ಬ್ರೇಕಿಂಗ್ ನ್ಯೂಸ್
13-05-25 01:14 pm HK News Desk ಕರ್ನಾಟಕ
ವಿಜಯಪುರ, ಮೇ 13 : ಕದನ ಘೋಷಣೆ ಮಾಡಿದಾಗ ನಮ್ಮ ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. ಪಾಕಿಸ್ತಾನ ಇನ್ನೊಮ್ಮೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು, ಹಾಗೆ ಪಾಠ ಕಲಿಸಬೇಕು ಎಂದು ಬೆಂಬಲಿಸಿದ್ದೇವು. ಯಾವ ಉದ್ದೇಶ ಗುರಿ ಇಟ್ಟುಕೊಂಡು ಕದನ ಆರಂಭ ಮಾಡಿದ್ದೆವೋ ಆ ಗುರಿ ಈಡೇರಿತಾ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕ್ ಜೊತೆಗೆ ಕದನ ವಿರಾಮ ವಿಚಾರದಲ್ಲಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಅಂದುಕೊಂಡಿದ್ದೆವೋ ಆ ಪಾಠ ಈಡೇರಿತಾ ಎಂಬ ಪ್ರಶ್ನೆ ಇದೆ. ಮೂರ್ನಾಲ್ಕು ದಿನ ಪ್ರಯತ್ನ ಮಾಡಿ ಅಲ್ಲಿಗೆ ಬಿಟ್ಟರೆ ಪಾಕಿಸ್ತಾನಕ್ಕೆ ಇನ್ನಷ್ಟು ಇಂಬು ಕೊಟ್ಟಂತಾಗುತ್ತದೆ ಎಂಬುದು ಅನುಮಾನ ಹುಟ್ಟಲು ಶುರುವಾಗುತ್ತೆ. ಸ್ಪಷ್ಟವಾದ ಉತ್ತರ ಇಲ್ಲದ ಪ್ರಶ್ನೆ ಎಂದರೆ ನಾವು ಕದನ ಮಾಡುವುದು ಸರಿ. ಅರ್ಧಕ್ಕೆ ನಿಲ್ಲಿಸುವುದು ಏಕೆನ್ನುವುದಕ್ಕೆ ಉತ್ತರ ಇಲ್ಲ.
ನಮ್ಮ ಆಂತರಿಕ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಬೆರಳು ತೋರಿಸುತ್ತಾರೆ. ಅಮೇರಿಕಾದವರು ಹೇಳಿದು ಅಂತೇಳಿ ಯುದ್ದ ನಿಲ್ಲಿಸುವುದಾ..? ಅಮೇರಿಕಾ ನಮ್ಮ ಆಂತರಿಕ ವಿಚಾರ ತೀರ್ಮಾನ ಮಾಡುವುದಾದರೆ ನಮ್ಮ ಸಾರ್ವಭೌಮತ್ವದ ವಿಷಯ ಏನು..?
ಕಾಶ್ಮೀರದ ವಿಚಾರದಲ್ಲಿ ಅಮೇರಿಕಾದವರು ಮದ್ಯಸ್ಥಿಕೆ ವಹಿಸುತ್ತೇವೆ ಅಂತಾರೆ. ಇದಕ್ಕಿಂತ ಭಾರತಕ್ಕೆ ದೊಡ್ಡ ಹಿನ್ನಡೆಯಿಲ್ಲ. ಇದು ಆಂತರಿಕ ವಿಚಾರ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಬೇರೆ ದೇಶದವರು ಬಂದು ನಮ್ಮ ಆಂತರಿಕ ವಿಚಾರದಲ್ಲಿ ನ್ಯಾಯ ಪಂಚಾಯತಿ ಮಾಡಿದರೆ ಅಲ್ಲಿಗೆ ಕಾಶ್ಮೀರ ಸಮಸ್ಯೆ ಮುಗಿದು ಹೋಗುತ್ತಾ ಅಥವಾ ಮರಳಿ ಸಮಸ್ಯೆ ಆರಂಭ ಆಗುತ್ತಾ....? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲದಂತೆ ಆಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ಉತ್ತರ ಕೊಡಬೇಕು ಎಂದು ಸಚಿವ ಕೃಷ್ಣಭೈರೇಗೌಡ ಆಗ್ರಹಿಸಿದ್ದಾರೆ.
After going to war, there should have been a logical end. Instead, how about stopping the conflict as soon as America says so? Minister Krishna Byre Gowda has questioned the central government whether all our objectives have been fulfilled due to this ceasefire.
26-08-25 02:04 pm
Bangalore Correspondent
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am