಡುಗೆ ಮನೆಗೂ ನೀರು ನುಗ್ಗಿದ್ದು ವೃದ್ಧ ಜನರ ಪರಿಸ್ಥಿತಿ ಕರಳು ಹಿಂಡುವಂತಿದೆ. ಜೊತೆಗೆ ಕೆಆರ್ ಸರ್ಕಲ್ ಕೂಡ ಜಲಾವೃತಗೊಂಡಿದ್ದು, ವಿಶ್ವೇಶ್ವರ್ ಕಾಲೇಜು ಬಳಿ ಬಸ್ಸ್ಟಾಂಡ್ ಧರಗೆ ಉರುಳಿದೆ. ಬೆಳಗ್ಗೆ ಈ ಘಟನೆ ನಡೆದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
Heavy downpour in Bengaluru for the past 36 hours threw life out of gear here on Tuesday as well. People were seen walking through knee-deep water and traffic jams were reported in many places. The rain-related toll went up to five in the state, officials said.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am